ಸಿದ್ದುಗೆ ಗುದ್ದಿದ MTB;ವಿಶ್ವದ ಗಮನ ಸೆಳೆದಿದೆ ಹೌಡಿ ಮೋದಿ; ಇಲ್ಲಿವೆ ಸೆ.22ರ ಟಾಪ್ 10 ಸುದ್ದಿ!

Published : Sep 22, 2019, 05:00 PM IST
ಸಿದ್ದುಗೆ ಗುದ್ದಿದ MTB;ವಿಶ್ವದ ಗಮನ ಸೆಳೆದಿದೆ ಹೌಡಿ ಮೋದಿ; ಇಲ್ಲಿವೆ ಸೆ.22ರ ಟಾಪ್ 10 ಸುದ್ದಿ!

ಸಾರಾಂಶ

ಅಮೆರಿಕಾದ ಹೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಬೃಹತ್ ಸಮಾವೇಶ ಇದೀಗ ವಿಶ್ವದ ಗಮನಸೆಳೆದಿದೆ. ಮೋದಿ ಕಾರ್ಯಕ್ರಮಕ್ಕೆ ಕಾತರ ಹೆಚ್ಚಾಗಿದೆ. ಇತ್ತ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅನರ್ಹ ಶಾಸಕ ಎಂ.ಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಭಾಪೂಂಜಾ ಹೊಸ ಮೂವಿ, ರಾಜ್ಯದಲ್ಲಿ ಮಳೆ ಅಲರ್ಟ್ ಸೇರಿದಂತೆ ಸೆ.22ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

1) ಸಿದ್ದು ಪುತ್ರ ರಾಕೇಶ್ ಸಾವಿಗೆ ಆ 'ಬಚ್ಚಾ' ಕಾರಣ!: ಎಂಟಿಬಿ ಬಾಯ್ಬಿಟ್ಟ ಸತ್ಯ!

ಕರ್ನಾಟಕ ಉಪ ಚುನಾವಣೆಗೆ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ರಾಜಕೀಯ ನಾಯಕರ ಮಾತಿನ ಯುದ್ಧ ಜೋರಾಗಿದೆ. ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯರ ಶಿಷ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಾಂಗ್ರೆಸ್ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ. ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿನ ವಿಚಾರವಾಗಿಯೂ ಬಾಯ್ಬಿಟ್ಟಿದ್ದಾರೆ.


2) 15 ದಿನದೊಳಗೆ ಡಿಕೆಶಿಗೆ ಬಿಡುಗಡೆ ಭಾಗ್ಯ..!

ಮೊಹರಂ ಕೌಡಿ ಪೀರ್ ವಿಸರ್ಜನೆ ವೇಳೆ ಡಿಕೆಶಿ ಬಿಡುಗಡೆ ಕುರಿತು ಕೇಳಿದ ಪ್ರಶ್ನೆಗೆ ದೇವರು ಹೊತ್ತವರು ಉತ್ತರಿಸಿದ್ದಾರೆ. ಹೌದು ಕೊಪ್ಪಳದ ಕನಕಗಿರಿಯಲ್ಲಿ‌ ಘಟನೆ ಈ ಘಟನೆ ನಡೆದಿದ್ದು, ಸ್ಥಳೀಯರು ಡಿಕೆಶಿಗೆ ಬಿಡುಗಡೆ ಯಾವಾಗ ಎಂದು ದೇವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ದೇವರು ಹೊತ್ತ ವ್ಯಕ್ತಿ ಇನ್ನೂ ಹದಿನೈದು‌ ದಿನಗೊಳಗಾಗಿ ಡಿಕೆಶಿ ಬಿಡುಗಡೆ ಆಗುತ್ತಾರೆ ಎಂದು ಹೇಳಿದ್ದಾರೆ


3) ವಿಶೇಷ ಚೇತನ ಬಾಲಕನಿಂದ ಜನಗಣಮನ: ಹೌಡಿ ಮೋದಿಯಲ್ಲಿ ಈತನದ್ದೇ ಗುಣಗಾನ!

ಹೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೋದಿ ಈಗಾಗಲೇ ಅಮೆರಿಕಾ ತಲುಪಿದ್ದು, ಈ ಕಾರ್ಯಕ್ರಮ ಇಡೀ ವಿಶ್ವದ ಗಮನ ಸೆಳೆದಿದೆ. ಸದ್ಯ ಇದಕ್ಕೂ ಇಂಟರೆಸ್ಟಿಂಗ್ ವಿಚಾರವೆಂದರೆ ಇಂದು ರಾತ್ರಿ ಹೂಸ್ಟನ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 16 ವರ್ಷದ ಭಾರತೀಯ ಮೂಲಕದ ಬಾಲಕನೊಬ್ಬ 50ಸಾವಿರ ಮಂದಿಯೆದುರು ರಾಷ್ಟ್ರಗೀತೆ ಹಾಡಲಿದ್ದಾನೆ. 

