ಲಾಕ್‌ಡೌನ್‌ನಿಂದ ನೇಣಿಗೆ ಕೊರಳೊಡ್ಡಿದ ನಟ, ರಾಜ್ಯಕ್ಕೆ ಮತ್ತೆ ಕೊರೋನಾ ಕಂಟಕ; ಮೇ.17ರ ಟಾಪ್ 10 ಸುದ್ದಿ!

By Suvarna NewsFirst Published May 17, 2020, 5:34 PM IST
Highlights

ಟೀಂ ಇಂಡಿಯಾ ಜೂನ್ ಹಾಗೂ ಜುಲೈ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಮಾಡುತ್ತಾ ಅನ್ನೋ ಕುತೂಹಲಕ್ಕೆ ಬಿಸಿಸಿಐ ಉತ್ತರ ನೀಡಿದೆ. ಇತ್ತ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಲಾಕ್‌ಡೌನ್ ವೇಳೆ ಆಹಾರ ವಿತರಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈ ಸಂಪರ್ಕದಿಂದ ಕರ್ನಾಟಕದಲ್ಲಿ ಇಂದು ಒಂದೇ ದಿನ 54 ಕೊರೋನಾ ಸೋಂಕು ಪತ್ತೆಯಾಗಿದೆ. ಲಾಕ್‌ಡೌನ್ 4.0, ನೇಣಾಕಿಕೊಂಡ ನಟನಿಗೆ ಕೊರೋನಾ ಇದೆಯೆಂದು ನೆರವಿಗೆ ಬಾರದ ಪಕ್ಕದ ಮನೆಯವರು ಸೇರಿದಂತೆ ಮೇ.17ರ ಟಾಪ್ 10 ಸುದ್ದಿ ಇಲ್ಲಿವೆ.

ಮತ್ತೊಂದು ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರಿಕೆ: ಸೋಮವಾರದಿಂದ 4.0 ಶುರು

ಮಹಾರಾಷ್ಟ್ರ. ಪಂಜಾಬ್ ಬೆನ್ನಲ್ಲೇ ಇದೀಗ ಮತ್ತೊಂದು ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆಯಾಗಿದ್ದು,  ನಾಳೆ (ಸೋಮವಾರ) 4.0 ಲಾಕ್‌ಡೌನ್ ಶುರುವಾಗಲಿದೆ.

ತಮಿಳಲ್ಲಿ ಮಾತಾಡಿ ಎಂದು ಮೋದಿ ಕಾಲೆಳೆದು ಟೀಕೆಗೊಳಗಾದ ಖುಷ್ಬು; ಬೇಕಿತ್ತಾ ಇವೆಲ್ಲಾ?

ಪ್ರಧಾನಿ ನರೇಂದ್ರ ಮೋದಿಯನ್ನು  ಟೀಕಿಸಿದ ಬಹುಭಾಷಾ ನಟಿ ಹಾಗೂ ರಾಜಕಾರಣಿ  ಖುಷ್ಬೂ ಅವರಿಗೆ  'ಜೋಕರ್‌' ಎಂದು ಮತ್ತೊಬ್ಬ ಖ್ಯಾತ ನಟಿ ಟಾಂಗ್ ನೀಡಿದ್ದಾರೆ.


ಇಂದು ಒಂದೇ ದಿನ 54 ಪಾಸಿಟೀವ್ ಕೇಸ್‌ಗಳು; ರಾಜ್ಯಕ್ಕೆ ಕಂಟಕವಾಯ್ತು ಮುಂಬೈ ಸಂಪರ್ಕ

ಇಂದು ಒಂದೇ ದಿನ 54 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 1146 ಕ್ಕೆ ಏರಿಕೆಯಾಗಿದೆ. ಮಂಡ್ಯದಲ್ಲಿ 22 ಕೇಸ್‌ಗಳು ಪತ್ತೆಯಾಗಿವೆ.  22 ರಲ್ಲಿ 19 ಕೇಸ್‌ಗಳು ಮುಂಬೈ ಸಂಪರ್ಕದಿಂದಲೇ ಬಂದಿದ್ದು ಎನ್ನಲಾಗಿದೆ. ಉಡುಪಿ 1, ದಕ್ಷಿಣ ಕನ್ನಡದಲ್ಲಿ 2, ಕೋಲಾರದಲ್ಲಿ 1 ಕೇಸ್‌ಗಳು ಪತ್ತೆಯಾಗಿವೆ. 

