ರಾಹುಲ್, ಪ್ರಿಯಾಂಕಾ ಜೀವಂತ ಪೆಟ್ರೋಲ್ ಬಾಂಬ್ ಇದ್ದಂಗೆ: ಅನಿಲ್ ವಿಜ್!

Published : Dec 25, 2019, 01:35 PM IST
ರಾಹುಲ್, ಪ್ರಿಯಾಂಕಾ ಜೀವಂತ ಪೆಟ್ರೋಲ್ ಬಾಂಬ್ ಇದ್ದಂಗೆ: ಅನಿಲ್ ವಿಜ್!

ಸಾರಾಂಶ

ಕಾಂಗ್ರೆಸ್ ನಾಯಕರ ಮೇಲೆ ತಿರುಗಿಬಿದ್ದ ಬಿಜೆಪಿ ಸಚಿವ| ರಾಹುಲ್, ಪ್ರಿಯಾಂಕಾ ಇಬ್ಬರೂ ಜೀವಂತ ಪೆಟ್ರೋಲ್ ಬಾಂಬ್ ಇದ್ದಂಗೆ'| ಹರಿಯಾಣ ಸಚಿವ ಅನಿಲ್ ವಿಜ್ ವಿವಾದಾತ್ಮಕ ಹೇಳಿಕೆ| ರಾಹುಲ್, ಪ್ರಿಯಾಂಕಾ ಅವರದ್ದು ಬೆಂಕಿ ಹಚ್ಚುವ ಕೆಲಸ ಎಂದ ಅನಿಲ್ ವಿಜ್| ಟ್ವಿಟ್ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಅನಿಲ್ ವಿಜ್|

ಹರಿಯಾಣ(ಡಿ.25): ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಜೀವಂತ ಪೆಟ್ರೋಲ್‌ ಬಾಂಬ್'ಗಳಿದ್ದಂತೆ ಎಂದು ಹರಿಯಾಣ ಸಚಿವ ಅನಿಲ್ ವಿಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೋದಲ್ಲಿ ಬಂದಲ್ಲಿ ಬೆಂಕಿ ಹಚ್ಚುವ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜೀವಂತ ಪೆಟ್ರೋಲ್ ಬಾಂಬ್'ಗಳಿದ್ದಂತೆ ಎಂದು ಅನಿಲ್ ವಿಜ್ ಹರಿಹಾಯ್ದಿದ್ದಾರೆ.

CAAಗೆ ವಿರೋಧ: ಪದಕ ಸ್ವೀಕರಿಸಿ ಸ್ಟೇಜ್ ಮೇಲೆಯೇ CAA ಪ್ರತಿ ಹರಿದ ವಿದ್ಯಾರ್ಥಿನಿ!

ಉತ್ತರ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ರಾಹುಲ್ ಹಾಗೂ ಪ್ರಿಯಾಂಕಾ ಮೀರಠ್'ಗೆ ತೆರಳಿದ್ದರು.

ಆದರೆ ಪೊಲೀಸರು ಇಬ್ಬರೂ ನಾಯಕರು ಮೀರಠ್ ಪ್ರವೇಶಿಸದಂತೆ ತಡೆದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪೌರತ್ವ ಕಾಯ್ದೆಗೆ ವಿರೋಧ: SP ಮುಂದೆಯೇ ನಾಲಿಗೆ ಹರಿಬಿಟ್ಟ ಪ್ರತಿಭಟನಾಕಾರರು

ಈ ಕುರಿತು ಟ್ವಿಟ್ ಮಾಡಿ ಅಸಮಾಧಾನ ಹೊರಹಾಕಿರುವ ಅನಿಲ್ ವಿಜ್, ಈ ಇಬ್ಬರೂ ನಾಯಕರು ಹೋದಲ್ಲಿ ಬಂದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