
ಬೀಜಿಂಗ್(ಫೆ.20): ಮಗು ಹಾಲು ಕುಡಿಯುತ್ತಿದ್ದಾಗ ಕಚ್ಚಿದ್ದಕ್ಕೆ ತಾಯಿಯೊಬ್ಬಳು 90 ಬಾರಿ ತನ್ನ ಮಗುವಿಗೆ ಕತ್ತರಿಯಿಂದ ಚುಚ್ಚಿದ್ದಾಳೆ. ನಂತರ ಮಗುವನ್ನು ಮನೆಯ ಹಿಂಭಾಗದಲ್ಲಿ ಬಿಟ್ಟಿದ್ದಾಳೆ. ನಂಬಲು ಕಷ್ಟವಾಗಿದ್ದರೂ ಇಂತಹದೊಂದು ಘಟನೆ ಪೂರ್ವ ಚೀನಾದಲ್ಲಿ ನಡೆದಿದೆ.
ಕ್ಸಿಯಾವೋ ಬಾವೋ ಎಂಬ ಪುಟ್ಟ ಕಂದಮ್ಮ ತಾಯಿಯಿಂದ ಕತ್ತರಿ ದಾಳಿಗೆ ಒಳಗಾದ ಮಗು. ಮಗುವಿಗೆ ಎದೆಹಾಲುಣಿಸುತ್ತಿದ್ದಾಗ 8 ತಿಂಗಳ ಮಗು ಕಚ್ಚಿದ್ದಕ್ಕೆ ತಾಯಿ 90 ಬಾರಿ ಕತ್ತರಿಯಿಂದ ಚುಚ್ಚಿದ್ದಾಳೆ.
ಸ್ನಾನ ಮಾಡುವಾಗ ಫೋನ್ ಬಳಸಿದ ಚೆಲುವೆ: ಅದೇ ಪ್ರಾಣಕ್ಕೇ ಕುತ್ತು ತಂತು ಗುರುವೇ!
ಮಗುವಿನ ಮುಖದ ತುಂಬ ಕತ್ತರಿಯಿಂದ ಗಾಯ ಮಾಡಿದ್ದು, ಬೆನ್ನು, ತೊಡೆ ಕಾಲಿಗೂ ಗಾಯ ಮಾಡಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಮನೆಯ ಹಿಂಭಾದಲ್ಲಿ ಎಸೆದು ಬಿಟ್ಟಿದ್ದಾಳೆ. ಸಂಬಂಧಿಯೊಬ್ಬರು ಗಮನಿಸಿ ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಮಗಗುವಿಗೆ 120 ಸ್ಟಿಚ್‌ಗಳನ್ನು ಹಾಕಲಾಗಿದೆ.
ಮಗುವಿನ ಮುಖ, ಕೈ, ಕಾಲು ಸೇರಿ ದೇಹದ ಬಹುತೇಕ ಎಲ್ಲ ಭಾಗದಲ್ಲಿಯೂ ಸ್ಟಿಚ್ ಮಾಡಲಾಗಿದೆ. 8 ತಿಂಗಳ ಹಸುಗೂಸು ಕಣ್ಣು ತೆರೆಯುವುದಕ್ಕೂ ಕಷ್ಟಪಡುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಅಕ್ರಮ ಸಂಬಂಧ: ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