ಐಸಿಸ್ ಹಿಟ್ ಲಿಸ್ಟ್‌ನಲ್ಲಿ ಕರ್ನಾಟಕ, ಹೆಸರು ಬದಲಾಯಿಸಿದ ದೀಪಿಕಾ; ಜು.14ರ ಟಾಪ್ 10 ಸುದ್ದಿ!

Published : Jul 14, 2020, 04:55 PM ISTUpdated : Jul 14, 2020, 04:57 PM IST
ಐಸಿಸ್ ಹಿಟ್ ಲಿಸ್ಟ್‌ನಲ್ಲಿ ಕರ್ನಾಟಕ, ಹೆಸರು ಬದಲಾಯಿಸಿದ ದೀಪಿಕಾ; ಜು.14ರ ಟಾಪ್ 10 ಸುದ್ದಿ!

ಸಾರಾಂಶ

ಕರ್ನಾಟಕ ರಾಜ್ಯದ ಮೇಲೆ ಐಸಿಸ್ ಗಳ ಕಣ್ಣು ಬಿದ್ದಿದ್ದು ಸದ್ದಿಲ್ಲದೆ ಸ್ಫೋಟಕ್ಕೆ ಸಂಚು ನಡೆದಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ.  ದೇಶದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಇದೀಗ ಸೋಂಕಿತರ ಸಂಖ್ಯೆ 9 ಲಕ್ಷ ದಾಟಿದೆ. ಇತ್ತ ಕೊರೋನಾ ಮಾತ್ರೆ ಈಗ ಕೇವಲ 75 ರೂ. ನಿಗದಿ ಮಾಡಲಾಗಿದೆ.  ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಬದಲಾಯಿಸಿಕೊಂಡಿದ್ದಾರೆ. ಅಂಬಾನಿ ಆದಾಯ, ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್ ಸೇರಿದಂತೆ ಜುಲೈ 14ರ ಟಾಪ್ 10 ಸುದ್ದಿ ಇಲ್ಲಿವೆ.

ಕರ್ನಾಟಕ ಸ್ಫೋಟಕ್ಕೆ ಬೆಂಗಳೂರಿನಿಂದಲೇ ಸಂಚು!

ಕೊರೋನಾ ಆತಂಕದ ನಡುವೆ ಇದೀಗ ಕರ್ನಾಟಕಕ್ಕೆ ಐಸಿಸ್ ಉಗ್ರರ ಭೀತಿ ಕಾಡುತ್ತಿದೆ.  ಕರ್ನಾಟಕ ಸ್ಫೋಟಕ್ಕೆ ಸಂಚು ನಡೆದಿತ್ತು ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ: ಇಲ್ಲಿದೆ ಜಿಲ್ಲಾವಾರು ಫಲಿತಾಂಶ!

2020 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಕೊರೊನಾ ಫೀವರ್ ನಡುವೆಯೇ ಪರೀಕ್ಷೆ ಬರೆದಿದ್ದ ದ್ವಿತೀಯ ಪಿಯು ಫಲಿತಾಂಶವನ್ನು ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ನಲ್ಲಿ  ಇಂದು ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.ಒಟ್ಟಾರೆಯಾಗಿ ಶೇಕಡಾ 61.80 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ದೇಶದಲ್ಲಿ 9 ಲಕ್ಷ ದಾಟಿದ ಸೋಂಕಿತರು: ಕೇವಲ 5 ದಿನದಲ್ಲಿ 1.13 ಲಕ್ಷ ಹೊಸ ಕೇಸು!

ಸೋಮವಾರ ದೇಶಾದ್ಯಂತ 26289 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 901171ಕ್ಕೆ ತಲುಪಿದೆ. ಇದರೊಂದಿಗೆ ಕಳೆದ ಕೇವಲ 5 ದಿನಗಳಲ್ಲಿ ದೇಶದಲ್ಲಿ 1.13 ಲಕ್ಷ ಹೊಸ ಕೇಸು ದೃಢಪಟ್ಟಂತೆ ಆಗಿದೆ. 

ಕೊರೋನಾ ಮಾತ್ರೆ ಈಗ ಕೇವಲ 75 ರೂ.!.

ಕೊರೋನಾ ಚಿಕಿತ್ಸೆಗೆ ಬಳಸಲಾಗುವ ಫೆವಿಪಿರವಿರ್‌ ಮಾತ್ರೆಯ ದರವನ್ನು ಶೇ.27ರಷ್ಟುಇಳಿಕೆ ಮಾಡಿದ್ದಾಗಿ ಔಷಧ ಉತ್ಪಾದಕ ಸಂಸ್ಥೆ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್‌ ಹೇಳಿದೆ.

