ವಿಧಾನಸಭೆಯಲ್ಲಿ ಕರ್ನಾಟಕ ಬೂಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಅಯೋಧ್ಯೆ ಬೆನ್ನಲ್ಲೇ ಮಥುರಾ ಕೃಷ್ಣ ಜನ್ಮ ಭೂಮಿ ವಿವಾದ ಭುಗಿಲೆದ್ದಿದೆ. ಸಿಎಸ್‌ಕೆ ಅಭಿಮಾನಿಗಳು ನಾಯಕ ಧೋನಿ ಸಿಹಿ ಸುದ್ದಿ ನೀಡಿದ್ದಾರೆ. ಕನ್ನಡ ಚಿತ್ರರಂಗದ ಹಾಸ್ಯನಟ ಶರಣ್ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಹುಟ್ಟು ಹಬ್ಬ ಸಂಭ್ರಮ, ರಾಜ್ಯದ ಮೂವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಗಿಫ್ಟ್ ಸೇರಿದಂತೆ ಸೆಪ್ಟೆಂಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ವಿರೋಧದ ನಡುವೆಯೂ ಕರ್ನಾಟಕ ಭೂಸುಧಾರಣೆ ತಿದ್ದುಪಡಿ ವಿಧೇಯಕ ಅಂಗೀಕಾರ!...
ರೈತ ಸಂಘಟನೆ ಹಾಗೂ ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಕರ್ನಾಟಕ ಬೂಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ.
ಅಯೋಧ್ಯೆ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿದ ಕೃಷ್ಣ ಜನ್ಮಭೂಮಿ ವಿವಾದ, ಈದ್ಗಾ ಮರೆಯಾಗುತ್ತಾ?...
ಕೃಷ್ಣ ಜನ್ಮಭೂಮಿ ವಿಚಾರ ಸದ್ದು ಮಾಡಲಾರಂಭಿಸಿದೆ. ಮಥುರಾದ ನ್ಯಾಯಾಲಯದಲ್ಲಿ ಈ ವಿಚಾರವಾಗಿ ಅರ್ಜಿ ಸಲ್ಲಿಸಲಾಗಿದ್ದು, ಕೃಷ್ಣ ಜನ್ಮಭೂಮಿಯ ಪ್ರತಿ ಇಂಚು ಜಾಗವೂ ಕೃಷ್ಣನ ಭಕ್ತರು ಹಾಗೂ ಹಿಂದೂ ಸಮುದಾಯದವರಿಗೆ ಪವಿತ್ರವಾದುದು' ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಡಾ. ಸಿಂಗ್ ಹುಟ್ಟುಹಬ್ಬ: 'ನಿಮ್ಮ ಪ್ರಾಮಾಣಿಕತೆ, ಶಿಸ್ತು ಹಾಗೂ ಸಮರ್ಪಣೆ ನಮಗೆ ಪ್ರೇರಣೆ!'...
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ಅವರು ತಮ್ಮ 88ನೇ ಜನ್ಮ ಜನ್ಮದಿನವನ್ನಾಚರಿಸುತ್ತಿದ್ದಾರೆ. ಮಾಜಿ ಪಿಎಂ ಎಚ್. ಡಿ. ದೇವೇಗೌಡ ಸೇರಿ ದೇಶದ ದಿಗ್ಗಜ ನಾಯಕರು ಡಾ. ಸಿಂಗ್‌ಗೆ ಶುಭ ಕೋರಿದ್ದಾರೆ.
ಕನ್ನಡಿಗರ ಪ್ರೀತಿ ನೆನೆದೆರೆ ಕಣ್ಣೀರು ಬರುತ್ತೆ: ತಮಿಳು, ಆಂಧ್ರದಲ್ಲೂ ಇದನ್ನೇ ಹೇಳಿದ್ದ ಎಸ್‌ಪಿಬಿ!...
ಕನ್ನಡಿಗರು ನನಗೆ ತೋರಿಸುತ್ತಿರುವ ಪ್ರೀತಿಗೆ ಯಾವ ರೀತಿ ಋುಣ ಸಂದಾಯ ಮಾಡಬೇಕೋ ಗೊತ್ತಾಗುತ್ತಿಲ್ಲ. ಇದೇ ಮಾತನ್ನು ತಮಿಳುನಾಡು, ಆಂಧ್ರದಲ್ಲೂ ಹೇಳಿದ್ದೇನೆ. ಕನ್ನಡಿಗರ ಪ್ರೀತಿ ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ’ ಎಂದಿದ್ದರು ಎಸ್.ಪಿ. ಬಾಲಸುಬ್ರಹ್ಮಣ್ಯಂ.
IPL 2020: ಸೋಲಿನ ಬೆನ್ನಲ್ಲೇ CSK ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಧೋನಿ..!...
