CSKಯಿಂದ ಸ್ಟಾರ್ ವೇಗಿ ಔಟ್, ಮತ್ತೆ ನಿಷೇಧಕ್ಕೊಳಗಾದ ಟ್ರಂಪ್; ಎ.1ರ ಟಾಪ್ 10 ಸುದ್ದಿ!

By Suvarna NewsFirst Published Apr 1, 2021, 4:52 PM IST
Highlights

ಸೊಸೆ ಫೇಸ್‌ಬುಕ್‌ ಪೇಜ್‌ನಲ್ಲಿ ಕಾಣಿಸಿಕೊಂಡ ಡೋನಾಲ್ಡ್ ಟ್ರಂಪ್‌ಗೆ ಮತ್ತೆ ನಿಷೇಧ ಹೇರಲಾಗಿದೆ. ಇತ್ತ ಚೆನ್ನೈ ತಂಡದಿಂದ ಸ್ಟಾರ್ ವೇಗಿ ಹೊರಬಂದಿದ್ದಾರೆ. ತಲೈವಾ ರಜನಿಕಾಂತ್‌ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಲಾಗಿದೆ. ರಾಸಲೀಲೆ ಸಿಡಿ ಲೇಡಿಯ ಮೆಡಿಕಲ್ ಟೆಸ್ಟ್‌ ವರದಿ ತೀವ್ರ ಕುತೂಹಲ ಕೆರಳಿಸಿದೆ. ಸ್ಯಾಂಡಲ್‍‌ವುಡ್‌ನಲ್ಲಿ ಯುವರತ್ನ ಅಬ್ಬರ, ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ದೂರು ಸೇರಿದಂತೆ ಎಪ್ರಿಲ್ 1 ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಸೊಸೆ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಡೋನಾಲ್ಡ್ ಟ್ರಂಪ್‌ಗೆ ಮತ್ತೆ ನಿಷೇಧ!...

ಕ್ಯಾಪಿಟಲ್ ಹಿಲ್ ಗಲಭೆ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್  ಟ್ರಂಪ್ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷೇಧಿಸಲಾಗಿತ್ತು. ಇದೀಗ  ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಸಲು ಯತ್ನಿಸಿದ ಟ್ರಂಪ್‌ಗೆ ಮತ್ತೆ ನಿಷೇಧ ಹೇರಲಾಗಿದೆ. 

ಬಿಯರ್ ದರ ಭಾರೀ ಇಳಿಕೆ; ಬಾಟಲ್‌ಗೆ  20 ರೂ. ಕಡಿಮೆ ಇಂದಿನಿಂದಲೇ!...

ಲಕ್ನೋ (ಏ. 01)  ಸರ್ಕಾರ ಮದ್ಯಪ್ರಿಯರಿಗೆ ದೊಡ್ಡ ಶುಭ ಸುದ್ದಿ ಕೊಟ್ಟಿದೆ. ಆದರೆ ಈ ಶುಭ ಸುದ್ದಿ ಕೊಟ್ಟಿರುವುದು ಉತ್ತರ  ಪ್ರದೇಶ ಸರ್ಕಾರ.  ಬೀಯರ್ ದರದಲ್ಲಿ ಭಾರೀ ಇಳಿಕೆ ಮಾಡಲಾಗಿದೆ.

ಸೀಡಿ ಲೇಡಿ ಮೆಡಿಕಲ್ ಟೆಸ್ಟ್‌ ಸೀಕ್ರೆಟ್: ಟ್ವಿಸ್ಟ್ ಕೊಟ್ಟಿದೆ ಆ ಒಂದು ಘಟನೆ!...

ಇಪ್ಪತ್ತೆಂಟು ದಿನಗಳ ಬಳಿಕ ಸೀಡಿ ಲೇಡಿ ಬಂದಾಯ್ತು. ಆಕೆ ಜೊತೆ ಹೊರ ಬಂದಿರುವ ