ಪೌರತ್ವ ತಿದ್ದುಪಡಿ ಕಾಯ್ದೆಗೆ ಈಶಾನ್ಯ ರಾಜ್ಯಗಳ ವಿರೋಧ| ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ| ಪ್ರತಿಭಟನಾಕಾರರ ಹಿಂಸಾಚಾರಕ್ಕೆ ನಲುಗಿರುವ ಈಶಾನ್ಯ ರಾಜ್ಯಗಳು| ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಮೇಘಾಲಯ ಪ್ರವಾಸ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವ| ಅಮಿತ್ ಶಾ ಶಿಲ್ಲಾಂಗ್’ನ ಈಶಾನ್ಯ ಭಾಗದ ಪೊಲೀಸ್ ಅಕಾಡಮಿ ಭೇಟಿಗೆ ಬ್ರೇಕ್|
ನವದೆಹಲಿ(ಡಿ.13): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳು ಹಿಂಸಾಚಾರಕ್ಕೆ ನಲುಗಿವೆ.
ಈ ಹಿನ್ನೆಲೆಯಲ್ಲಿ ಇದೇ ಭಾನುವಾರ(ಡಿ.15) ಮೇಘಾಲಯದ ರಾಜಧಾನಿ ಶಿಲ್ಲಾಂಗ್’ಗೆ ಭೇಟಿ ನೀಡಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ತೀವ್ರ ಪ್ರತಿಭಟನೆಯ ಕಾರಣಕ್ಕೆ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಪೌರತ್ವ ಕಾಯ್ದೆ: ಸುಪ್ರೀಂ ಕದ ತಟ್ಟಿದ ಕಾಂಗ್ರೆಸ್!
Ministry of Home Affairs sources: Home Minister Amit Shah's Shillong program cancelled. He was scheduled to visit North East Police academy on Sunday. pic.twitter.com/echg1Af5Fn
— ANI (@ANI)ಶಿಲ್ಲಾಂಗ್’ನಲ್ಲಿರುವ ಈಶಾನ್ಯ ಭಾಗದ ಪೊಲೀಸ್ ಅಕಾಡಮಿಗೆ ಇದೇ ಭಾನುವಾರ ಅಮಿತ್ ಶಾ ಭೇಟಿ ನೀಡಲಿದ್ದರು. ಆದರೆ CAB ವಿರುದ್ಧದ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಅಮಿತ್ ಶಾ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.
ಪೌರತ್ವ ಮಸೂದೆಗೆ ರಾಷ್ಟ್ರಪತಿ ಅಂಕಿತ: ಇಂದಿನಿಂದಲೇ ಕಾನೂನು ಜಾರಿ!
ಶಿಲ್ಲಾಂಗ್’ನಲ್ಲಿ ಈಗಾಗಲೇ ಕರ್ಫ್ಯೂ ವಿಧಿಸಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಇಂಟರ್’ನೆಟ್ ಸ್ಥಗಿತಗೊಳಿಸಲಾಗಿದೆ.