ಮತ್ತೆ ಸಂಪುಟ ವಿಸ್ತರಣೆ ಇದೆಯಣ್ಣ, ಸಲ್ಮಾನ್ ಕೈ ಹಿಡೀತಾರ ಮಂದಣ್ಣ? ಫೆ.13ರ ಟಾಪ್ 10 ಸುದ್ದಿ

Suvarna News   | Asianet News
Published : Feb 13, 2020, 04:58 PM IST
ಮತ್ತೆ ಸಂಪುಟ ವಿಸ್ತರಣೆ ಇದೆಯಣ್ಣ, ಸಲ್ಮಾನ್ ಕೈ ಹಿಡೀತಾರ ಮಂದಣ್ಣ? ಫೆ.13ರ ಟಾಪ್ 10 ಸುದ್ದಿ

ಸಾರಾಂಶ

ಸಂಪುಟ ರಚನೆ ಸರ್ಕಸ್ ಮುಗಿದರೂ ಸೂಕ್ತ ಸ್ಥಾನ ಸಿಗಲಿಲ್ಲ ಅನ್ನೋ ಅಳಲು ಇನ್ನೂ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ 3ನೇ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗಿದ್ದಾರೆ. ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್‌ಗೆ ನಾಯಕಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ, ಭಾರತೀಯ ಆಟೋಮೊಬೈಲ್‌ಗೆ ಮತ್ತೊಂದು ಹೊಡೆತ ಸೇರಿದಂತೆ ಫೆಬ್ರವರಿ 13ರ ಟಾಪ್ 10 ಸುದ್ದಿ ಇಲ್ಲಿವೆ.

ದೆಹಲಿ ಚುನಾವಣೆ ಗೆದ್ದ 24 ಗಂಟೆಯೊಳಗೆ ಆಮ್ ಆದ್ಮಿಗೆ ಮತ್ತೊಂದು ಜಾಕ್‌ಪಾಟ್!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ದಾಖಲೆಯ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿರುವ ಆಪ್ ಸತತ ಮೂರನೇ ಬಾರಿ ದೆಹಲಿಯಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. ಐಐಟಿ ಪದವೀಧರ ಕೇಜ್ರೀವಾಲ್, ಭಾನುವಾರ ಮೂರನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಎಲ್ಲಾ ಸಂಭ್ರಮದ ನಡುವೆ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

'ರೇಣುಕಾಚಾರ್ಯ ಡಿಕೆಶಿಯನ್ನ ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿರಬಹುದು'

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ,  ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದು ಅಚ್ಚರಿ ಮೂಡಿಸಿದೆ. ಇನ್ನು ಈ ಬಗ್ಗೆ ಸಿಟಿ ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮತ್ತೆ ಬಿಎಸ್‌ವೈ ಸಂಪುಟ ವಿಸ್ತರಣೆ? ಯಾರಿಗೆಲ್ಲಾ ಸಿಗುತ್ತೆ ಮಂತ್ರಿಗಿರಿ?

ಬಜೆಟ್‌ ಅಧಿವೇಶನಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೂರನೇ ಹಂತದ ಸಂಪುಟ ವಿಸ್ತರಣೆ ಕೈಗೊಳ್ಳುವ ಸಾಧ್ಯತೆಯಿದೆ ಎಂಬ ಮಾತು ಆಡಳಿತಾರೂಢ ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

ಕೊಹ್ಲಿಗೆ ಮಾಹಿತಿ ನೀಡದೆ RCB ಪೋಸ್ಟ್ ಡಿಲೀಟ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧೀಕೃತ ಸಾಮಾಜಿಕ ಜಾಲತಾಣ ಖಾತೆಗಳ ಪೋಸ್ಟ್ ಹಾಗೂ ಪ್ರೋಫೈಲ್ ಪಿಕ್ಟರ್ ಡಿಲೀಟ್ ಘಟನೆ ಇದೀಗ  ಹಲವು ಅಚ್ಚರಿಗೆ ಕಾರಣವಾಗಿದೆ. ಡಿಲೀಟ್ ಕುರಿತು ನಾಯಕ ವಿರಾಟ್ ಕೊಹ್ಲಿಗೆ ಮಾಹಿತಿಯೇ ನೀಡಿಲ್ಲ ಅನ್ನೋದು ಬಹಿರಗವಾಗಿದೆ.

ಸಲ್ಮಾನ್‌ ಕೈ ಹಿಡಿಯುತ್ತಾರಾ ರಶ್ಮಿಕಾ? ಹಾಗಾದ್ರೆ ಪೂಜಾ ಹೆಗ್ಡೆ ಕಥೆ ಏನು?