ಜೂನ್-ಜುಲೈ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಮಾಡುತ್ತಾ ಟೀಂ ಇಂಡಿಯಾ?

ಕೊರೋನಾ ವೈರಸ್ ಕಾರಣ ಐಪಿಎಲ್ ಸೇರದಂತೆ ಪ್ರಮುಖ ಟೂರ್ನಿ ರದ್ದಾಗಿದೆ. ಇದೀಗ ನಿಗದಿತ ವೇಳಾಪಟ್ಟಿ ಪ್ರಕಾರ ಜೂನ್ ಹಾಗೂ ಜುಲೈ ತಿಂಗಳಲ್ಲಿ ಭಾರತ ಹಾಗೂ ಶ್ರೀಲಂಕಾ ನಿಗದಿತ ಓವರ್ ಟೂರ್ನಿ ಆಯೋಜಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆಯಾಗುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ, ಲಂಕಾ ಪ್ರವಾಸ ಮಾಡಲಿದೆಯಾ ಅನ್ನೋ ಕುತೂಹಲಕ್ಕೆ ಬಿಸಿಸಿಐ ಉತ್ತರ ನೀಡಿದೆ.

ನೇಣಾಕಿಕೊಂಡ ನಟನಿಗೆ ಕೊರೋನಾ ಇದೆಯೆಂದು ನೆರವಿಗೆ ಬಾರದ ಪಕ್ಕದ ಮನೆಯವರು!

ದತ್ ಸೇ ಮಜಭೂರ್, ಕುಲ್ ದೀಪಕ್ ಶೋಗಳ ಮೂಲಕ ಮನೆ ಮಾತಾಗಿದ್ದ ಕಿರುತೆರೆ ನಟ ಮನ್ ಮೀತ್ ಗ್ರೇವಾಲ್ ಮುಂಬೈನ ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸಾಲದ ಶೂಲಕ್ಕೆ ಸಿಲುಕಿದ್ದ ನಟ ಲಾಕ್ ಡೌನ್ ನಿಂದ ಬಳಲಿದ್ದರು. 32 ವರ್ಷದ ನಟ ತಮ್ಮ ಬೆಡ್ ರೂಂ ನಲ್ಲಿಯೇ ನೇಣು ಹಾಕಿಕೊಂಡಿದ್ದಾರೆ


ಸಂಸದ ಉಮೇಶ ಜಾಧವ್‌ ಮೇಲೆ ಹಲ್ಲೆಗೆ ಯತ್ನ: ಕಾಂಗ್ರೆಸ್‌ ಮುಖಂಡರ ವಿರುದ್ಧ ದೂರು ದಾಖಲು...

ಜಿಲ್ಲೆಯ ವಾಡಿ ಸೀಲ್‌ಡೌನ್‌ ಪ್ರದೇಶದಲ್ಲಿ ಬ್ಯಾರಿಕೇಡ್‌ ತೆರವುಗೊಳಿಸಿ ಸೋಂಕು ಮುಕ್ತ ಪ್ರದೇಶವೆಂದು ಘೋಷಿಸಲು ಹೋಗಿದ್ದ ಸಂದರ್ಭದಲ್ಲಿ ಸಂಸದ ಡಾ.ಉಮೇಶ ಜಾಧವ್‌ ಜೊತೆ ವಾಗ್ವಾದಕ್ಕಿಳಿದು ಘೇರಾವ್‌ ಹಾಕಿದ್ದ ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೇಡ್ ಇನ್ ಇಂಡಿಯಾ ಟಾಟಾ ಹೆಕ್ಸಾ ಈಗ ಬಾಂಗ್ಲಾದೇಶ ಸೇನೆಯ ಅಧೀಕೃತ SUV ಕಾರು!

