ಚುನಾವಣೆ ಅಖಾಡಕ್ಕೆ ಸಿಂಗಂ , ಆತಂಕ ಹೆಚ್ಚಿಸಿದ ಹೊಸ ಸಿಡಿ ಬಾಂಬ್; ಮಾ.12ರ ಟಾಪ್ 10 ಸುದ್ದಿ!

By Suvarna NewsFirst Published Mar 12, 2021, 5:12 PM IST
Highlights

ಸಿಂಗಂ ಎಂದೇ ಖ್ಯಾತಿ ಪಡೆದಿರುವ ಅಣ್ಣಾಮಲೈ ಇದೀಗ ಚುನಾವಣಾ ಆಖಾಡಕ್ಕೆ ಧುಮುಕಿದ್ದಾರೆ. ಭಾರತದಲ್ಲಿ ಹೊಸ ಕೊರೋನಾ ಕೇಸ್ 1 ಲಕ್ಷ ಸನಿಹಕ್ಕೆ ಬಂದಿದೆ. ಯಶ್‌ ಹೊಸ ಸಿನಿಮಾದ ಕೆಲಸ ಆರಂಭಿಸಿದ್ದಾರೆ.  ಮುಂದಿನ 4 ದಿನ ಬ್ಯಾಂಕ್ ಬಂದ್.  ಮಧುಬಂಗಾರಪ್ಪ ಜತೆಗೆ ಡಾ.ರಾಜ್​ಕುಮಾರ್ ಹಿರಿ ಸೊಸೆ ಕಾಂಗ್ರೆಸ್‌ ಸೇರಿಕೊಂಡಿದ್ದಾರೆ. ಭಾರತ-ಇಂಗ್ಲೆಂಡ್ ಟಿ20 ಸರಣಿ, ಅನುಶರ್ಮಾಗೆ ವಿಶೇಷ ಸಿಹಿ ಮುತ್ತು ನೀಡಿದ ಕೊಹ್ಲಿ ಸೇರಿದಂತೆ ಮಾರ್ಚ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಚುನಾವಣೆ ಅಖಾಡಕ್ಕಿಳಿದ ಅಣ್ಣಾಮಲೈ, ಸಿಂಗಂ ಸ್ಪರ್ಧಿಸುತ್ತಿರುವ ಕ್ಷೇತ್ರ ಯಾವುದು?...

ಈ ಬಾರಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಭಾರೀ ರಂಗೇರಿದೆ. ಅದರಲ್ಲೂ ಪಶ್ಚಿಮ ಬಂಗಾಳದ ಹೊರತುಪಡಿಸಿ ತಮಿಳಿಮಾಡು ವಿಧಾನಸಭಾ ಚುನಾವಣೆ ಕುತೂಹಲ ಮೂಡಿಸಿದೆ.

ಭಾರತದಲ್ಲಿ ಕಳೆದ 5 ದಿನಕ್ಕೆ 1 ಲಕ್ಷ ಕೊರೋನಾ ಕೇಸ್; ಒಂದೊಂದೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ!...

ಭಾರತದಲ್ಲಿ ಮತ್ತೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ನಿಯಂತ್ರಣಕ್ಕೆ ಮತ್ತೆ ನಿರ್ಬಂಧನೆಗಳನ್ನು ವಿಧಿಸಲಾಗುತ್ತಿದೆ. ಆದರೆ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಒಂದೊಂದೆ ರಾಜ್ಯಗಳು ಕೆಲ ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸುತ್ತಿದೆ. ಇದೀಗ ಕೇವಲ 5 ದಿನಕ್ಕೆ 1 ಲಕ್ಷ ಕೊರೋನಾ ಕೇಸ್ ಸನಿಹಕ್ಕೆ ಭಾರತ ಬಂದು ನಿಂತಿದೆ

ವಮಿಕಾಗೆ 2 ತಿಂಗಳು: ಪತ್ನಿ ಅನುಷ್ಕಾ ಹಣೆಗೆ ಕೊಹ್ಲಿ ಪ್ರೀತಿಯ ಮುತ್ತು...

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಕೊಹ್ಲಿ ಸಿಹಿ ಮುತ್ತು ಕೊಟ್ಟಿದ್ದಾರೆ.

ಯಶ್‌ ಹೊಸ ಸಿನಿಮಾದ ಕೆಲಸ ಶುರು..! ಇದರಲ್ಲಿ ಯಶ್ ಹೇಗಿರ್ತಾರೆ...

