ಕುತೂಹಲದತ್ತ ಬಿಜೆಪಿ ಶಾಸಕರ ನಡೆ, ದೀಪಿಕಾ ಆದಾಯಕ್ಕಿಲ್ಲ ಅಡೆ-ತಡೆ; ಫೆ.20ರ ಟಾಪ್ 10 ಸುದ್ದಿ!

Suvarna News   | Asianet News
Published : Feb 20, 2020, 05:58 PM IST
ಕುತೂಹಲದತ್ತ ಬಿಜೆಪಿ ಶಾಸಕರ ನಡೆ, ದೀಪಿಕಾ ಆದಾಯಕ್ಕಿಲ್ಲ ಅಡೆ-ತಡೆ; ಫೆ.20ರ ಟಾಪ್ 10 ಸುದ್ದಿ!

ಸಾರಾಂಶ

ರಾಜ್ಯ ಬಿಜೆಪಿಯ 25 ಶಾಸಕರು ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ. ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಮೊದಲ ಹಂತದ ಗೆಲುವು ಸಿಕ್ಕಿದೆ. ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದೀಪಿಕಾ ಪಡುಕೊಣೆ ಆದಾಯ ಹಾಗೂ ಐಟಿ, ಉದ್ಯಮಿ ಬಿಆರ್ ಶೆಟ್ಟಿಗೆ ಸಂಕಷ್ಟ ಸೇರಿದಂತೆ  ಫೆಬ್ರವರಿ 20ರ ಟಾಪ್ 10 ಸುದ್ದಿ ಇಲ್ಲಿವೆ.

ಮಹದಾಯಿ ವಿವಾದ: ಕರ್ನಾಟಕ ಬಯಸಿದ್ದು ಅದೇ, ಸುಪ್ರೀಂ ಹೇಳಿದ್ದು ಅದನ್ನೇ..!

ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ..ಎನ್ನುವಂತೆ ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಬಯಸಿದ್ದು ಅದೇ, ಇಂದು (ಗುರುವಾರ) ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ಕೂಡ ಅದೇ ಆಗಿದೆ.

ಮಂಗಳೂರು ಗೋಲಿಬಾರ್: ಕಮಿಷನರ್ ಸೇರಿ 176 ಪೊಲೀಸರಿಗೆ ನೋಟಿಸ್

ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಸೇರಿದಂತೆ 176 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟೀರಿಯಲ್‌ ತನಿಖಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

ಸಂತೋಷ್ ಜತೆ 25 ಶಾಸಕರ ಸಭೆ: ಬಿಜೆಪಿಯಲ್ಲಿ ಕುತೂಹಲದ ಬೆಳವಣಿಗೆ!...

ಆಡಳಿತಾರೂಢ ಬಿಜೆಪಿಯಲ್ಲಿ ಶಾಸಕರ ಸರಣಿ ಸಭೆ, ಅನಾಮಧೇಯ ಪತ್ರದಂಥ ಬೆಳವಣಿಗೆಗಳ ಮಧ್ಯೆಯೇ ದೊಡ್ಡ ಸಂಖ್ಯೆಯ ಶಾಸಕರು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಸಂಚಲನ ಮೂಡಿಸಿದೆ.

ಏಷ್ಯಾಕಪ್‌ ಆತಿಥ್ಯ ಹಕ್ಕು ಬಿಟ್ಟುಕೊಡಲು ಪಾಕ್‌ ರೆಡಿ?

ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಕ್ರಿಕೆಟ್‌ ಟೂರ್ನಿ ಇದೀಗ ಸ್ಥಳಾಂತರವಾಗುವ ಸಾಧ್ಯತೆಯಿದೆ. ಒಂದು ವೇಳೆ ಪಾಕಿಸ್ತಾನದಲ್ಲೇ ಏಷ್ಯಾಕಪ್ ಟೂರ್ನಿ ನಡೆದರೆ ಭಾರತ ತಂಡವು ಭಾಗವಹಿಸುವುದು ಅನುಮಾನ. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿ ಆತಿಥ್ಯದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.

ಇಷ್ಟೆಲ್ಲಾ ಬ್ರ್ಯಾಂಡ್ ರಾಯಭಾರಿ ದೀಪಿಕಾ ಆಗಿದ್ದಾಳೆಂದರೆ IT ಕಥೆ?

