ಲಾಕ್‌ಡೌನ್‌ ನಿಯಮ ಮತ್ತೆ ಜಾರಿ, ಬೆಂಗ್ಳೂರಿನಿಂದ ಊರಿನತ್ತ ಜನರ ಸವಾರಿ; ಜು.4ರ ಟಾಪ್ 10 ಸುದ್ದಿ!

By Suvarna NewsFirst Published Jul 4, 2020, 4:39 PM IST
Highlights

ದೇಶದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಮೀರಿ ಸಾಗುತ್ತಿದೆ. ಇದೀಗ ಸೋಂಕಿತರ ಸಂಖ್ಯ 7 ಲಕ್ಷ ಸನಿಹಕ್ಕೆ ತಲುಪುತ್ತಿದೆ. ಬೆಂಗಳೂರಿನಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಜನರು ನಗರ ತೊರೆದು ಊರಿನತ್ತ ತೆರಳುತ್ತಿದ್ದಾರೆ. ಇಂದು ರಾತ್ರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗುತ್ತಿದೆ. ನಾಳೆ ಸಂಭವಿಸಲಿರುವ ಚಂದ್ರ ಗ್ರಹಣ ಭಾರತದ ಮೇಲೆ ಬೀರೋ ಪ್ರಭಾವವೇನು? 2011ರ ವಿಶ್ವಕಪ್ ಫೈನಲ್ ಪಂದ್ಯ ತನಿಖೆ, ಮುಂಬೈನಲ್ಲಿರುವ ಉಬರ್ ಕಚೇರಿ ಕ್ಲೋಸ್ ಸೇರಿದಂತೆ ಜುಲೈ 4ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

ಚೀನಾಕ್ಕೆ ಪೆಟ್ಟಿನ ಮೇಲೆ ಪೆಟ್ಟು!...

ಗಲ್ವಾನ್‌ನಲ್ಲಿ ಸಂಘರ್ಷ ನಡೆಸಿದ ಬಳಿಕ ಚೀನಾಕ್ಕೆ ಭಾರತ ಸರಣಿ ಪೆಟ್ಟುಗಳನ್ನು ನೀಡುತ್ತಲೇ ಬಂದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಗಡಿಗೆ ಭೇಟಿ ನೀಡುವುದರೊಂದಿಗೆ ಭಾರತ ಯಾವ ಬೆದರಿಕೆಗೂ ಮಣಿಯುವುದಿಲ್ಲ ಎಂಬ ಸ್ಪಷ್ಟಸಂದೇಶ ರವಾನಿಸಿದ್ದಾರೆ. ಗಲ್ವಾನ್‌ನಲ್ಲಿ ಕಾಲು ಕೆರೆದು ಜಗಳಕ್ಕೆ ಬಂದ ಚೀನಾ ಅನುಭವಿಸಿದ ಪ್ರಮುಖ ಮುಖಭಂಗ, ನಷ್ಟಗಳ ಪಟ್ಟಿಇಲ್ಲಿದೆ.

ದೇಶದಲ್ಲಿ 6.40 ಲಕ್ಷ ಮಂದಿಗೆ ಕೊರೋನಾ: 3.92 ಲಕ್ಷ ಜನರು ಗುಣಮುಖ!...

ದೇಶಾದ್ಯಂತ ಹೊಸ ಸೋಂಕು ಬೆಳಕಿಗೆ ಬರುವ ಪ್ರಮಾಣದ ನಾಗಾಲೋಟ ಮುಂದುವರೆದಿದ್ದು, ಶುಕ್ರವಾರ 23010 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇದು ಈವರೆಗಿನ ದೈನಂದಿನ ಗರಿಷ್ಠವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 640843 ಮುಟ್ಟಿದೆ.

ಮಾಜಿ ಪ್ರೇಯಸಿಯ ಪತಿಗೆ ನಗ್ನ ವಿಡಿಯೋ ಕಳಿಸಿದ!

ಲಿವಿಂಗ್‌ ಟುಗೆದರ್‌ನಲ್ಲಿದ್ದ ಪ್ರೇಯಸಿ ಮತ್ತೊಬ್ಬನೊಂದಿಗೆ ವಿವಾಹವಾಗಿದ್ದಕ್ಕೆ ಆಕ್ರೋಶಗೊಂಡ ಆರೋಪಿ ಆಕೆಯ ಖಾಸಗಿ ವಿಡಿಯೋಗಳನ್ನು ಪತಿಗೆ ಕಳುಹಿಸಿ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

'ಹಿಂದಿದ್ದ ಲಾಕ್‌ಡೌನ್‌ ನಿಯಮ ಮತ್ತೆ ಜಾರಿ'...

ಈ ಹಿಂದೆ ಲಾಕ್‌ಡೌನ್‌ ಸಂದರ್ಭದಲ್ಲಿ ಆಗಿದ್ದ ಕ್ರಮಗಳು ಯಥಾ ಪ್ರಕಾರ ಜಾರಿಯಾಗಲಿವೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದ್ದಾರೆ.

