ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ನಟ/ 8500 ರೂ. ಬಾಡಿಗೆ ಕಟ್ಟಲು ಹಣ ಇರಲಿಲ್ಲ/ ನಟನಿಗೆ ಕೊರೋನಾ ತಾಗಿದೆ ಎಂದು ಸಹಾಯಕ್ಕೆ ಧಾವಿಸದ ನೆರೆಮನೆನೆಯವರು/ ಮುಂಬೈನಲ್ಲಿ ಘಟನೆ
ಮುಂಬೈ(ಮೇ 17) ಆದತ್ ಸೇ ಮಜಭೂರ್, ಕುಲ್ ದೀಪಕ್ ಶೋಗಳ ಮೂಲಕ ಮನೆ ಮಾತಾಗಿದ್ದ ಕಿರುತೆರೆ ನಟ ಮನ್ ಮೀತ್ ಗ್ರೇವಾಲ್ ಮುಂಬೈನ ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಶೂಲಕ್ಕೆ ಸಿಲುಕಿದ್ದ ನಟ ಲಾಕ್ ಡೌನ್ ನಿಂದ ಬಳಲಿದ್ದರು.
32 ವರ್ಷದ ನಟ ತಮ್ಮ ಬೆಡ್ ರೂಂ ನಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ. ಅವರ ಹೆಂಡತಿ ಅವರನ್ನು ಬಚಾವ್ ಮಾಡಲು ಯತ್ನಿಸಲಿದರೂ ಸಫಲವಾಗಿಲ್ಲ. ಹೆಂಡತಿ ಕೂಗಿಕೊಂಡರೂ ಪಕ್ಕದ ಮನೆಯವರು ನೆರವಿಗೆ ಬಂದಿಲ್ಲ.
ಮಹಾರಾಷ್ಟ್ರದಲ್ಲಿ ಮೇ 31 ರವರೆಗೆ ಲಾಕ್ ಡೌನ್, ನಮ್ಮ ಕತೆ ಏನು?
undefined
ಮನ್ ಮೀತ್ ಕೊರೋನಾಕ್ಕೆ ತುತ್ತಾಗಿದ್ದಾರೆ ಎಂದು ಭಾವಿಸಿ ಲಪಕ್ಕದ ಮನೆಯವರು ಸ್ಪಂದಿಸಿಲ್ಲ. ಮನ್ ಮೀತ್ ಆತ್ಮಹತ್ಯೆ ಮಾಡಿಕೊಳ್ಳುವ ದಿನವೂ ಎಂದಿನಂತೆ ಇದ್ದರು. ಕೋಣೆಗೆ ಹೋಗೊ ಒಳಗಿನಿಂದ ಲಾಕ್ ಮಾಡಿಕೊಂಡರು. ಅವರ ಹೆಂಡತಿ ಈ ವೇಳೆ ಅಡುಗೆ ಮನೆಯಲ್ಲಿ ಇದ್ದರು. ಕುರ್ಚಿ ಅಲುಗಾಡುವ ಸದ್ದು ಕೇಳಿ ಹೆಂಢತಿ ಕೋಣೆಯೆಡೆಗೆ ಧಾವಿಸಿದ್ದಾರೆ. ಹೋಗಿ ಅವರನ್ನು ಹಿಡಿದು ಕೂಗಿಕೊಂಡರೂ ನೆರೆಮನೆಯವರು ಸಜಾಯಕ್ಕೆ ಧಾವಿಸಿಲ್ಲ. ನಟನನ್ನು ಕೆಳಗೆ ಇಳಿಸಲು ಸಾಧ್ಯವಾಗದೇ ಕಣ್ಣೇದುರೆ ಪ್ರಾಣ ಬಿಟ್ಟಿದ್ದಾರೆ ಎಂದು ಮನ್ ಮೀತ್ ಸ್ನೇಹಿತ ಮಂಜಿತ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಕೊನೆಯದಾಗಿ ಒನ್ನ ಸೆಕ್ಯೂರಿಟಿ ಗಾರ್ಡ್ ಧಾವಿಸಿದ್ದಾರೆ. ನಟನನ್ನು ಕೆಳಗೆ ಇಳಿಸಿ ಕುತ್ತಿಗೆಗೆ ಕಟ್ಟಿಕೊಂಡಿದ್ದ ದುಪ್ಪಟ್ಟಾ ಬಿಚ್ಚಲಾಗಿದೆ.ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲೇ ನಟನ ಪ್ರಾಣ ಹಾರಿಹೋಗಿತ್ತು. 8500 ಸಾವಿರ ರೂ. ಬಾಡಿಗೆ ಕಟ್ಟಲು ನಟ ಹೆಣಗಾಡುತ್ತಿದ್ದರು. ಎರಡು ವರ್ಷದ ಹಿಂದೆ ಮದುವೆಯಾಗಿದ್ದ ನಟ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.