ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಕಿಡಿ, ರಾಮಮಂದಿರಕ್ಕೆ ಪಾಕ್ ಸಿಡಿಮಿಡಿ; ಮೇ.29ರ ಟಾಪ್ 10 ಸುದ್ದಿ!

Suvarna News   | Asianet News
Published : May 29, 2020, 04:52 PM ISTUpdated : May 29, 2020, 04:53 PM IST
ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಕಿಡಿ, ರಾಮಮಂದಿರಕ್ಕೆ ಪಾಕ್ ಸಿಡಿಮಿಡಿ; ಮೇ.29ರ ಟಾಪ್ 10 ಸುದ್ದಿ!

ಸಾರಾಂಶ

ಭಾರತದಲ್ಲಿ ಕೊರೋನಾ ವೈರಸ್ ತೀವ್ರ ವಾಗುತ್ತಿದೆ. ಇತ್ತ ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಭುಗಿಲೆದ್ದಿದೆ. ಬಿಎಸ್‌ವೈ ನಾಯಕತ್ವ ಬದಲಿಸುವಂತೆ ಬಂಡಾಶ ಶುರುವಾಗಿದೆ.  ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು ತೆಗೆದಿದೆ. ಆಧಾರ್‌ ಸಂಖ್ಯೆ ನೀಡಿದ 10 ನಿಮಿಷದಲ್ಲಿ ಪಾನ್‌ ಕಾರ್ಡ್,  ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಡಲು ಸಜ್ಜಾದ ಗೂಗಲ್ ಸೇರಿದಂತೆ ಮೇ.29ರ ಟಾಪ್ 10 ಸುದ್ದಿ ಇಲ್ಲಿವೆ.

ಕೊರೋನಾ ಭೀಕರತೆ ತುತ್ತಾದ ರಾಷ್ಟ್ರಗಳ ಪೈಕಿ ಭಾರತಕ್ಕೆ 9ನೇ ಸ್ಥಾನ!

ಇತರ ದೇಶದಲ್ಲಿ ಕೊರೋನಾ ಆರ್ಭಟ ಶುರುಮಾಡಿದಾಗ ಭಾರತ ಸುರಕ್ಷಿತವಾಗಿತ್ತು. ಇದೀಗ ಇತರ ದೇಶಗಳು ಚೇತರಿಕೆ ಕಾಣುತ್ತಿರುವಾಗ ಭಾರತದಲ್ಲಿ ಪ್ರತಿ ದಿನ ಪ್ರಕರಣಗಳ ಸಂಖ್ಯೇ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೊರೋನಾ ಭೀಕರತೆ ಗುರಿಯಾದ ದೇಶಗಳ ಪೈಕಿ ಭಾರತ ಈಗ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಭಾರತದ ಕೊರೋನಾ ಭೀಕರತ ಕುರಿತ ವಿವರ ಇಲ್ಲಿದೆ.


ನೆಕ್ಸ್ಟ್ ಲಾಕ್‌ಡೌನ್ ಹೇಗಿರುತ್ತೆ? ಮೋದಿ ಬದಲು ಸಿಎಂಗಳ ಸಭೆ ಮಾಡಿದ ಶಾ!...

ಇಡೀ ದೇಶವೇ ಕೊರೋನಾ ಆತಂಕದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಹ ತೀವ್ರ ಒತ್ತಡದಲ್ಲಿಯೇ ಪರಿಸ್ಥಿತಿ ನಿಭಾಯಿಸುತ್ತ ಇದ್ದಾರೆ.  ಲಾಕ್ ಡೌನ್ ಮುಂದೆ ಏನು ಮಾಡಬೇಕು ಎಂಬ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸುವ ಸಂದರ್ಭ ಎದುರಾಗಿದೆ.

ಚೀನಾ-ಭಾರತದ ಶಾಂತಿಗೆ ಟ್ರಂಪ್‌ ಮಧ್ಯಸ್ಥಿಕೆ ಆಫರ್‌ ತಿರಸ್ಕರಿಸಿದ ಮೋದಿ

ಸಿಕ್ಕಿಂ ಹಾಗೂ ಲಡಾಖ್‌ ಬಳಿಯ ವಾಸ್ತವ ಗಡಿ ರೇಖೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಉದ್ಭವವಾಗಿದ್ದ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸುವ ಕುರಿತಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಫರ್‌ ಅನ್ನು ಭಾರತ ತಿರಸ್ಕರಿಸಿದೆ.

ರಾಮಮಂದಿರಕ್ಕೆ ಪಾಕ್‌ ತಕರಾರು: ಭಾರತದ ಭರ್ಜರಿ ತಿರುಗೇಟು

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿ ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದು, ಬಾಬ್ರಿ ಮಸೀದಿ ಇರುವ ಸ್ಥಳದಲ್ಲಿ ಭಾರತ ಈಗ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿದೆ.

ಮಳೆಗಾಲದಲ್ಲಿ ಕೊರೋನಾ ವೈರಸ್ ಶಕ್ತಿ ಹೆಚ್ಚಾಗುತ್ತಾ? ಬೆಚ್ಚಿ ಬೀಳಿಸುತ್ತಿದೆ ಅಧ್ಯಯನ ವರದಿ!