ಹೆಚ್ಚಾಗುತ್ತಿದೆ ಕೊರೊನಾ; ಊರುಗಳತ್ತ ಲಗೇಜ್ ಸಮೇತ ಹೊರಟಿದ್ದಾರೆ ಜನ

ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿವೆ.  ಹಾಗಾಗಿ ಇಂದೇ ಲಗೇಜ್ ಸಮೇತ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಮನೆ ಖಾಲಿ ಮಾಡಿ ಲಗೇಜ್ ಸಮೇತ ಹೊರಟಿದ್ದಾರೆ. ಈಗಾಗಲೇ 3 ತಿಂಗಳು ಲಾಕ್‌ಡೌನ್‌ನಿಂದ ನಷ್ಟವಾಗಿದೆ. ಇನ್ನೂ ಲಾಕ್‌ಡೌನ್ ಆದರೆ ಕಷ್ಟವಾಗುತ್ತೆ. ಹಾಗಾಗಿ ಹಳ್ಳಿಗಳತ್ತ ಮುಖ ಮಾಡಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖಾ ತಂಡಕ್ಕೆ ಕೊನೆಗೂ ಸಿಕ್ಕಿದ್ದೇನು..?

2011ರ ವಿಶ್ವಕಪ್ ಫೈನಲ್ ಮ್ಯಾಚ್‌ ಫಿಕ್ಸಿಂಗ್ ಮಾಡಲಾಗಿತ್ತುವ ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಮಾತು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು. ಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿ, ಯಾರನ್ನು ಬೇಕಾದರೂ ತನಿಖೆ ನಡೆಸಿ ಎಂದು ಪೂರ್ಣ ಸ್ವಾತಂತ್ರ್ಯ ನೀಡಿತು. ಬಳಿಕ ಆದ ಬೆಳವಣಿಗೆಗಳೇನು ಎನ್ನುವುದನ್ನು ಸುವರ್ಣ ನ್ಯೂಸ್.ಕಾಂ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಿದೆ.

ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಪ್ರಭಾವ ಯಾವ ರೀತಿ ಇರಲಿದೆ?

ನಾಳೆ ಸಂಭವಿಸಲಿರುವ ಚಂದ್ರ ಗ್ರಹಣಕ್ಕೆ ನಭೋ ಮಂಡಲ ಸಾಕ್ಷಿಯಾಗಲಿದೆ. ಒಂದು ತಿಂಗಳಲ್ಲಿ ಮೂರು ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಗ್ರಹಣ ಅಂದ ಕೂಡಲೇ ಆತಂಕ ಶುರುವಾಗುತ್ತೆ. ನಾಳೆ ಸಂಭವಿಸಲಿರುವ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಇದರ ಪ್ರಭಾವ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಜ್ಯೋತಿಷಿಗಳು ಹೆಚ್ಚಿನ ಮಾಹಿತಿ ನೀಡುತ್ತಾರೆ..!

ಲಾಕ್‌ಡೌನ್ ಸಡಿಲಿಕೆಯಾದ್ರೂ ಚೇತರಿಕೆ ಕಂಡಿಲ್ಲ ಬಿಸ್‌ನೆಸ್; ಮುಂಬೈನ ಉಬರ್ ಕಚೇರಿ ಕ್ಲೋಸ್!...

ಲಾಕ್‌ಡೌನ್ ಸಡಿಲಿಕೆಯಾದರೂ ಕೊರೋನಾ ವೈರಸ್ ಆರ್ಭಟವೇನು ಕಡಿಮೆಯಾಗಿಲ್ಲ. ಇತ್ತ ಉದ್ಯಮಗಳು ಚೇತರಿಕೆ ಕಂಡಿಲ್ಲ. ಇಷ್ಟು ದಿನ ಹೇಗೋ ತಳ್ಳಿದ ಕಂಪನಿಗಳು ಇದೀಗ ನಷ್ಠ ತಾಳಲಾರದೆ ಬಾಗಿಲು ಮುಚ್ಚುತ್ತಿವೆ. ಇದೀಗ ಉಬರ್ ಕಂಪನಿ ಮುಂಬೈ ಕಚೇರಿಯನ್ನು ಮುಚ್ಚಿದೆ.

ಇನ್ಫೋಸಿಸ್‌ ಟೆಕ್ ಲೀಡ್, 2 ಮಕ್ಕಳ ತಾಯಿ; ಬೇಡಿಕೆಯ ಟಾಲಿವುಡ್‌ ನಟಿ!

ಇನ್ಫೋಸಿಸ್‌ನಂಥ ಪ್ರತಿಷ್ಠಿತ ಕಂಪನಿಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿ, ಕುಟುಂಬವನ್ನು ನಿಭಾಯಿಸಿಕೊಂಡು,10ಕ್ಕೂ ಹೆಚ್ಚು ತೆಲುಗು ಸಿನಿಮಾದಲ್ಲಿ ಮಿಂಚಿರುವ ಪಾವನಿ ಗಂಗಿರೆಡ್ಡಿ....ಲೈಫ್‌ ಹೇಗಿದೆ ನೋಡಿ..

ಹೊಂಡಾ ಸಿಟಿ ಕಾರು ಬಿಡುಗಡೆ ದಿನಾಂಕ ಬಹಿರಂಗ!...

2020ರ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ಹಲವು ಕಾರುಗಳು ಕೊರೋನಾ ವೈರಸ್ ಕಾರಣ ವಿಳಂಬವಾಗಿದೆ. ಇದೀಗ ಒಂದೊಂದೆ ಕಾರುಗಳು ಬಿಡುಗಡೆಯಾಗುತ್ತಿದೆ. ಇದೀಗ ಹೊಂಡಾ ಸರದಿ. ಹೊಂಡಾದ ಬಹುನಿರೀಕ್ಷಿತ ಹೊಂಡಾ ಸಿಟಿ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.  ಬಿಡುಗಡೆ ದಿನಾಂಕವನ್ನು ಹೊಂಡಾ ಬಹಿರಂಗ ಪಡಿಸಿದೆ.

click me!