ಯಶ್‌ ಹೊಸ ಸಿನಿಮಾವನ್ನು ‘ಮಫ್ತಿ’ ಖ್ಯಾತಿಯ ನರ್ತನ್‌ ನಿರ್ದೇಶನ ಮಾಡಲಿದ್ದಾರೆ. ಮೊದಲೇ ಘೋಷಿಸಿಕೊಂಡಂತೆ ಅವರು ಶಿವಣ್ಣ ನಟನೆಯ 125ನೇ ಸಿನಿಮಾವಾಗಿ ‘ಭೈರತಿ ರಣಗಲ್‌’ ನಿರ್ದೇಶಿಸಬೇಕಿತ್ತು.

4 ದಿನ ಬ್ಯಾಂಕ್ ಬಂದ್ : ಇಂದೇ ನಿಮ್ಮ ಕೆಲಸ ಮುಗಿಸಿ...

ನಿಮ್ಮ ಯಾವುದೇ ಬ್ಯಾಂಕ್‌ ಕೆಲಸಗಳಿದ್ದರೂ ಇಂದೇ ಮುಗಿಸಿಕೊಳ್ಳಿ. ಕಾರಣ ನಾಲ್ಕು ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಲಿದ್ದು, ಹಣಕಾಸಿನ ವ್ಯವಹಾರಕ್ಕೆ ಅಡೆತಡೆ ಎದುರಾಗಲಿದೆ. 

ಮೇಡ್ ಇನ್ ಇಂಡಿಯಾ BMW M340i xಡ್ರೈವ್ ಕಾರು ಬಿಡುಗಡೆ!...

ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣಗೊಂಡಿರುವ ಹೊಚ್ಚ ಹೊಸ ಫರ್ಸ್ಟ್-ಎವರ್ BMW M340i xDrive ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಇನ್ನೂ 23 ಸಿಡಿ ಬಾಂಬ್ : ಸರ್ಕಾರ ಕ್ರಮ ಕೈಗೊಳ್ಳಲಿ ಎಂದ HDK...

ಇನ್ನೂ 23 ಸಿಡಿಗಳಿಗೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿಕೆ ನೀಡಿದ್ದು, ಇಂತಹ ಹೇಳಿಕೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

ಇಂಗ್ಲೆಂಡ್‌ ವಿರುದ್ದದ ಮೊದಲ ಟಿ20ಗೆ ಭಾರತದ ಬಲಿಷ್ಠ ಸಂಭಾವ್ಯ ತಂಡ ಪ್ರಕಟ..!...

ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಮೊದಲ ಆಯ್ಕೆಯ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.

'ಜನರಿಗೆ ದ್ರೋಹ ಮಾಡಿದ ಮೋದಿ ಸರ್ಕಾರ, ಅಚ್ಚೇ ದಿನ್‌ ಯಾರಿಗೆ ಬಂದಿದೆ?'...

ಸಿಡಿ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದ ಸಮತಿಯಿಂದ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಗೆ ಬರಲಿದೆ| ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರುವುದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಬಹಳಷ್ಟು ಜನರು ಕಾಂಗ್ರೆಸ್‌ ಸಂಪರ್ಕದಲ್ಲಿ: ಈಶ್ವರ ಖಂಡ್ರೆ|

ಮಮತಾ ವಿರುದ್ಧ ಸುವೆಂದು ಅಧಿಕಾರಿಯ ರಣಕಹಳೆ; ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ!...

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ಇದೀಗ ಭಾರತದ ಗಮನಸೆಳೆದಿದೆ.  ಮಮತಾ ಬ್ಯಾನರ್ಜಿ ಈ ಬಾರಿ ನಂದಿಗ್ರಾಮದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಘೋಷಣೆ ಬಳಿಕ ನಂದಿಗ್ರಾಮ ಕೊತ ಕೊತ ಕುದಿಯುತ್ತಿದೆ. ಇದೀಗ ಇದೇ ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ನಾಮಪತ್ರ ಸಲ್ಲಿಸಿದ್ದಾರೆ.

ಮಧುಬಂಗಾರಪ್ಪ ಜತೆಗೆ ಡಾ.ರಾಜ್​ಕುಮಾರ್ ಹಿರಿ ಸೊಸೆ ಕಾಂಗ್ರೆಸ್‌ಗೆ...!...

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ಇದೀಗ ಭಾರತದ ಗಮನಸೆಳೆದಿದೆ.  ಮಮತಾ ಬ್ಯಾನರ್ಜಿ ಈ ಬಾರಿ ನಂದಿಗ್ರಾಮದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಘೋಷಣೆ ಬಳಿಕ ನಂದಿಗ್ರಾಮ ಕೊತ ಕೊತ ಕುದಿಯುತ್ತಿದೆ. ಇದೀಗ ಇದೇ ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ನಾಮಪತ್ರ ಸಲ್ಲಿಸಿದ್ದಾರೆ.

click me!