
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿಯಾಯಿತು. ಆದರೆ, ಬಹುಮತ ಸಾಬೀತು ಮಾಡುವ ಮುನ್ನ ಹಲವಾರು ಪ್ರಕ್ರಿಯೆಗಳನ್ನು ಮುಗಿಸಬೇಕು. ಇದರಲ್ಲಿ ರಾಜ್ಯಪಾಲರು ಹಾಗೂ ಹೊಸ ಮುಖ್ಯಮಂತ್ರಿಯ ಜವಾಬ್ದಾರಿಗಳೇನು?
- ರಾಜ್ಯಪಾಲರು ಸದನದ ಹಿರಿಯ ಸದಸ್ಯರೊಬ್ಬರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವರು.
- ಹಂಗಾಮಿ ಸ್ಪೀಕರ್ ಎಲ್ಲ ಹೊಸ ಚುನಾಯಿತ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸುವರು.
- ಹೊಸ ಸ್ಪೀಕರ್ ಆಯ್ಕೆ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ನಿರ್ವಹಿಸುವರು.
- ಹಂಗಾಮಿ ಸ್ಪೀಕರ್ಗೆ ವಿಶ್ವಾಸ ಮತ ಯಾಚನೆ ಕಲಾಪ ನಡೆಸುವ ಅಧಿಕಾರ ಇರುವುದಿಲ್ಲ.
- ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ಅವರಿಗೆ ವಿಪ್ ನೀಡುವ ಅಧಿಕಾರ ಪಕ್ಷಕ್ಕೆ ಇರುವುದೇ? ಎಂಬುವುಜು ಈಗ ಚರ್ಚೆಯ ವಿಷಯವಾಗುತ್ತಿದೆ.
- ಚುನಾಯಿತ ಅಭ್ಯರ್ಥಿಯು ಪ್ರಮಾಣ ವಚನ ಸ್ವೀಕರಿಸಿದ ನಂತರವಷ್ಟೇ ಅಧಿಕೃತ ಶಾಸಕರಾಗುತ್ತಾರೆ.
- ಆಯ್ಕೆಯಾಗುವ ಹೊಸ ಸ್ಪೀಕರ್ ಅವರಿಂದಲೇ ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ ನಡೆಯಬೇಕು.
- ಒಂದು ವೇಳೆ ಹೊಸ ಸ್ಪೀಕರ್ ಆಯ್ಕೆಯಲ್ಲೇ ಬಿಜೆಪಿಗೆ ಹಿನ್ನಡೆಯಾದರೆ, ವಿಶ್ವಾಸ ಮತದಲ್ಲೂ ಹಿನ್ನಡೆಯಾದಂತೆ.
- ಸದನದಲ್ಲಿ ಹಾಜರಿರುವ ಒಟ್ಟು ಶಾಸಕರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಒಂದು ಜಾಸ್ತಿ ಮತ ಬಿಎಸ್ವೈಗೆ ಸಿಕ್ಕರೂ, ಬಿಎಸ್‌ವೈ ಸರ್ಕಾರಕ್ಕೆ ಬಹುಮತ ಸಿಕ್ಕಂತೆ
- ಒಮ್ಮೆ ಬಹುಮತ ಸಿಕ್ಕರೆ 6 ತಿಂಗಳವರೆಗೆ ಬಹುಮತ ಸಾಬೀತು ಮಾಡಬೇಕಾಗಿಲ್ಲ.
ಐಪಿಎಲ್ ಆಟಗಾರರ ರೀತಿ ಶಾಸಕರ ಹರಾಜು
ಬಿಎಸ್‌ವೈ ಅಧಿಕಾರ ಸ್ವೀಕರಿಸಿದ ನಾಲ್ಕು ಗಂಟೆಯಲ್ಲೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಹೊಸ ಅಭಿಯಾನಕ್ಕೆ ಪ್ರಕಾಶ್ ರೈ ಚಾಲನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.