ಟಾಲಿವುಡ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುವ ಕನ್ನಡದ ನಾಯಕಿಯರು ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ.ಇದೀಗ ಸಲ್ಮಾನ್ ಖಾನ್‌ಗೆ ನಾಯಕಿಯಾಗಲಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ನಲಪಾಡ್‌ ಆಯ್ತು, ಆ್ಯಕ್ಸಿಡೆಂಟ್ ಸುಳಿಯಲ್ಲಿ ಈಗ ಅಶೋಕ್ ಪುತ್ರನ ಸರದಿ?

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮಹಮ್ಮದ್ ಮಾಡಿದೆನ್ನಲಾದ ಅಪಘಾತ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಬಳ್ಳಾರಿಯಲ್ಲಿ ನಡೆದ ಅಪಘಾತವೊಂದರಲ್ಲಿ ಸಚಿವ ಆರ್. ಆಶೋಕ್ ಪುತ್ರನ ಹೆಸರು  ಥಳುಕು ಹಾಕಿಕೊಂಡಿದೆ.

ಬೋಲ್ಟ್‌ಗಿಂತ ಸ್ಪೀಡ್ ಈ ತುಳುನಾಡ ಕಂಬಳವೀರ: ವೇಗಕ್ಕೆ ಸಾಟಿಯೇ ಇಲ್ಲ!

ದಕ್ಷಿಣ ಕನ್ನಡದ ಗ್ರಾಮೀಣ ಕ್ರೀಡೆ ಕಂಬಳದಲ್ಲಿ, ಕಂಬಳವೀರನೊಬ್ಬ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಅಂದಹಾಗೇ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿದ 'ತುಳುನಾಡ ಉಸೇನ್ ಬೋಲ್ಟ್' ಬೇರಾರೂ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶ್ರೀನಿವಾಸಗೌಡ. 

ಭಾರತೀಯ ಆಟೋಮೊಬೈಲ್‌ಗೆ ಮತ್ತೊಂದು ಹೊಡೆತ, ಮೋದಿ ಸರ್ಕಾರಕ್ಕೆ ಆತಂಕ!

ಕಳೆದ ವರ್ಷ ವಾಹನ ಮಾರಾಟ ಕುಸಿತದಿಂದ ಭಾರತದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇದು ಮೋದಿ ಸರ್ಕಾರಕ್ಕೆ ಇನ್ನಿಲ್ಲದ ತಲೆನೋವಾಗಿ ಪರಿಣಮಿಸಿತ್ತು. ಇದೀಗ ವರ್ಷದ ಆರಂಭದಲ್ಲೇ ಭಾರತೀಯ ಆಟೋಮೊಬೈಲ್ ಕಂಪನಿಗೆ ಬಿದ್ದಿರುವ ಹೊಡೆತ ಕೇಂದ್ರ ಸರ್ಕಾರದ ಆತಂಕ ಹೆಚ್ಚಿಸಿದೆ.

ಕರ್ನಾಟಕ ಬಂದ್: ಸರೋಜಿನಿ ಮಹಿಷಿ ವರದಿಯಲ್ಲೇನಿದೆ?, ಕನ್ನಡಿಗರಿಗೇನು ಲಾಭ?

 ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಕೋರಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಈ ಬಂದ್‌ಗೆ ಸುಮಾರು 400 ಸಂಘಟನೆಗಳು ಬೆಂಬಲಿಸಿದ್ದವು. ಆದರೆ ಈ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಿಖಿಲ್‌ ಕುಮಾರಸ್ವಾಮಿ ಭಾವೀ ಪತ್ನಿಗೆ ಈ ಕೆಲಸ ಬೇಕಂತೆ!

ನಿಶ್ಚಿತಾರ್ಥ ಮಾಡಿಕೊಂಡು, ದೇಶದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕೈ ಹಿಡಿಯಲು ಹೊರಟಿರುವ ರೇವತಿಗೆ ಕೆರೀರ್ ಬಗ್ಗೆ ತಮ್ಮದೇ ಆದ ಕನಸುಗಳಿವೆ. ರೇವತಿ Architectureನಲ್ಲಿ ಪದವಿ ಪಡೆದಿದ್ದಾರೆ. ಎಂಜಿನಿಯರಿಂಗ್ ಪದವಿಯೊಂದಿಗೆ ತಮ್ಮ ನೆಚ್ಚಿನ ಜ್ಯುವೆಲರಿ ಡಿಸೈನಿಂಗ್‌ ಕೋರ್ಸನ್ನೂ ಮಾಡಿದ್ದಾರಂತೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