ಮೃತರ ಕುಟುಂಬದ ಪರಿಹಾರ ವಾಪಸ್, ಮಗನ ಪೋಟೋ ರಿವೀಲ್ ಮಾಡಿದ ಯಶ್; ಡಿ.25ರ ಟಾಪ್ ಸುದ್ದಿ!

By Suvarna News  |  First Published Dec 25, 2019, 5:23 PM IST

ಮಂಗಳೂರು ಗಲಭೆ ಪ್ರಕರಣ ಪೂರ್ವನಿಯೋಜಿತ ಕೃತ್ಯ ಅನ್ನೋದಕ್ಕ ಪೊಲೀಸರಿಗೆ ಹಲವು ಸಾಕ್ಷ್ಯಗಳು ಲಭ್ಯವಾಗಿದೆ. ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಗಲಭೆಯಲ್ಲಿ ಮೃತರಾದ ಕುಟುಂಬಸ್ಥರಿಗೆ ಘೋಷಿಸಿದ್ದ ಪರಿಹಾರ ವಾಪಸ್ ಪಡೆದಿದ್ದಾರೆ. ಹಿಂಸಾಚಾರ ಕುರಿತು ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಬಿಸಿ ತಟ್ಟಿದೆ. ಇತ್ತ ರಾಂಕಿಂಗ್ ಸ್ಟಾರ್ ಯಶ್ ಮಗನ ಪೋಟೋ ರಿವೀಲ್ ಮಾಡಿದ್ದಾರೆ. ಅತೀ ದೊಡ್ಡ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯ, ಬಿಪಿಎಲ್ ಕುಟುಂಬಗಳಿಗೆ ಗುಡ್ ನ್ಯೂಸ್ ಸೇರಿದಂತೆ ಕ್ರಿಸ್ಮಸ್(ಡಿ.25) ಹಬ್ಬದ ದಿನ ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.


ಮಂಗಳೂರು ಗಲಭೆ ಪ್ರಕರಣ : ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಕೊಡಲೇಬೇಕು ಎಂದ ಸಚಿವ

Latest Videos

undefined

ಮಂಗಳೂರು ಗಲಭೆ ಪ್ರಕರಣ ಗಲಭೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಕೊಡಲೇಬೇಕು. ತೂರಾಟದಲ್ಲಿ ಜೀವ ಕಳೆದುಕೊಂಡವರ ಬಗ್ಗೆ ತನಿಖೆ ನಡೆದಿದೆ. ತನಿಖೆಯಿಂದ ಆದೇಶ ಏನು ಬರುತ್ತೋ ಅದನ್ನು ನೋಡಿಕೊಂಡು 100ಕ್ಕೆ 100 ರಷ್ಟು ಯಾರು ಸತ್ತಿದ್ದಾರೋ ಅಂತವರ ಕುಟುಂಬಸ್ಥರಿಗೆ ಪರಿಹಾರ ಕೊಡಲೇ ಬೇಕು ಅದರಲ್ಲಿ ಬೇರೆ ಮಾತೇ ಇಲ್ಲ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. 

ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ಇಲ್ಲ! ಆದೇಶ ಹಿಂಪಡೆದ ಸಿಎಂ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವ ಆದೇಶವನ್ನು ಹಿಂಪಡೆಯುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಬುಧವಾರ ಪ್ರಕಟಿಸಿದರು.  

ಮಂಗಳೂರು ಗಲಭೆ: ಸಿದ್ದರಾಮಯ್ಯ & ಟೀಂಗೂ ಮುಟ್ಟಿತು ಬಿಸಿ!...

 ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿಚಾರವಾಗಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೂ ಬಿಸಿ ಮುಟ್ಟಿದೆ. ಕಾಯ್ದೆ ಮತ್ತು ಗಲಾಟೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಟೀಂ ತೆಗೆದುಕೊಂಡಿರುವ ನಿಲುವಿನಿಂದ ಸಂಕಷ್ಟ ಎದುರಾಗಿದೆ.

CAAಗೆ ವಿರೋಧ: ಪದಕ ಸ್ವೀಕರಿಸಿ ಸ್ಟೇಜ್ ಮೇಲೆಯೇ CAA ಪ್ರತಿ ಹರಿದ ವಿದ್ಯಾರ್ಥಿನಿ!