4) ವಾಯುಭಾರ ಕುಸಿತ : ರಾಜ್ಯದ ಹಲವೆಡೆ ಮತ್ತೆ ಭಾರೀ ಮಳೆ

ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 


5) ಭಾರತ-ದ.ಆಫ್ರಿಕಾ ಪಂದ್ಯ : ಬಿಎಂಟಿಸಿ ಹೆಚ್ಚುವರಿ ಬಸ್‌

ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಸೆ.22)ರಂದು ಸಂಜೆ 7ಕ್ಕೆ ನಿಗದಿಗೊಂಡಿರುವ ಭಾರತ-ದಕ್ಷಿಣ ಆಫ್ರಿಕಾ ಟಿ-20 ಕ್ರಿಕೆಟ್‌ ಪಂದ್ಯದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್‌ ಕಾರ್ಯಾಚರಣೆಗೊಳಿಲು ಮುಂದಾಗಿದೆ.


6) ಖಾಲಿದೋಸೆ ಕಲ್ಪನಾ’ ಆದ ಮೊಗ್ಗಿನ ಮನಸು ಶುಭಾ ಪೂಂಜಾ


ಮೊಗ್ಗಿನ ಮನಸು ಶುಭಾ ಪೂಂಜಾ ಕಳೆದೋ ಹೋಗಿದ್ದಾರೆ. ಬಹಳ ಸಮಯದ ಬಳಿಕ ಮತ್ತೆ ಸಿನಿಮಾಗೆ ವಾಪಸ್ಸಾಗಿದ್ದಾರೆ. ‘ಖಾಲಿದೋಸೆ ಕಲ್ಪನಾ’ ಎನ್ನುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

7) ಉಪ್ಪಿಯನ್ನು ಕಾಪಿ ಮಾಡಿದ ಬಾಲಿವುಡ್ ಗಲ್ಲಿ ಬಾಯ್

ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ಸ್ಟೈಲ್, ಮ್ಯಾನರಿಸಂ, ಡೈಲಾಗ್ ನಿಂದ ಗಮನ ಸೆಳೆದಿದ್ದಾರೆ. ಉಪ್ಪಿ ಹೇರ್ ಸ್ಟೈಲನ್ನು ಬಾಲಿವುಡ್ ಸ್ಟಾರ್ ಕಾಪಿ ಮಾಡಿದ್ದಾರೆ. ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಉಪ್ಪಿ ಹೇರ್ ಸ್ಟೈಲ್, ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಳ್ಳೋ ಮೂಲಕ  ಶೈಲಿ ಕಾಪಿ ಮಾಡಿದ್ದಾರೆ.

8) ಸಾವಿರಾರು ಬೆಸ್ಕಾಂ ಮೀಟರ್‌ ರೀಡರ್‌ ಕೆಲಸಕ್ಕೆ ಕುತ್ತು?

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್‌ ಸರಬರಾಜು ಸಂಸ್ಥೆಯು ಬೆಂಗಳೂರಿನ ಚಂದಾಪುರದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ಸ್ಮಾರ್ಟ್‌ ವಿದ್ಯುತ್‌ ಮೀಟರ್‌ ಯೋಜನೆ ಭಾಗಶಃ ಯಶಸ್ವಿಯಾಗಿದ್ದು, ಇದೀಗ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಬೆಸ್ಕಾಂನ ಇತರೆಡೆ ಅನುಷ್ಠಾನಗೊಂಡರೆ ಸಾವಿರಾರು ಮಂದಿ ವಿದ್ಯುತ್‌ ಮೀಟರ್‌ ರೀಡರ್‌ಗಳು (ವಿದ್ಯುತ್‌ ಮಾಪನ ಓದುಗ) ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.

9) ಅಳು ತಡೆಯಲಾಗಲಿಲ್ಲ, ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ!

ದೇಶದ ದಿಗ್ಗಜ ಉದ್ಯಮಿ ಆನಂದ್ ಮಹೀಂದ್ರಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ಕತ್ ಆ್ಯಕ್ಟಿವ್ ಆಗಿರುತ್ತಾರೆ. ಅವರು ಮಾಡುವ ಟ್ವೀಟ್ ಗಳ ಹಲವರು ಗಮನ ಸೆಳೆಯುತ್ತವೆ. ಆದರೆ ಈ ಬಾರಿ ಅವರು ಟ್ವೀಟ್ ಮಾಡಿರುವ ವಿಡಿಯೋ ಒಂದು ಕಲ್ಲಿನಂತಹ ಮನಸ್ಸನ್ನೂ ಭಾವುಕರನ್ನಾಗಿಸುತ್ತದೆ. 


10) ಹೆಲ್ಮೆಟ್ ಧರಿಸದಿದ್ದರೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಹಾಕಬೇಡಿ

ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಹಾಕಬಾರದೆಂದು ನಗರದ ಎಲ್ಲ ಪೆಟ್ರೋಲ್ ಬಂಕ್ ಮಾಲೀಕರಿಗೆ ತಿಳಿಸಲಾಗಿದೆ. ಇನ್ಮುಂದೆ ಹೆಲ್ಮೆಟ್ ಹಾಕದೆ  ಹೋದರೆ ಪೆಟ್ರೋಲ್ ಬಂಕ್‌ ಎಂಟ್ರಿಗೂ ಅವಕಾಶವಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!