ಒಂದೇ ಕುಟುಂಬದ ಐವರ ಕೊಳೆತ ಮೃತದೇಹ ಪತ್ತೆ: ಬೆಚ್ಚಿಬಿದ್ದ ರಾಜಧಾನಿ!

By Suvarna News  |  First Published Feb 12, 2020, 4:13 PM IST

ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣದಿಂದ ಬೆಚ್ಚಿದ್ದ ದೆಹಲಿ| ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಆತ್ಮಹತ್ಯೆ ಪ್ರಕರಣ| ಕೊಳೆತ ಸ್ಥಿತಿಯಲ್ಲಿ ಒಂದೇ ಕುಟುಂಬದ ಐವರ ಮೃತದೇಹ ಪತ್ತೆ| ಆತ್ಮಹತ್ಯೆಗೆ ಶರಣಾಯ್ತಾ ಆಟೋ ಡ್ರೈವರ್ ಶಂಭು ಮತ್ತು ಆತನ ಕುಟುಂಬ?| ಶಂಭು, ಪತ್ನಿ ಹಾಗೂ ಮೂವರು ಮಕ್ಕಳ ಕೊಳೆತ ಮೃತದೇಹ| ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು|


ನವದೆಹಲಿ(ಫೆ.12): ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

ಇಲ್ಲಿನ ಬಜನ್’ಪುರ್ ಪ್ರದೇಶದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಕೊಳೆತ ಮೃತದೇಹ ಪತ್ತೆಯಾಗಿದ್ದು, ಐದಾರು ದಿನಗಳ ಹಿಂದೆಯೇ ಈ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Tap to resize

Latest Videos

undefined

ಬೆಚ್ಚಿ ಬಿದ್ದ ರಾಜಧಾನಿ: ಒಂದೇ ಕುಟುಂಬದ 11 ಜನ ನಿಗೂಢ ಸಾವು!

ಆಟೋ ಡ್ರೈವರ್ ಆಗಿದ್ದ ಶಂಭು ಮತ್ತು ಆತನ ಪತ್ನಿ ಹಾಗೂ ಮೂವರು ಮಕ್ಕಳು ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Joint CP Alok Kumar in Bhajanpura: We've found 5 bodies which include the bodies of the head of the family, his wife and three children. The family was staying here since last 6-7 months. It appears that the bodies have been here for a few days. A forensics team has arrived here https://t.co/SqG8ej1rYu pic.twitter.com/gDmO2LSulq

— ANI (@ANI)

ಶಂಭು ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಪರಿಣಾಮ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಗಿಲು ಒಡೆದು ನೋಡಿದಾಗ ಶಂಭು ಮತ್ತು ಆತನ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.

ಬೆಂಗಳೂರಿನಲ್ಲೂ ಬೆಚ್ಚಿ ಬೀಳಿಸುವ ಬುರಾರಿ ಕುಟುಂಬದ ರೀತಿ ಘಟನೆ

ಆತ್ಮಹತ್ಯೆಗೆ ನಿಖರ ಕಾರಣ ತಿಳದು ಬಂದಿಲ್ಲ ಎಂದು ತಿಳಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!