'ಐಶ್ವರ್ಯಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಡಿಂಪಲ್‌ ಹುಡ್ಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್‌‌ನ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.  ದೀಪಿಕಾ ಕೈಯಲ್ಲಿ ಸರಿ ಸುಮಾರು - 94 ಕೋಟಿ ಆದಾಯ ನೀಡುವ ಸುಮಾರು 16 ಬ್ರ್ಯಾಂಡ್‌ಗಳಿವೆ....

ಅನಿವಾಸಿ ಕನ್ನಡಿಗ ಬಿ. ಆರ್. ಶೆಟ್ಟಿಗೆ ಸಂಕಷ್ಟ: ತಾವೇ ಸ್ಥಾಪಿಸಿದ ಸಂಸ್ಥೆಯಿಂದ ಹೊರಕ್ಕೆ!...

ಭಾರೀ ಪ್ರಮಾಣದಲ್ಲಿ ಷೇರು ಕುಸಿದ ಪರಿಣಾಮ ಅನಿವಾಸಿ ಭಾರತೀಯ, ಕನ್ನಡಿಗ ಉದ್ಯಮಿ ಬಿ ಆರ್ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಷೇರು ಮಾರುಕಟ್ಟೆ ಕುಸಿತದಿಂದಾಗಿ ಉದ್ಯಮಿ ಬಿ ಆರ್ ಶೆಟ್ಟಿ ತಾವೇ ಸ್ಥಾಪಿಸಿದ್ದ NMC ಹೆಲ್ತ್ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯ ಸದಸ್ಯರ ಒತ್ತಾಯಕ್ಕೆ ಮಣಿದು ಬಿ ಆರ್ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. 

ರಾಜಪಥ ವಸ್ತುಪ್ರದರ್ಶನಕ್ಕೆ ದಿಢೀರ್‌ ಭೇಟಿ: ಭದ್ರತೆ ಕತೆ ಏನು?

ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಜಪಥದಲ್ಲಿ ಆಯೋಜಿಸಿದ್ದ ಹುನರ್‌ ಹಾತ್‌ ವಸ್ತು ಪ್ರದರ್ಶನ ಮೇಳಕ್ಕೆ ದಿಢೀರ್‌ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಈ ವೇಳೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಕೆಲ ಫೋಟೋಗಳು ವೈರಲ್ ಆಗಿವೆ.

ಟಾಟಾ ಸಿಯೆರಾ EV ಕಾರಿಗೆ ಅತ್ಯುತ್ತಮ ಡಿಸೈನ್ ಪ್ರಶಸ್ತಿ!

ಟಾಟಾ ಮೋಟಾರ್ಸ್ ಇತ್ತೀಚೆಗೆ ಹೊರತರುತ್ತಿರುವ ಕಾರುಗಳು ಆಕರ್ಷಕ ವಿನ್ಯಾಸ ಮಾತ್ರವಲ್ಲ, 5 ಸ್ಟಾರ್ ಸೇಫ್ಟಿ ಕೂಡ ಹೊಂದಿದೆ. ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿರುವ ನೂತನ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಇದೀಗ ಬೆಸ್ಟ್ ಡಿಸೈನ್ ಪ್ರಶಸ್ತಿ ಪಡೆದುಕೊಂಡಿದೆ.


'ಆಪರೇಷನ್ ಕಮಲ ಮೂಲಕ ಅನೈತಿಕವಾಗಿ ಹುಟ್ಟಿದ ಕೂಸು ಬಿಜೆಪಿ ಸರ್ಕಾರ'...

ವಿಧಾನಸಭಾ ಕಲಾಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತಿನ ಸಮರ ಮುಂದುವರಿಸಿದ್ದಾರೆ. ಬುಧವಾರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಹುಟ್ಟನ್ನೇ ಪ್ರಶ್ನಿಸಿದರು. ತಮ್ಮದೇ ಧಾಟಿಯಲ್ಲಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಬಿಜೆಪಿಯದ್ದು ಅನೈತಿಕವಾಗಿ ಹುಟ್ಟುಕೊಂಡ ಸರ್ಕಾರ ಎಂದು ಬಣ್ಣಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