ಮಂಗಳೂರಿನ ಪೌರತ್ವ ವಿರೋಧಿ ಪ್ರತಿಭಟನೆ ಹಾಗೂ ಗೋಲಿಬಾರ್ ಪ್ರಕರಣ ಕಲಾಪದಲ್ಲೂ ಗದ್ದಲ ಎಬ್ಬಿಸಿದೆ. ಪಾಕ್‌ಗೆ ಜೈ ಎಂದವರಿಗೆ ಕಾಂಗ್ರೆಸ್ ಸಹಾಕರ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ಮಯಾಬಜಾರ್ ಚಿತ್ರದ ಟೇಲರ್ ಬಿಡುಗಡೆಯಾಗಿದೆ. ಸ್ನಾನಕ್ಕೆ ಹೋದ ಚೆಲುವೆಗೆ ಮೊಬೈಲ್ ಫೋನ್ ಕುತ್ತು, ಭಾರತ 5ನೇ ಅತೀ ದೊಡ್ಡ ಆರ್ಥಿಕತೆ ದೇಶ ಸೇರಿದಂತೆ ಫೆಬ್ರವರಿ 19ರ ಟಾಪ್ 10 ಸುದ್ದಿ ಇಲ್ಲಿವೆ.
70 ಲಕ್ಷ ಜನ ಬರಲು ಟ್ರಂಪ್ ಏನು ದೇವರಾ?: ಕೈ ನಾಯಕ ಹೇಳಿದ್ದು ಕೇಳಿದಿರಾ?
ಇದೇ ಫೆ.24ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಟ್ರಂಪ್ ಸ್ವಾಗತಕ್ಕೆ ಭರದ ಸಿದ್ಧತೆ ನಡೆದಿದೆ. ಆದರೆ ಇದೇಕೊ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಸರಿ ಕಂಡುಬರುತ್ತಿಲ್ಲ.
'ಪಾಕಿಸ್ತಾನಕ್ಕೆ ಜೈ ಅಂದವರಿಗೆ ಕಾಂಗ್ರೆಸ್-ಜೆಡಿಎಸ್ ಸಹಕಾರ ನೀಡ್ತಿವೆ'
ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಮಂಗಳವಾರ ನಡೆದಂತಹ ಸದನ ಕಲಾಪ ಬಹಿಷ್ಕಾರ ವಿಚಾರವಾಗಿ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಆ ಎರಡು ಪಕ್ಷದವರಿಗೆ ಉತ್ತರ ಕರ್ನಾಟಕದ ನೆರೆ ಪೀಡಿತರ ಸಮಸ್ಯೆ ಚರ್ಚಿಸೋದು ಬೇಕಿಲ್ಲ, ಮನೆ ಮಠ ಕಳೆದುಕೊಂಡವರ ಬಗ್ಗೆ ಚರ್ಚೆ ಮಾಡಲು ಅವರಿಗೆ ಸಮಯವಿಲ್ಲ. ಪಾಕಿಸ್ತಾನಕ್ಕೆ ಜೈ ಅಂದವರಿಗೆ ಅವ್ರ ಸಹಕಾರ ಕೊಡ್ತಿದಾರೆ ಎಂದು ಆರೋಪಿಸಿದ್ದಾರೆ.
'ರಾಮಮಂದಿರ ನಿರ್ಮಾಣ ಇಂದು ಮುಹೂರ್ತ? ಉಡುಪಿ ಪೇಜಾವರ ಶ್ರೀ ಭಾಗಿ!...
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಉಸ್ತುವಾರಿಗೆಂದು ರಚನೆ ಆಗಿರುವ ‘ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನ ಮೊದಲ ಸಭೆ ಬುಧವಾರ ದೆಹಲಿಯಲ್ಲಿ ನಡೆಯಲಿದೆ. ಸಂಜೆ 5 ಗಂಟೆಗೆ ಟ್ರಸ್ಟ್‌ನ ಸದಸ್ಯ ಕೆ. ಪರಾಶರನ್ ಅವರ ನಿವಾಸದಲ್ಲಿ ಸಭೆ ಏರ್ಪಟ್ಟಿದೆ. ಇವರ ಮನೆ ವಿಳಾಸದಲ್ಲೇ ಟ್ರಸ್ಟ್ ನೋಂದಣಿ ಆಗಿದೆ.