ಜಾಧವಪುರ್ ವಿವಿಯ ದೇಬೋಸ್ಮಿತಾ ಚೌಧರಿ ಎಂಬ ವಿದ್ಯಾರ್ಥಿನಿ ತನ್ನ ಎಂಎ ಪ್ರಶಸ್ತಿ ಸ್ವೀಕರಿಸಿದ ಮರುಕ್ಷಣವೇ CAA ಪ್ರತಿ ಹರಿದು ಹಾಕಿ 'ಇಂಕ್ವಿಲಾಬ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಾಳೆ.

ಬಿಪಿ​ಎಲ್‌ ಕುಟುಂಬ​ಗ​ಳಿ​ಗೆ ಭರ್ಜರಿ ಗುಡ್ ನ್ಯೂಸ್

ಬಿಪಿಎಲ್ ಕುಟುಂಬಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಸಂಸದರು ಎಲ್ಲಾ ಬಿಪಿಎಲ್ ಕುಟುಂಬಗಳಿಗೂ ಕೂಡ ಅತ್ಯಗತ್ಯವಾದ ಮೂಲ ಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ. 

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ 2020ರ IPL ಫೈನಲ್ ಪಂದ್ಯ?

IPL ಟೂರ್ನಿಗೆ ತಯಾರಿಗಳು ನಡೆಯುತ್ತಿದೆ. ಈಗಾಗಲೇ ಹರಾಜು ಪ್ರಕ್ರಿಯೆ ಮುಗಿದಿದ್ದು, ತರಬೇತಿ ಆರಂಭವಾಗಲಿದೆ. ಅತ್ತ ಬಿಸಿಸಿಐ ಐಪಿಎಲ್ ಪಂದ್ಯ ಆಯೋಜನೆಗೆ ದಿನಾಂಕ ನಿಗದಿಪಡಿಸುತ್ತಿದೆ. ಇದೀಗ ಫೈನಲ್ ಪಂದ್ಯವನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. 

ಬೌಂಡರಿಯಿಂದ ಬೌಲ್‌ ಮಾಡಿ ರನೌಟ್‌ ಮಾಡಿದ ಭೂಪ!

ಬಿಗ್‌ ಬ್ಯಾಶ್‌ ಲೀಗ್ ಟೂರ್ನಿಯಲ್ಲಿ ಮತ್ತೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಬೌಂಡರಿ ಗೆರೆಯಿಂದ ರನೌಟ್ ಮಾಡಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. 

ರಾಕಿಂಗ್ ಕಪಲ್ ಮಗನ ಫೋಟೋ ರಿವೀಲ್! ಹೀಗಿದ್ದಾರೆ ನೋಡಿ ಜೂನಿಯರ್ ರಾಕಿಭಾಯ್!

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಮುದ್ದು ಮಗನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೂನಿಯರ್ ರಾಕಿಭಾಯ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. 

ಪುನೀತ್, ಯಶ್ ಹೆಗಲಿಗೆ ಸರ್ಕಾರದಿಂದ ಹೊಸ ಹೊಣೆ

ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಆಯೋಜಿಸುವ ಸಾಮೂಹಿಕ ಮದುವೆಗೆ  ರಾಯಭಾರಿಗಳಾಗಿ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ, ಪುನೀತ್ ರಾಜ್‌ಕುಮಾರ್ ಹಾಗೂ ಯಶ್ ದಂಪತಿ ಆಯ್ಕೆಯಾಗಿದ್ದಾರೆ. 

ಇದು ಮೋದಿ ಅನ್ವೇಷಣೆ: ಎಲ್ಲಾ ಬ್ಯಾಂಕ್‌ಗಳಿಂಲೂದ ಶುಭಸುದ್ದಿ ಘೋಷಣೆ!

 ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ (ಅನುತ್ಪಾದಕ ಆಸ್ತಿ ಅಥವಾ ಎನ್‌ಪಿಎ) ಸೆಪ್ಟೆಂಬರ್‌ ಅಂತ್ಯಕ್ಕೆ ಶೇ.9.1ರಷ್ಟು ಸುಧಾರಿಸಿದೆ ಎಂದು ಆರ್‌ಬಿಐ ತಿಳಿಸಿದೆ. 2018ರಲ್ಲಿ ಶೇ.11.2ರಷ್ಟಿದ್ದ ಎನ್‌ಪಿಎ ಇದೀಗ ಶೇ.9.1ಕ್ಕೆ ಇಳಿದಿದೆ. ಎನ್‌ಪಿಎ ಸ್ಥಿರವಾಗಿ ಮತ್ತು ಕಡಿಮೆಯಾಗುತ್ತಿರುವುದು, ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ ಎಂದು ಆರ್‌ಬಿಐ ಹೇಳಿದೆ.

click me!