ಬೆಂಗ್ಳೂರಲ್ಲಿ ಧೋನಿ ಪ್ರತ್ಯಕ್ಷ, ಪೌರತ್ವ ಮಸೂದೆಗೆ ರಾಷ್ಟ್ರಪತಿ ಅಂಕಿತ; ಡಿ.13ರ ಟಾಪ್ 10 ಸುದ್ದಿ!

By Web Desk  |  First Published Dec 13, 2019, 6:29 PM IST

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ  ದಿಢೀರ್ ಬೆಂಗಳೂರಲ್ಲಿ ಪ್ರತ್ಯಕ್ಷವಾಗಿದ್ದಾರೆ. ಧೋನಿ ನೋಡಿದ ಅಭಿಮಾನಿಗಳ ಸಂತಸದಲ್ಲಿ ತೇಲಾಡಿದ್ದಾರೆ. ಭಾರಿ ವಿರೋಧದ ನಡುವೆಯೂ ಪೌರತ್ವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಸಿಎಂ ಯಡಿಯೂರಪ್ಪಗೆ ಸಂಪುಟ ವಿಸ್ತರಣೆ ತಲೆನೋವು ಹೆಚ್ಚಾಗುತ್ತಿದ್ದಂತೆ, ಹೊಸ ಸಂಕಷ್ಟ ಎದುರಾಗಿದೆ. ಬಿಜೆಪಿ ನಾಯಕ ಇದೀಗ ಮುಖ್ಯಮಂತ್ರಿ ಸ್ಥಾನವೇ ನೀಡಿ ಎಂದು ಹಠ ಹಿಡಿದಿದ್ದಾರೆ. ಡಿಸೆಂಬರ್ 13ರ ಟಾಪ್ 10 ಸುದ್ದಿಗಳ ಇಲ್ಲಿವೆ.


1) ಪೌರತ್ವ ಮಸೂದೆಗೆ ರಾಷ್ಟ್ರಪತಿ ಅಂಕಿತ: ಇಂದಿನಿಂದಲೇ ಕಾನೂನು ಜಾರಿ!

Tap to resize

Latest Videos

undefined

ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಮೂಲಕ ಸಂಸತ್ತಿನಲ್ಲಿ ಅನುಮೋದನೆಗೊಂಡಿದ್ದ ಪೌರತ್ವ ವಿಧೇಯಕ 2019 ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದಿದೆ. 

2) ರಾಜ್ಯದಲ್ಲಿ 4ನೇ ಶನಿವಾರ ರಜೆ ರದ್ದು : ಯಾರಿಗೆ ಅನ್ವಯ ?

ತಿಂಗಳ ನಾಲ್ಕನೇ ಶನಿವಾರದ ದಿನ ಸಾರ್ವತ್ರಿಕ ರಜೆ ಎಂದು ಘೋಷಿಸಿತ್ತು. ಇದೀಗ ಈ ಅಧಿಸೂಚನೆಯನ್ನು ಮಾರ್ಪಡಿಸಿ ಕರ್ನಾಟಕ ಹೈಕೋರ್ಟ್‌, ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳು ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ನೌಕರರ ರಜೆ ರದ್ದುಗೊಳಿಸಲಾಗಿದೆ.

3) ನಿರ್ಭಯಾ ಹತ್ಯಾಚಾರಿಗಳ ಗಲ್ಲು ಮುಂದಕ್ಕೆ: ಡಿ. 18ಕ್ಕೆ ಅರ್ಜಿ ವಿಚಾರಣೆ!

ನಿರ್ಭಯಾ ಅತ್ಯಾಚಾರ ದೋಷಿಗಳ ಗಲ್ಲುಶಿಕ್ಷೆಗೆ ದಿನಗಣನೆ ಆರಂಭವಾಗಿತ್ತು. ಹೀಗಿರುವಾಗಲೇ ಪಟಿಯಾಲಾ ಹೈಕೋರ್ಟ್‌ನಲ್ಲಿ ನಿರ್ಭಯಾ ಪ್ರಕರಣ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಅರ್ಜಿ ವಿಚಾರಣೆಯನ್ನು ಡಿ. 18ಕ್ಕೆ ಮುಂದೂಡಿದೆ. ಈ ಮೂಲಕ ಡಿ. 16 ರಂದು ನಾಲ್ವರಿಗೂ ಆಗಬೇಕಿದ್ದ ಗಲ್ಲು ಶಿಕ್ಷೆ ಮತ್ತೆ ಮುಂದಕ್ಕೋಗಿದೆ,. 

4) ಡಿಸಿಎಂ ಹುದ್ದೆ ಒಪ್ಪಲ್ಲ, ನಾನು ಸಿಎಂ ಆಕಾಂಕ್ಷಿ: ಬಿಜೆಪಿಗನ ಹೊಸ ವರಸೆ!

