ಬಿಟ್ಟು ಬಿಡಿ ಎಂದು ಕಣ್ಣೀರಿಟ್ಟ ನಲಪಾಡ್, ಪೂಜಾ ಹೆಗಡೆ ಕೈಹಿಡಿದ ಬಾಲಿವುಡ್; ಫೆ,12ರ ಟಾಪ್ 10 ಸುದ್ದಿ!

By Suvarna News  |  First Published Feb 12, 2020, 4:53 PM IST

ಕಾರು ಅಪಘಾತದ ಬಳಿಕ ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಇದೀಗ ದಿಢೀರ್ ಪ್ರತ್ಯಕ್ಷವಾಗಿ ನನ್ನ ಬಿಟ್ಟು ಬಿಡಿ, ನಾನು ಒಳ್ಳೆಯವನಾಗಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ. ಇತ್ತ ಕರ್ನಾಟಕ ಬಂದ್‌ ದಿನ ಏನಿರುತ್ತೆ? ಏನಿರಲ್ಲ ಅನ್ನೋ ಆತಂಕ ಎಲ್ಲರನ್ನು ಕಾಡುತ್ತಿದೆ. ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಮಂಗಳೂರು ಬೆಡಗಿ ಪೂಜಾ ಹೆಗಡೆ ಇದೀಗ ಸಲ್ಮಾನ್ ಖಾನ್‌ಗೆ ನಾಯಕಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಡೋನಾಲ್ಡ್ ಟ್ರಂಪ್, ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸರಣಿ ಸೇರಿದಂತೆ ಫೆಬ್ರವರಿ 12ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ. 


24, 25ರಂದು ಭಾರತಕ್ಕೆ ಟ್ರಂಪ್‌, ಪತ್ನಿ ಜೊತೆ ದಿಲ್ಲಿ, ಅಹಮದಾಬಾದ್‌ ಟೂರ್!...

Tap to resize

Latest Videos

undefined

ಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಫೆಬ್ರವರಿ 24ರಿಂದ 2 ದಿನ ಭಾರತಕ್ಕೆ ಭೇಟಿ ನೀಡಲಿದ್ದಾರೆ. ನವದೆಹಲಿ ಹಾಗೂ ಅಹಮದಾಬಾದ್‌ಗೆ ಅವರು ಪ್ರವಾಸ ಕೈಗೊಳ್ಳಲಿದ್ದಾರೆ. ಟಂಪ್‌ ಅವರು ಫೆ.24 ಹಾಗೂ 25ರಂದು ಅವರು ಭಾರತ ಪ್ರವಾಸ ಕೈಗೊಳ್ಳುವ ವೇಳೆ ಪತ್ನಿ ಮೆಲಿಂಡಾ ಟ್ರಂಪ್‌ ಕೂಡ ಇರಲಿದ್ದಾರೆ.

‘ಹಗ್ ಡೇ’ಗೆ ಕಾಂಗ್ರೆಸ್ ವಿಡಿಯೋ: ಮೋದಿ ಸೈಲೆಂಟ್ ಆದ್ರು ನೋಡಿಯೋ ನೋಡದೆಯೋ!

ಅಂತಾರಾಷ್ಟ್ರೀಯ ಅಪ್ಪುಗೆ ದಿನದ ಅಂಗವಾಗಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರನ್ನು ಅಪ್ಪಿದ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅಪ್ಪುಗೆ ದಿನದಂದು ಬಿಜೆಪಿಗೆ ಪ್ರೀತಿಯ ಸಂದೇಶ ಕಳುಹಿಸಲು ನಾವು ಬಯಸುತ್ತೇವೆ ಎಂದಿದೆ.

ಬೆಂಟ್ಲಿ ಕಾರಿಗೆ ಬೆಚ್ಚಿಬಿದ್ದ ಗನ್‌ಮ್ಯಾನ್; ವಿಚಾರಣೆಯಲ್ಲಿ ಹೇಳಿದ ಇದಕ್ಕೆ ಕಾರಣ ನಲಪಾಡ್!

ಶಾಂತಿನಗರ MLA ಎನ್ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್  ಕಾರು ಅಪಘಾತ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ ಗನ್‌ಮ್ಯಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಾರು ಅಪಘಾತವಾದಾಗ ಡ್ರೈವ್ ಮಾಡಿದ್ದು ನಾನೇ ಎಂದು ಠಾಣೆಗೆ ಬಂದ ನಲಪಾಡ್ ಗನ್‌ಮ್ಯಾನ್ ಬಾಯಿಯಿಂದ ಪೊಲೀಸರು ಸತ್ಯಹೊರಹಾಕಿದ್ದಾರೆ. ಪೊಲೀಸರ ಐಡಿಯಾಗೆ ಸುಲಭವಾಗಿ ಗನ್‌ಮ್ಯಾನ್ ತಪ್ಪೊಪ್ಪಿಕೊಂಡಿದ್ದಾನೆ.