ಪಾತಕಿ ಅಬು ಸಲೇಂ ಪರಾರಿ ಆಗಿದ್ದೇಗೆ? ಕೊನೆಗೂ ರಹಸ್ಯ ಬಯಲು!
1993ರ ಮುಂಬೈ ಸರಣಿ ಸ್ಫೋಟ ಹಾಗೂ ನಟ ಸಂಜಯ್ ದತ್ ನಿವಾಸದಲ್ಲಿ ಪತ್ತೆಯಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ಪ್ರಕರಣದ ಕಿಂಗ್‌ಪಿನ್ ಅಬು ಸಲೇಂ ತನ್ನನ್ನೇ ಹೇಗೆ ವಂಚಿಸಿ ದುಬೈಗೆ ಪರಾರಿಯಾಗಿದ್ದ ಎಂಬ ವಿಚಾರವನ್ನು ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಆತ್ಮಚರಿತ್ರೆಯಲ್ಲಿ ನೆನಪಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿಯನ್ನೂ ಹಿಂದಿಕ್ಕಿ ಅಪರೂಪದ ದಾಖಲೆ ಬರೆದ ಕಿಂಗ್ ಕೊಹ್ಲಿ..!
ಕ್ರಿಕೆಟ್ ಮೈದಾನದಲ್ಲಿ ಸದಾ ಒಂದಿಲ್ಲೊಂದು ದಾಖಲೆ ಬರೆಯುತ್ತಲೇ ಸಾಗುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಇದೀಗ ಮೈದಾನದಾಚೆಗೆ ಮತ್ತೊಂದು ಅಪರೂಪದ ದಾಖಲೆ ಬರೆದಿದ್ದಾರೆ. ದೇಶದ ಪ್ರಧಾನಿ ಮೋದಿಯನ್ನು ಹಿಂದಿಕ್ಕುವಲ್ಲಿ ಕ್ಯಾಪ್ಟನ್ ಕೊಹ್ಲಿ ಯಶಸ್ವಿಯಾಗಿದ್ದಾರೆ.
ರಿಲೀಸ್ ಆಯ್ತು ಪುನೀತ್ ರಾಜ್‌ಕುಮಾರ್ 'ಮಾಯಾಬಜಾರ್' ಟ್ರೇಲರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ತೆರೆಗೆ ಬರಲು ಸಿದ್ಧವಾಗಿರೋ ಸಿನಿಮಾ ಮಾಯಾ ಬಜಾರ್. ಚಿತ್ರದ ಟೀಸರ್ ಮತ್ತು ಸಾಂಗ್ ಇಂಟ್ರೆಸ್ಟಿಂಗ್ ಆಗಿದ್ದು ಸದ್ಯ ಚಿತ್ರತಂಡ ಟ್ರೇಲರ್ ಅನ್ನು ಇತ್ತೀಚಿಗಷ್ಟೇ ರಿಲೀಸ್ ಮಾಡಿದೆ. ಡೈಲಾಗ್ಸ್ ಮತ್ತು ಚಿತ್ರದ ಕಾನ್ಸೆಪ್ಟ್ ಮೂಲಕವೇ ಸಿನಿಮಾ ಟ್ರೇಲರ್ ಸ್ಪೆಷಲ್ ಅನ್ನಿಸುತ್ತಿದೆ.
ಜಿಡಿಪಿ ಬೆಳವಣಿಗೆ ದರ ಕುಸಿದರೂ ಭಾರತ 5 ನೇ ದೊಡ್ಡ ಆರ್ಥಿಕತೆಯಾಗಿದ್ದು ಹೇಗೆ?
