ಕೊರೋನಾ ಆತಂಕದಲ್ಲಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ನಿರಾಳರಾಗಿದ್ದು, ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು, (ಜುಲೈ.14): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಕುಟುಂಬದವರ ಕೋವಿಡ್ ವರದಿ ಬಂದಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ.
ಇದರಿಂದ ಈಶ್ವರಪ್ಪ ಮತ್ತು ಅವರ ಕುಟುಂಬ ನಿಟ್ಟುಸಿರು ಬಿಟ್ಟಿದೆ. ಈಶ್ವರಪ್ಪ ಅವರಸಂಬಂಧಿ ಓರ್ವರಿಗೆ ಕೊರೋನಾ ಸೋಂಕು ದೃಡಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಕುಟುಂಬ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು.ಇದೀಗ ಅವರ ವರದಿ ನೆಗೆಟಿವ್ ಅಂತ ಬಂದಿದೆ.
ಆತಂಕದಲ್ಲಿ ಈಶ್ವರಪ್ಪ ಕುಟುಂಬ; ಮನೆಕೆಲಸದವನಿಗೆ ಸೋಂಕು ದೃಢ
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಈಶ್ವರಪ್ಪ, ತಮ್ಮ ಮನೆಯ ಸಂಪರ್ಕದಲ್ಲಿದ್ದ ದೂರದ ಸಂಬಂಧಿಯೋರ್ವರಿಗೆ ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಸಚಿವರು ಹಾಗೂ ಕುಟುಂಬದ ಸದಸ್ಯರು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದರು ಅಲ್ಲದೆ ಕುಟುಂಬ ಸದಸ್ಯರು ಕ್ವಾರಂಟೈನ್ ನಲ್ಲಿದ್ದರು ಆದರೆ ಇಂದು ಪರೀಕ್ಷಾ ವರದಿ ಬಂದಿದ್ದು ಎಲ್ಲರ ವರದಿಯೂ ನೆಗೆಟಿವ್ ಬಂದಿದೆ ಈ ವಿಚಾರವಾಗಿ ಸಚಿವರು ತಮ್ಮ ಟ್ವಿಟ್ಟರ್ ನಲ್ಲಿ ನನಗೂ ಹಾಗೂ ನಮ್ಮ ಕುಟುಂಬದವರಿಗೂ ಕೋವಿಡ್ ಸೋಂಕು ಇಲ್ಲ ಎಂದು ದೃಢ ಪಟ್ಟಿರುವುದು ಸಮಾಧಾನದ ವಿಷಯ ಎಂದಿದ್ದಾರೆ.
ನನ್ನ ಮನೆಯ ಸಂಪರ್ಕದಲ್ಲಿದ್ದ ನನ್ನ ದೂರದ ಸಂಬಂಧಿ ಓರ್ವರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ನಾನು ಹಾಗು ನನ್ನ ಕುಟುಂಬದವರು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದೆವು. ಇದೀಗ ಬಂದ ಪರೀಕ್ಷಾ ವರದಿಯಲ್ಲಿ ನನಗೂ ಹಾಗೂ ನಮ್ಮ ಕುಟುಂಬದವರಿಗೂ ಕೊರೊನಾ ಸೋಂಕಿಲ್ಲವೆಂದು ಧೃಡ ಪಟ್ಟಿರುವುದು ಸಮಾಧಾನದ ವಿಷಯ.
— K S Eshwarappa (@ikseshwarappa)ಇನ್ನು ಸಚಿವ ಸಿಟಿ ರವಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಅವರು ಕ್ವಾರಂಟೈನ್‌ನಲ್ಲಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಸಹ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.