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆ ಬಳಿಕ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಲಟ್ಸ್ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಇದರ ನಡುವೆಯೇ ಧೋನಿ ಸಿಎಸ್‌ಕೆ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ನೀಡಿದ್ದಾರೆ.
ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಶರಣ್...
ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ಹಾಸ್ಯನಟ ಶರಣ್ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಅವತಾರ' ಪುರುಷ ಆ್ಯಕ್ಷನ್ ದೃಶ್ಯದ ಶೂಟಿಂಗ್ ವೇಳೆ ಅನಾರೋಗ್ಯಕ್ಕೀಡಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗೆಂದು ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Jioದಿಂದ ಮತ್ತೊಂದು ಕೊಡುಗೆ: ವಿಮಾನದೊಳಗೆ ಮೊಬೈಲ್ ಸೇವೆ!...
ಜಿಯೋ ಹಾಗೂ ಪ್ಯಾನಸೊನಿಕ್ ಏವಿಯೋನಿಕ್ಸ್ ಕಾರ್ಪೊರೇಷನ್ ಅಂಗ ಸಂಸ್ಥೆಯಾದ ಏರೋಮೊಬೈಲ್ ಸಹಯೋಗದೊಂದಿಗೆ ಭಾರತದಲ್ಲಿ ಇದೇ ಮೊದಲ ಬಾರಿಗೆ ವಿಮಾನದೊಳಗೆ ಸೇವೆ (In- flight services) ದೊರೆಯಲಿದೆ. ಇದು ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಗ್ರಾಹಕರಿಗೆ ಈ ಸೇವೆ ಸಿಗಲಿದೆ.
ಜಿಎಸ್‌ಟಿ ಪರಿಹಾರ ಬೇರೆಡೆ ಬಳಸಿದ ಕೇಂದ್ರ!...
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟಭರಿಸಲು ಸಂಗ್ರಹಿಸಲಾಗಿದ್ದ ಪರಿಹಾರ ಸೆಸ್ ಪೈಕಿ 47,272 ಕೋಟಿ ರು. ಅನ್ನು ಕೇಂದ್ರ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದೆ. ತನ್ಮೂಲಕ ನಿಯಮ ಉಲ್ಲಂಘನೆ ಮಾಡಿದೆ ಎಂದು ಮಹಾಲೇಖಪಾಲರು (ಸಿಎಜಿ) ಚಾಟಿ ಬೀಸಿದ್ದಾರೆ.
ಕೇಂದ್ರದಿಂದ ಬಂಪರ್ ಕೊಡುಗೆ; ಭಾರತದಲ್ಲಿ EV ಬ್ಯಾಟರಿ ನಿರ್ಮಾಣಕ್ಕೆ ಯೊಜನೆ!...
ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟ ಉತ್ತೇಜಿಸಲು ಕೇಂದ್ರ ಸರ್ಕಾರ FAME II ಯೋಜನೆಯಡಿ ಹಲವು ಸ್ಕೀಂ ಜಾರಿಗೆ ತಂದಿದೆ. ಸಬ್ಸಿಡಿ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದೆ. ಆದರೆ ಎಲೆಕ್ಟ್ರಿಕ್ ವಾಹನಗಳು ಕೈಗೆಟುಕುವ ದರದಲ್ಲಿಲ್ಲ. ಇದೀಗ ಕೇಂದ್ರ ಹೊಸ ಪ್ಲಾನ್ ರೆಡಿ ಮಾಡಿದೆ. ಭಾರತದಲ್ಲೇ ಬ್ಯಾಟರಿ ನಿರ್ಮಾಣ ಮಾಡಲು ಮುಂದಾಗಿದೆ.
ಬಿಜೆಪಿಯಲ್ಲಿ ಬಿಗ್ ಚೇಂಜ್: ರಾಜ್ಯದ ಮೂವರು ನಾಯಕರಿಗೆ ಹೈಕಮಾಂಡ್ ಗಿಫ್ಟ್...
ಜೆ.ಪಿ.ನಡ್ಡಾ ಅಧ್ಯಕ್ಷರಾಗಿ 8 ತಿಂಗಳುಗಳ ಬಳಿಕ ಪಕ್ಷದ ಪದಾಧಿಕಾರಿಗಳ ಬದಲಾವಣೆ ಮಾಡಿದ್ದು, ಹೊಸ ಮುಖಗಳಿಗೆ ಆಧ್ಯತೆ ನೀಡಲಾಗಿದೆ. ಇದರಲ್ಲಿ ಕರ್ನಾಟಕ ಮೂವರು ನಾಯರುಗಳಿಗೆ ಅವಕಾಶ ನೀಡಲಾಗಿದೆ.