ಪ್ರಧಾನಿ ಮೋದಿ ಇತ್ತೀಚೆಗೆ ಭಾರತದಲ್ಲೇ ಉತ್ಪಾದನೆಯಾಗಬೇಕು, ಇಲ್ಲಿಂದ ಇತರ ದೇಶಗಳಿಗೆ ರಫ್ತುಮಾಡುವ ಸಾಮರ್ಥ್ಯ ಹೆಚ್ಚಿಸಬೇಕು. ಇದಕ್ಕಾಗಿ ಸಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಳೆದ 3 ವರ್ಷಗಳಿಂದ ಕೆಲಸ ನಡೆಯುತ್ತಿದೆ. ಇದರ ಫಲವೇ ಭಾರತದ ಟಾಟಾ ಹೆಕ್ಸಾ ಕಾರು ಇದೀಗ ಬಾಂಗ್ಲಾದೇಶ ಸೇನೆಗೆ ಅಧೀಕೃತವಾಗಿ ಸೇರಿಕೊಂಡಿದೆ.

‘ಫಲವತ್ತಾದ’ ಪೊಲೀಸ್‌ ಹುದ್ದೆ ಲಾಬಿಗೆ ಬ್ರೇಕ್‌, ಸರ್ಕಾರದಿಂದ ಮಹತ್ವದ ಆದೇಶ!

ಪೊಲೀಸರು ಮುಂಬಡ್ತಿ ಪಡೆದ ಕೂಡಲೇ ‘ಫಲವತ್ತಾದ’ ಹುದ್ದೆಗಳಿಗೆ ನಡೆಸುವ ಲಾಬಿಗೆ ಬ್ರೇಕ್‌ ಹಾಕಿರುವ ರಾಜ್ಯ ಸರ್ಕಾರವು, ಪೊಲೀಸ್‌ ಇಲಾಖೆಯ ಸಿವಿಲ್‌ (ನಾಗರಿಕ)ಸೇವೆಯಲ್ಲಿ ಮುಂಬಡ್ತಿ ಹೊಂದಿದ ಅಧಿಕಾರಿಗಳು ಕಡ್ಡಾಯವಾಗಿ 2 ವರ್ಷಗಳು ಕಾರ್ಯಕಾರ್ಯೇತರ (ನಾನ್‌ ಎಕ್ಸ್‌ಕ್ಯುಟಿವ್‌) ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶನಿವಾರ ಮಹತ್ವದ ಆದೇಶ ಹೊರಡಿಸಿದೆ.

ಬಾಡಿಗೆ ಮನೆ ಮಾಲೀಕರೇ ಎಚ್ಚರ, ಕೊಂಚ ಯಾಮಾರಿದ್ರೂ ಜೈಲು ಖಚಿತ!

 ಲಾಕ್‌ಡೌನ್‌ನಿಂದಾಗಿ ಸದ್ಯ ನಗರದ ಪಿಜಿಗಳಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಅಲ್ಲೇ ಸಿಲುಕಿಕೊಂಡಿದ್ದಾರೆ. ಹೀಗಿರುವಾಗ ಅನೇಕ ಮಾಲಿಕರು ಪಿಜಿ ಬಾಡಿಗೆ ಹೆಚ್ಚಿಸಿದ್ದರೆ, ಇನ್ನು ಕೆಲವರು ಬಾಡಿಗೆ ನಿಡಲು ಒತ್ತಡ ಹೇರಲಾರಂಭಿಸಿದ್ದಾರೆ. ಆದರೀಗ ಇಂತಹ ವರ್ತನೆ ತೋರುವ ಮಾಲೀಕರು ಕೊಂಚ ಎಚ್ಚರದಿಂದಿರಬೇಕಾಗಿದೆ. ಇಲ್ಲವಾದಲ್ಲಿ ಜೈಲು ಸೇರೋದು ಖಚಿತ.

ಗುರುತೇ ತೋರದೆ ಆಹಾರ ವಿತರಿಸಿದ್ದಾರೆ ರಚಿತಾ ರಾಮ್!

 ರಚಿತಾ ಮನೆಯಲ್ಲಿದ್ದುಕೊಂಡು ಏನೇನು ಮಾಡಿದ್ದಾರೆ ಮತ್ತು ಇನ್ನಿತರ ವಿಶೇಷಗಳ ಬಗ್ಗೆ ಸ್ವತಃ ರಚಿತಾ  ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ಮಾಹಿತಿಗಳನ್ನು ನೀವೇ ಓದಿ.

click me!