ಮಹಿಳೆ ಸೊಂಟ ಮುಟ್ಟಿದ ಪೊಲೀಸಪ್ಪನಿಗೆ ಬಿಸಿ ಬಿಸಿ ಕಜ್ಜಾಯ!

ಬಸ್‌ನಲ್ಲಿ ಪೊಲೀಸಪ್ಪನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಥಳಿತಕ್ಕೊಳಗಗಿದ್ದಾನೆ.  ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ತೆರಳುತ್ತಿದ್ದ ಚಲಿಸುತ್ತಿದ್ದ ಬಸ್‌ನಲ್ಲಿ ಪೊಲೀಸಪ್ಪನೊಬ್ಬ ಮುಂದಿನ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆ ಸೊಂಟ ಮುಟ್ಟಿದ್ದಾನೆ. 

ಕರ್ನಾಟಕ ಬಂದ್: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

ಕರ್ನಾಟಕ ಬಂದ್‌ನಿಂದ ಶಾಲಾ ಕಾಲೇಜುಗಳ ಕತೆ ಏನು? ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾ? ಎಂಬ ಚಿಂತೆ ಪೋಷಕರದ್ದಾಗಿದೆ. ಆದರೀಗ ಈ ಚಿಂತೆಗೆ ತೆರೆ ಬಿದ್ದಿದ್ದಾರೆ. ಈ ಕುರಿತು  ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಮತ್ತೆ ನಿರ್ಭಯಾ ದೋಷಿ ಪೀಕಲಾಟ, ರಾಷ್ಟ್ರಪತಿ ವಿರುದ್ಧ ಸುಪ್ರೀಂಗೆ ಅರ್ಜಿ!

ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿಗಳ ಪೈಕಿ ಒಬ್ಬನಾದ ವಿನಯ್‌ ಶರ್ಮಾ, ರಾಷ್ಟ್ರಪತಿಗಳು ತನ್ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾನೆ.

ಸಲ್ಮಾನ್‌ ಖಾನ್‌ ಜೊತೆಯಾದ ಕುಡ್ಲ ಬೆಡಗಿ ಪೂಜಾ ಹೆಗಡೆ

ಪೂಜಾ ಹೆಗೆಡೆ ಕರ್ನಾಟಕದವರು. ಆದರೆ, ಕನ್ನಡ ಚಿತ್ರದಲ್ಲಿನ್ನೂ ಕಾಣಿಸಿಕೊಂಡಿಲ್ಲ. ಮೊಹೆಂಜಾದಾರೋ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ನಟಿಸಿದ ಪೂಜಾಗೆ ತೆಲಗು ಚಿತ್ರರಂಗ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿತು. ಅಲ್ಲಿಯೂ ಬಹು ಬೇಡಿಕೆಯ ನಟಿಯಾದ ಈ ಚೆಲುವೆ ಇದೀಗ ಸಲ್ಮಾನ್ ಖಾನ್ ಅವರೊಂದಿಗೆ ನಟಿಸಲು ಸಿದ್ಧರಾಗಿದ್ದಾರೆ.

ಬಜಾಜ್ ಪಲ್ಸರ್ 150 BS6 ಬೈಕ್ ಬಿಡುಗಡೆ; ಬೆಲೆ ವಿಶೇಷತೆ ಇಲ್ಲಿದೆ!

ಬಜಾಜ್ ಪಲ್ಸರ್ 150 BS6 ಎಂಜಿನ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಬೈಕ್ ಸ್ಟಾಂಡರ್ಡ್ ಡಿಸ್ಕ್ ಬ್ರೇಕ್ ವೇರಿಯೆಂಟ್ ಹಾಗೂ ಟ್ವಿನ್ ಡಿಸ್ಕ್ ಬ್ರೇಕ್ ವೇರೆಯೆಂಟ್ ಹೊಂದಿದೆ. ನೂತನ ಬೈಕ್ ಬ್ಲಾಕ್ ಕ್ರೋಮ್ ಹಾಗೂ ಬ್ಲಾಕ್ ರೆಡ್ ಕಲರ್‌ಗಳಲ್ಲಿ ಲಭ್ಯವಿದೆ.

ಒಂದೇ ಕುಟುಂಬದ ಐವರ ಕೊಳೆತ ಮೃತದೇಹ ಪತ್ತೆ: ಬೆಚ್ಚಿಬಿದ್ದ ರಾಜಧಾನಿ!

ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ ಪುನಾರಾರಂಭವಾಗಲಿ ಎಂದ ಯುವಿ

ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಪುನರಾರಂಭವಾಗಲಿ ಎಂದು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಆಶಿಸಿದ್ದಾರೆ. ಕ್ರೀಡೆಯ ದೃಷ್ಟಿಯಿಂದ ದ್ವಿಪಕ್ಷೀಯ ಸರಣಿ ಎರಡು ದೇಶಗಳಿಗೆ ಮಹತ್ವದ್ದಾಗಿದೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.

click me!