ಆತಂಕದಲ್ಲಿ ಈಶ್ವರಪ್ಪ ಕುಟುಂಬ; ಮನೆಕೆಲಸದವನಿಗೆ ಸೋಂಕು ದೃಢ...

ಶಿವಮೊಗ್ಗ ಉಸ್ತುವಾರಿ ಸಚಿವ ಈಶ್ವರಪ್ಪಗೆ ಕೊರೊನಾ ಶಾಕ್..! ಈಶ್ವರಪ್ಪ ಮನೆಯಲ್ಲಿ ಹಸುವಿನ ಹಾಲು ಕರೆಯುತ್ತಿದ್ದ ಕೃಷ್ಣಪ್ಪನಿಗೆ ಕೊರೊನಾ ಪಾಸಿಟೀವ್ ಬಂದಿದೆ. ಸಚಿವರ ಕುಟುಂಬದ ಸದಸ್ಯರ ಸ್ವ್ಯಾಬ್ ಟೆಸ್ಟ್ ಮಾಡಲಾಗಿದೆ. 

ಹೆಸರು ಬದಲಾಯಿಸಿಕೊಂಡ ದೀಪಿಕಾ ಪಡುಕೋಣೆ; 'ವೆರೊನಿಕಾ' ಆಯ್ಕೆ ಮಾಡಲು ಕಾರಣವೇನು?...

ಬಾಲಿವುಡ್‌ ಡಿಂಪಲ್, ಮಸ್ತಾನಿ ನಮ್ಮೆಲ್ಲರ ನೆಚ್ಚಿನ ಕನ್ನಡತಿ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಾಯಿಸಿಕೊಂಡಿದ್ದಾರೆ.  ಟಾಪ್‌ ನಟಿಯರ ಪಟ್ಟೆಯಲ್ಲಿ ಸ್ಥಾನ ಪಡೆದುಕೊಂಡು, ನಟರ ಸಮಕ್ಕೆ ಸಂಭಾವನೆ ಪಡೆಯುತ್ತಿರುವ ಡಿಪ್ಪಿ ಹೆಸರು ಬದಲಾಯಿಸಿಕೊಳ್ಳುವ ಹಿಂದೆ ಒಂದು ಕಾರಣವಿದೆ...

4 ಸರ್ಕಾರಿ ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್!

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ತಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಪೋಸ್ಟ್‌ಪೇಡ್‌ ಗ್ರಾಹಕರಿಗೆ ಕಹಿ ಸುದ್ದಿ, ಈ ಒಂದು ಯೋಜನೆಗೆ ಬ್ರೇಕ್!

ಮಾಸಿಕ 499 ರು. ಮತ್ತು ಅದಕ್ಕಿಂತ ಹೆಚ್ಚಿನ ಬಿಲ್‌ ಪಾವತಿಸುವ ಪೋಸ್ಟ್‌ಪೇಡ್‌ ಗ್ರಾಹಕರಿಗೆ ಅತಿಹೆಚ್ಚು ವೇಗದ ಇಂಟರ್ನೆಟ್‌ ಸೇವೆ ಕಲ್ಪಿಸುವ ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಕ್ರಮಕ್ಕೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಅಂಕುಶ ಹಾಕಿದೆ.

ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಕುಬೇರನ ಆಸ್ತಿ ಏರಿದ್ಹೇಗೆ?

ಭಾರತದ ಬ್ಯಸಿನೆಸ್ ಐಕಾನ್ ಮುಕೇಶ್ ಅಂಬಾನಿ ಈಗ ಪ್ರಪಂಚದ 5 ನೇ ಅತೀ ದೊಡ್ಡ ಶ್ರೀಮಂತ. ವಾರದ ಹಿಂದೆ 8 ಸ್ಥಾನದಲ್ಲಿದ್ದ ಅಂಬಾನಿ ಈಗ 5 ನೇ ಸ್ಥಾನಕ್ಕೆ ಬಂದಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಚಕ್ರವರ್ತಿ ಮುಕೇಶ್ ಅಂಬಾನಿ ವಿಶ್ವದ 5 ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ. 

ಮಾರುತಿ ಬ್ರೆಜಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಬಿಡುಗಡೆ ದಿನಾಂಕ ಬಹಿರಂಗ!

ಕಿಯಾ ಸೆಲ್ಟೋಸ್, ಕಿಯಾ ಕಾರ್ನಿವಲ್ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿರುವ ಕಿಯಾ ಮೋಟಾರ್ಸ್ ಇದೀಗ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಭಾರತದ ಮೂಲಕ ವಿಶ್ವದಲ್ಲಿ ಈ ಕಾರು ಬಿಡುಗಡೆಯಾಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!