ಬೇಸಿಗೆ ಕಾಲ ಅಂತ್ಯವಾಗುತ್ತಿದೆ. ಇನ್ನು ಮಳೆಗಾಲ. ಈಗಾಗಲೇ ಬಿರುಗಾಳಿ ಸಹಿತ ಮಳೆರಾಯನ ಆಟ ಶುರುವಾಗಿದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಆರ್ಭಟಿಸುತ್ತಿರುವ ಕೊರೋನಾ ವೈರಸ್ ಇನ್ನು ಆಟಮುಗಿಸಿಲ್ಲ. ಇದೀಗ ಮಳೆಗಾಲದಲ್ಲಿ ಅಥವಾ ತಂಪಾಗಿರುವ ವಾತಾವರಣದಲ್ಲಿ ಕೊರೋನಾ ವೈರಸ್ ಶಕ್ತಿ ಕುರಿತು ವೈದ್ಯರು, ಸಂಶೋಧಕರು ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದ್ದಾರೆ. 

ಅಂದು 2009, ಇಂದು 2020 ಬಂಡಾಯ,  ಮಾವಿನಹಣ್ಣು ತಿಂದ 'ರತ್ನಗಿರಿ' ರಹಸ್ಯ!

ಲಾಕ್ ಡೌನ್ ನಡುವೆ ಬಿಜೆಪಿ ಭಿನ್ನರಿಂದ ಆರು ಸಭೆಗಳು ನಡೆದಿವೆ. ಯಡಿಯೂರಪ್ಪ ಅತ್ಯಾಪ್ತರು ಎಂನಿಸಿಕೊಂಡವರೆ ಸಭೆಯ , ಡಿನ್ನರ್ ಮೀಟ್ ನ ಮುಂಚೂಣಿಯಲ್ಲಿ ನಿಂತಿದ್ದಾರೆ.

48 ಕೋಟಿ ರೂ. ಆಫೀಸಲ್ಲಿ ಕಂಗನಾಗೇನು ಕೆಲ್ಸ? ಕೊಳ್ಳೋಕೆ ಹಣ ಬಂದಿದ್ದೆಲ್ಲಿಂದ?

ಬಿ-ಟೌನ್‌ನ ಕಾಂಟ್ರೋವರ್ಸಿ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆಯುವ ನಟಿ ಕಂಗನಾ ರಣಾವತ್. ಸಿನಿಮಾ ಮಾಡಿದ್ರೂ, ಮಾಡದೇ ಇದ್ರೂ ಆಕೆಯ ಅಕ್ಕನಿಂದನೋ, ಒಟ್ಟಿನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸದಾ ವಿವಾದದಲ್ಲಿರುತ್ತಾರೆ. 

ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!

ಭಾರತೀಯ ಟೆಲಿಕಾಂ ಕ್ಷೇತ್ರ ಮತ್ತೆ ರಂಗೇರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಿಲಾಯನ್ಸ್ ಜಿಯೋವಿನ ಶೇ.10ರಷ್ಟು ಷೇರನ್ನು ಕೊಳ್ಳಲು ಈಗಾಗಲೇ ಫೇಸ್‌ಬುಕ್ ಮುಂದಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂತೆ, ಟೆಕ್ ಲೋಕದ ದಿಗ್ಗಜ ಗೂಗಲ್ ತೆರೆಮರೆಯಲ್ಲೇ ವೋಡಾಫೋನ್-ಐಡಿಯಾ ಮುಖೇನ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಹೊರಟಿದೆ. ಎಲ್ಲವೂ ಅಂದುಕೊಂಡಂತಾದರೆ ಭಾರಿ ಪೈಪೋಟಿ ಎದುರಾಗಿ ಗ್ರಾಹಕ ಇದರ ಲಾಭ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

ಆಧಾರ್‌ ಸಂಖ್ಯೆ ನೀಡಿದ 10 ನಿಮಿಷದಲ್ಲಿ ಪಾನ್‌ ಕಾರ್ಡ್

ಕೇವಲ 10 ನಿಮಿಷಗಳಲ್ಲೇ ಇ ಪಾನ್‌ ಕಾರ್ಡ್‌ ನಂಬರ್‌ ಒದಗಿಸುವ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಚಾಲನೆ ನೀಡಿದ್ದಾರೆ.


ಜಾವಾ ಮೀಟರ್, ಬೊಲೆರೋ ಕನ್ಸೋಲ್; ಮಹೀಂದ್ರ ವೆಂಟಿಲೇಟರ್ ಹಿಂದಿದೆ ರೋಚಕ ಕತೆ!

ಕಾರು ಬೈಕ್ ನಿರ್ಮಾಣ ಮಾಡುತ್ತಿದ್ದ ಮಹೀಂದ್ರ ಕಂಪನಿ ಕೊರೋನಾ ವೈರಸ್ ಕಾರಣ, ಭಾರತಕ್ಕೆ ಅಗತ್ಯವಾಗಿ ಬೇಕಿರುವ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿದೆ. ಆಟೋಮೊಬೈಲ್ ಕಂಪನಿ ದಿಢೀರ್ ಆಗಿ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿರುವುದು ಹೇಗೆ? ತಯಾರಿ ಹೇಗಿತ್ತು? ವೆಂಟಿಲೇಟರ್ ಉತ್ಪಾದನೆಯಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ವೈದ್ಯ ಈ ಕುರಿತು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!