ದೇಶ ಆರ್ಥಿಕ ಹಿಂಜರಿಕೆಯಲ್ಲಿದೆ. ಜಿಡಿಪಿ ಬೆಳವಣಿಗೆಯ ದರ ನಿರೀಕ್ಷಿತ ಶೇ.7ರಿಂದ ಶೇ.5ಕ್ಕೆ ಕುಸಿದಿದೆ. ಆದರೂ ಭಾರತವೀಗ ಫ್ರಾನ್ಸ್ ಹಾಗೂ ಜಪಾನನ್ನು ಹಿಂದಿಕ್ಕಿ ಜಗತ್ತಿನ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಸ್ನಾನ ಮಾಡುವಾಗ ಫೋನ್ ಬಳಸಿದ ಚೆಲುವೆ: ಅದೇ ಪ್ರಾಣಕ್ಕೇ ಕುತ್ತು ತಂತು ಗುರುವೇ!
ಈವರೆಗೂ ನೀವು ಫೋನ್ ಚಾರ್ಜ್ ಮಾಡುತ್ತಲೇ ಬಳಸುವಾಗ ನಡೆಯುವ ದುರಂತಗಳ ಕುರಿತು ಕೇಳಿರಬಹುದು. ಹಲವಾರು ಬಾರಿ ನಿದ್ದೆಗೆ ಜಾರುವ ಮಂದಿ ಜಾರ್ಜ್‌ಗೆ ಹಾಕಿದ ಫೋನ್‌ನಿಂದ ಶಾಕ್ ತಗುಲಿಸಿಕೊಂಡು ಸಾವನ್ನಪ್ಪುತ್ತಾರೆ. ಆದರೆ ಸ್ನಾನ ಮಾಡುವಾಗ ಚಾರ್ಜ್‌ಗಿಟ್ಟ ಫೋನ್ ಬಳಸಿದರೆ ದುರಂತವಾಗುವ ಸಂಭವ ಹೆಚ್ಚು. ಸದ್ಯ ಫ್ರಾನ್ಸ್‌ನಲ್ಲಿ ಇಂತಹುದೇ ಘಟನೆ ಸಂಭವಿಸಿದ್ದು, ಚೆಲುವೆಯೊಬ್ಬಳು ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ
ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 10 ಕಾರು!
ಭಾರತದಲ್ಲಿ ಕಾರು ಖರೀದಿಸುವಾಗ ಕೇಳುವ ಮೊದಲ ಪ್ರಶ್ನೆ, ಎಷ್ಟು ಕೊಡುತ್ತೆ? ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳು ಅಧಿಕ ಮಾರಾಟವಾಗುತ್ತವೆ. ಇತ್ತೀಚೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೂ ಮೈಲೇಜ್ ವಿಚಾರದಲ್ಲಿ ರಾಜಿ ಇಲ್ಲ. ಭಾರತದ ಹಲವು ಕಾರುಗಳು ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ.
ಎಣ್ಣೆ ಪಾರ್ಟಿ, ನಿದ್ರೆ ಮಾತ್ರೆ, 3 ಮಂದಿ: ಪುರುಷನ ಮೇಲಿನ ಮೋಹಕ್ಕಾಗಿ ಆಂಟಿಯ ಸ್ಕೆಚ್
ಇದು ಖತರ್ನಾಕ್ ಆಂಟಿಯ ಕತೆ.. ನೀಲಗಿರಿ ತೋಪಿನಲ್ಲೊಂದು ಸುಟ್ಟು ಕರಕಲಾದ ಕಾರು.. ಕಾರಿನೊಳಗೆ ನೋಡಿದ್ರೆ ತಲೆಬುರುಡೆ..ಏರಿಯಾದಲ್ಲಿ ಹವಾ ಮೆಂಟೇನ್ಮಾಡ್ತಿದ್ದ ರೌಡಿಯೊಬ್ಬ ಅವನ ಸಾವಿಗೆ ಅವನೇ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದ.. ಎಣ್ಣೆ ಪಾರ್ಟಿ.. ಅವನ ಇಷ್ಟದ ಮೊಸರನ್ನ.. ಜತೆಗಿದ್ದ ಆಂಟಿಯ ನಾಜೂಕಾದ ಸ್ಕೆಚ್.. ಮಿಡ್ನೈಟ್ನಲ್ಲಿ ನಡೆದ ಆ ಮರ್ಡರ್ ಕಹಾನಿ.