ಮಂಗಳೂರು ವಿಮಾನ ನಿಲ್ದಾಣದಲ್ಲಿನ ಬಾಂಬ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಬಾಂಬರ್‌ಗೆ ಹುಡುಕಾಟ ಆರಂಭಿಸಿದ ಬೆನ್ನಲ್ಲೇ ಆರೋಪಿ ಆದಿತ್ಯ ರಾವ್ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಿಚಾರಣೆ ಆರಂಭಗೊಂಡಿದೆ. ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವೆ ಕುಚ್ ಕುಚ್ ಇದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಮಹಿಳೆಯರಿಗೆ ಬಿಜೆಪಿಯತ್ತ ಒಲವು, ರಾಜ್ಯ ಕಬಡ್ಡಿಯಲ್ಲಿ ರಂಪಾಟ ಸೇರಿದಂತೆ ಜನವರಿ 22ರ ಟಾಪ್ 10 ಸುದ್ದಿ ಇಲ್ಲಿವೆ.
ಮಂಗಳೂರು ವಿಮಾನ ನಿಲ್ದಾಣ ಬಾಂಬರ್ ಆರೋಪಿ ಪೊಲೀಸರಿಗೆ ಶರಣು
ಎರಡು ವರ್ಷಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ ಆರೋಪಿ ಆದಿತ್ಯ ರಾವ್ ಎಂಬಾತನೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದು ಇದೀಗ ಆತ ಪೊಲೀಸರ ಮುಂದೆ ಶರಣಾಗಿದ್ದಾನೆ.
ಮಂಗಳೂರು ಬಾಂಬರ್ ಆದಿತ್ಯ ರಾವ್ 15 ವರ್ಷದಲ್ಲಿ...18 ಕೆಲಸ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಪೊಲೀಸರಿಗೆ ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ಆದಿತ್ಯರಾವ್ ನನ್ನ ವಶಕ್ಕೆ ಪಡೆದುಕೊಳ್ಳಲು ಬೆಂಗಳೂರಿಗೆ ಮಂಗಳೂರು ಪೊಲೀಸರು ಆಗಮಿಸಿದ್ದಾರೆ. ಪ್ರಮುಖವಾಗಿ ಈ ಆರೋಪಿ 15 ವರ್ಷದಲ್ಲಿ 18 ಕೆಲಸ ಬದಲಾಯಿಸಿದ್ದಾನೆ.
ಬಾಂಬರ್ ಕೋರ್ಟ್‌ಗೆ: ಮಂಗಳೂರು ಪೊಲೀಸರಿಗೆ ಜಡ್ಜ್ ಮಹತ್ವದ ಸೂಚನೆ.
ಮಂಗಳೂರು ಬಾಂಬರ್ ಆದಿತ್ಯ ರಾವ್ ನನ್ನು ಕೋರ್ಟ್, ಬೆಂಗಳೂರು ಪೊಲೀಸರಿಂದ ಮಂಗಳೂರು ಪೊಲೀಸರಿಗೆ ಒಪ್ಪಿಸಿದೆ. ಆದ್ರೆ, ಮಂಗಳೂರು ಪೊಲೀಸರಿಗೆ 1ನೇ ಎಸಿಎಂಎಂ ಕೋರ್ಟ್ ಒಂದು ಮಹತ್ವದ ಸೂಚನೆ ನೀಡಿದೆ.
ಗಡ್ಡದಾರಿ ವ್ಯಕ್ತಿಯೊಂದಿಗೆ.....ಶಾಗೆ ಸಲಹೆ ನೀಡಿದ ಒವೈಸಿ!
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರೋಧಿಗಳೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ, ಸವಾಲು ಸ್ವೀಕರಿಸಿರುವುದಾಗಿ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಹೇಳಿದ್ದಾರೆ.
ರಾಹುಲ್‌ಗೆ ಕೀಪಿಂಗ್; ಕೊಹ್ಲಿ- ಧೋನಿ ನಾಯಕತ್ವ ವ್ಯತ್ಯಾಸ ಹೇಳಿದ ಸೆಹ್ವಾಗ್!
ಟೀಂ ಇಂಡಿಯಾದ ವಿಕೆಟ್ ಕೀಪಿಂಗ್ ಜವಾಬ್ದಾರಿ ಇದೀಗ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಹೆಗಲೇರಿದೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ರಾಹುಲ್ ಕೀಪರ್ ಆಗಿ ಮುಂದುವರಿಸಲು ಚಿಂತನ ನಡೆಸಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನಾಯಕನ ಜವಾಬ್ದಾರಿ ವಿವರಿಸಿದ್ದಾರೆ. ಇದೇ ಕಾರಣಕ್ಕೆ ಮಾಜಿ ನಾಯಕ ಧೋನಿ ಶ್ರೇಷ್ಠ ಎಂದಿದ್ದಾರೆ.
