
ಇಸ್ಲಾಮಾಬಾದ್(ಸೆ.22): ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೋದಲ್ಲಿ ಬಂದಲ್ಲಿ ಅಪಹಾಸ್ಯಕ್ಕೀಡಾಗುವುದು ಸಾಮಾನ್ಯ ಸಂಗತಿ. ಆದರೆ ಇಮ್ರಾನ್ ಇತ್ತೀಚಿಗೆ ಪಾಕಿಸ್ತಾನೀಯರಿಂದಲೇ ಟ್ರೋಲ್’ಗೆ ಒಳಗಾಗುತ್ತಿದ್ದಾರೆ.
ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ಬಂದಿಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ಮೋದಿಯ ಅವರಿಗೆ ಸಿಕ್ಕ ಸ್ವಾಗತದ ವ್ಯತ್ಯಾಸದ ಕುರಿತು ಪಾಕಿಸ್ತಾನೀಯರು ಇಮ್ರಾನ್ ಅವರನ್ನು ಟ್ರೋಲ್ ಮಾಡಿದ್ದಾರೆ.
ಭಾರತದ ಪ್ರಧಾನಿ ಮೋದಿ ಅವರನ್ನು ವ್ಯಾಪಾರ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ನಿರ್ದೇಶಕ ಕ್ರಿಸ್ಟೊಫರ್ ಒಲ್ಸೊನ್, ಭಾರತಕ್ಕೆ ಅಮೆರಿಕದ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ಇತರ ಹಿರಿಯ ಅಧಿಕಾರಿಗಳು ಬರಮಾಡಿಕೊಂಡಿದ್ದರು.
ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ವಿಶ್ವಸಂಸ್ಥೆ ರಾಯಭಾರಿ ಮಲೀಹಾ ಲೊದಿ ಹಾಗೂ ಕೆಲವು ಕಿರಿಯ ಪಾಕ್ ವಿದೇಶಾಂಗ ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ.
ಈ ಇಬ್ಬರೂ ನಾಯಕರ ಸ್ವಾಗತದ ವಿಡಿಯೋ ಶೇರ್ ಮಾಡಿರುವ ಪಾಕ್ ನಾಗರಿಕ ಜಾವೇದ್ ಇಕ್ಬಾಲ್ ಎಂಬಾತ, ಎಲೆಕ್ಟೆಡ್ VS ಸೆಲೆಕ್ಟೆಡ್ ಪ್ರಧಾನಿ ನಡುವಿನ ವ್ಯತ್ಯಾಸ ಎಂದು ಟ್ರೋಲ್ ಮಾಡಿದ್ದಾನೆ.
ಜಾವೇದ್ ಇಕ್ಬಾಲ್ ಮಾಡಿರುವ ಟ್ರೋಲ್ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕೆಲವು ಪಾಕಿಸ್ತಾನೀಯರು ಇಕ್ಬಾಲ್‌ನನ್ನು ಬೆಂಬಲಿಸಿದ್ದರೆ ಮತ್ತೆ ಕೆಲವರು ಜರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.