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಗೆ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲೇ ಬಿಜೆಪಿ ಹಿರಿಯ ಶಾಸಕ ಉಮೇಶ್‌ ಕತ್ತಿ ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ವರಸೆ ತೆಗೆದಿದ್ದಾರೆ.

5) ಬೆಂಗಳೂರಿನಲ್ಲಿ ಧೋನಿ ಪ್ರತ್ಯಕ್ಷ; ಎಕ್ಸಾನ್ ವಸ್ತು ಪ್ರದರ್ಶನ ಉದ್ಘಾಟಿಸಿದ ಕ್ರಿಕೆಟಿಗ

ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ, ಸುದೀರ್ಘ ವಿಶ್ರಾಂತಿಗೆ ಜಾರಿದ್ದಾರೆ. ಧೋನಿ ಆಟವನ್ನು ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಧೋನಿ, ಬೆಂಗಳೂರು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ನೆಲಮಂಗಲದಲ್ಲಿ ನಡೆಯುತ್ತಿರುವ ಎಕ್ಸಾನ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ. 

6) ದರ್ಶನ ಅಭಿನಯದದ ಒಡೆಯ ಚಿತ್ರ ಹೇಗಿದೆ; ಚಿತ್ರ ವಿಮರ್ಶೆ!

ದರ್ಶನದ ಅಭಿನಯದ ಒಡೆಯ ಚಿತ್ರ ಎಲ್ಲರ ಕತೂಹಲ ಕೆರಲಿಸಿದೆ. ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರದ ವಿಮರ್ಶೆ ಇಲ್ಲಿದೆ.  

7) ಇದಲ್ಲ ಬೋಗಸ್: ನೌಕರರಿಗೆ ತಲಾ 30 ಲಕ್ಷ ರೂ. ಬೋನಸ್!...

ಅಮೆರಿಕದ ಕಂಪನಿಯೊಂದು ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ತನ್ನ ಸಿಬ್ಬಂದಿಗೆ ಬರೋಬ್ಬರಿ 35.50 ಲಕ್ಷ ರೂ. ಬೋನಸ್ ನೀಡಿದೆ. ಬೋನಸ್‌ಗಾಗಿಯೇ ಈ ಕಂಪನಿ ಬರೋಬ್ಬರಿ 71 ಕೋಟಿ ರೂ. ತೆಗೆದಿರಿಸಿದೆ.

8) ಉಪಚುನಾವಣೆ ಸೋಲಿನ ಬೆನ್ನಲ್ಲೇ ಪಕ್ಷ ಬಿಡುವ ಮಾತಾಡಿದ ಜೆಡಿಎಸ್ ಪ್ರಭಾವಿ ಮುಖಂಡ

ರಾಜ್ಯದಲ್ಲಿ ಉಪ ಚುನಾವಣೆ ನಡೆದು ಜೆಡಿಎಸ್ ಹೀನಾಯ ಸೋಲು ಕಂಡ ಬೆನ್ನಲ್ಲೇ ಜೆಡಿಎಸ್ ಪ್ರಭಾವಿ ಮುಖಂಡರೋರ್ವರು ಪಕ್ಷ ಬಿಡುವ ಮಾತನಾಡಿದ್ದಾರೆ. 

9) ಬ್ಯಾಟಿಂಗ್ ಗಮನ ಹರಿಸಲು ಹೇಳಿದ್ರೆ, ಊರ್ವಶಿ ಜೊತೆ ಡೇಟಿಂಗ್ ಮಾಡಿದ್ರಾ ಪಂತ್?

ವಿಕೆಟ್ ಕೀಪರ್ ರಿಷಬ್ ಪಂತ್‌‍ಗೆ ಅವಕಾಶದ ಮೇಲೆ ಅವಕಾಶ ಸಿಗುತ್ತಿದೆ. ಆದರೆ ಪ್ರದರ್ಶನ ಮಾತ್ರ ರಾಯರ ಕುದುರೆ ಕತ್ತೆಯಾದಂತಿದೆ. ಪಂದ್ಯದಿಂದ ಪಂದ್ಯಕ್ಕೆ ಪಂತ್ ಲಯ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಪಂತ್ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ಕಾರಣ ಬಹಿರಂಗವಾಗಿದೆ. 

10) ಕಲಬುರಗಿ: ಪ್ರೇಮ ಪ್ರಕರಣಕ್ಕೆ ಬಲಿಯಾಯ್ತಾ ಐದು ವರ್ಷದ ಪುಟ್ಟ ಮಗು?...

ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷದ ಬಾಲಕಿ ಬಲಿಯಾದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಹಾವನೂರು ಗ್ರಾಮದಲ್ಲಿ ಘಟನೆ ಇಂದು(ಶುಕ್ರವಾರ) ನಡೆದಿದೆ. ಮೃತ ಬಾಲಕಿಯನ್ನು ಶ್ವೇತಾ(5) ಎಂದು ಗುರುತಿಸಲಾಗಿದೆ.

click me!