ರಾಜ್ಯ ಕಬಡ್ಡಿಯಲ್ಲಿ ರಂಪಾಟ; BC ರಮೇಶ್ ವಿರುದ್ಧ ಮಹಿಳಾ ಕಬಡ್ಡಿ ಪಟು ಕೂಗಾಟ!
ಏನ್ಮಾಡ್ತೀಯಾ? ನಡಿ ಸ್ಟೇಶನ್‌ಗೆ, ಹಲ್ಲೆ ಮಾಡ್ತೀಯಾ? ಈ ರೀತಿ ನಾನ್ ಸ್ಟಾಪ್ ಬೈಗುಳದ ಮಾತು ಇದೀಗ ರಾಜ್ಯ ಕಬಡ್ಡಿ ಸಂಸ್ಥೆಯನ್ನೇ ತಲ್ಲಣಗೊಳಿಸಿದೆ. ರಾಜ್ಯ ಕಬಡ್ಡಿ ಸಂಸ್ಥೆ ಸಂಘಟನಾ ಕಾರ್ಯದರ್ಶಿ, ಮಾಜಿ ಕಬಡ್ಡಿ ಪಟು ಬಿಸಿ.ರಮೇಶ ವಿರುದ್ದ ಮಹಿಳಾ ಕಬಡ್ಡಿ ಪಟು ಉಷಾರಾಣಿ ಕೂಗಾಡಿದ್ದಾರೆ. ಈ ವಿಡಿಯೋ ಬಹಿರಂಗವಾಗಿದೆ.
ನಿಖಿಲ್ - ರಚಿತಾ ನಡುವೆ ಕುಚ್‌ಕುಚ್? ಶುರುವಾಗಿದೆ ಇಬ್ಬರ ಮದುವೆ ಗುಸುಗುಸು!
ರಚಿತಾ ಮತ್ತು ನಿಖಿಲ್ 'ಸೀತಾರಾಮ ಕಲ್ಯಾಣ' ಸಿನಿಮಾ ನಂತರ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಶುರುವಾಗಿದೆ ಎಂಬ ಗುಸು ಗುಸು ಶುರುವಾಗಿತ್ತು. ಆ ಟೈಮಲ್ಲಿ ರಚಿತಾ ನಿಖಿಲ್ ಇಬ್ಬರೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಫೋಟೊ ಅಪ್ಲೋಡ್ ಮಾಡಿದ್ದು ಇಬ್ಬರ ನಡುವೆ ಏನೋ ನಡೀತಿದೆ ಎಂಬ ಅನುಮಾನ ಇನ್ನಷ್ಟು ದಟ್ಟವಾಗುವಂತ ಮಾಡಿತ್ತು.
ಸೈಲೆಂಟಾಗಿ ಚೀನಾಗೆ ಗುದ್ದಿದ ಮೋದಿ: ಮಕ್ಕಳಿಗಾಗಿ ಒಂದೊಳ್ಳೆ ನಿರ್ಧಾರ!.
ಚೀನಾದ ಆಟಿಕೆಗಳ ಗುಣಮಟ್ಟ ಕಳಪೆಯಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮೇಡ್ ಇನ್ ಚೀನಾ ಆಟಿಕೆಗಳಿಗೆ ಕೇಂದ್ರ ಸರ್ಕಾರ ಅಧಿಕ ತೆರಿಗೆ ವಿಧಿಸಲು ಮುಂದಾಗಿದೆ. ಚೀನಾ ಆಟಿಕೆಗಳ ಆಮದಿನಿಂದ ಸ್ವದೇಶಿ ಆಟಿಕೆ ತಯಾರಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!...
ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಸಂಭ್ರಮ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನ ಮಂತ್ರಿ ದೇವಗೌಡ ಮೊಮ್ಮಗ ನಿಖಿಲ್, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬ್ಯೂಸಿಯಾಗಿದ್ದಾರೆ. 30ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಿಖಿಲ್, 7ನೇ ಕ್ಲಾಸಿನಲ್ಲೇ ಕಾರು ಹೊಂದಿದ್ದರು.
ಮಹಿಳೆಯರಿಗೆ ಬಿಜೆಪಿ ಕಡೆ ಒಲವು ಜಾಸ್ತಿ: ಮಾಜಿ ಸಿಎಂ
ಮಹಿಳೆಯರಿಗೆ ಬಿಜೆಪಿ ಕಡೆ ಒಲವು ಜಾಸ್ತಿ ಎಂದು ಮಾಜಿ ಸಿಎಂ ಮೈಸೂರಿನಲ್ಲಿ ಹೇಳಿದ್ದಾರೆ. ಸಿಎಎ ಬಗ್ಗೆ ಬಿಜೆಪಿಯ ಮಹಿಳೆಯರು, ಪುರುಷರು ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಬರೇ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.