ಬಿಜೆಪಿಯಲ್ಲಿ ಬಿಗ್ ಚೇಂಜ್: ರಾಜ್ಯ ನಾಯಕರಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್

By Suvarna News  |  First Published Sep 26, 2020, 4:30 PM IST

ಜೆ.ಪಿ.ನಡ್ಡಾ ಅಧ್ಯಕ್ಷರಾಗಿ 8 ತಿಂಗಳುಗಳ ಬಳಿಕ ಪಕ್ಷದ ಪದಾಧಿಕಾರಿಗಳ ಬದಲಾವಣೆ ಮಾಡಿದ್ದು, ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇದರಲ್ಲೂ ಕರ್ನಾಟಕ ಮೂವರು ನಾಯರುಗಳಿಗೆ ಪ್ರಮುಖ ಹುದ್ದೆ ಸಿಕ್ಕಿದೆ.


ಬೆಂಗಳೂರು, (ಸೆ.26): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಹೊಸ ಪದಾಧಿಕಾರಿಗಳನ್ನ ನೇಮಕ ಮಾಡಿದ್ದಾರೆ.

 ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ್​ ಮಾಧವ್​, ಪಿ ಮುರಳಿಧರ್​ ರಾವ್​, ಅನಿಲ್​ ಜೈನ್​, ಸರೋಜ್​ ಪಾಂಡೆ ಜಾಗಕ್ಕೆ ಹೊಸಬರ ನೇಮಕವಾಗಿದೆ.

Tap to resize

Latest Videos

"

ಪದಾಧಿಕಾರಿಗಳ ನೇಮಕದಲ್ಲಿ ಕರ್ನಾಟಕದ ಕೆಲ ನಾಯಕರುಗಳಿಗೆ ಮಹತ್ವದ ಹುದ್ದೆಗಳನ್ನ ನೀಡಲಾಗಿದ್ದು, ಅದರಲ್ಲೂ ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನ ನೇಮಕ ಮಾಡಲಾಗಿದೆ.

‘ಸಿಎಂ ಬದಲಾವಣೆ’ ಎಲ್ಲಿಗೆ ಬಂತು? ಇನ್ನೂ 15 ದಿನ ಶಾ ಸಿಗೋದಿಲ್ಲ..!

ಬಿ.ಎಲ್. ಸಂತೋಷ್, ಸಂಘಟನೆಯ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಆಗಿ ಕಾರ್ಯ ಮುಂದುವರಿಯಲಿದ್ದಾರೆ. ಇನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ.ರವಿ ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರನ್ನ ರಾಷ್ಟ್ರೀಯ ವಕ್ತಾರರಾಗಿ ನೇಮಕ ಮಾಡಲಾಗಿದೆ. 

ಸಿ.ಟಿ ರವಿ ಅವರು 4 ವರ್ಷ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಆಗಿ ಅನುಭವ ಇದೆ. ಹಾಗೂ ಸಂಘದ ಹಿನ್ನಲೆಯುಳ್ಳವರು. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾ ಕಾರ್ಯದರ್ಶಿ ಆಗಿ ನೇಮಕವಾಗಿದ್ದಾರೆ.

ಒಟ್ಟಿನಲ್ಲಿ ರಾಷ್ಟ್ರೀಯ ಬಿಜೆಪಿಯ ಪದಾಧಿಕಾರಿಗಳ ನೇಮಕದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಕರ್ನಾಟಕದವರಿಗೆ ಅಗ್ರಪಾಲು ಸಿಕ್ಕಂತಾಗಿದೆ

click me!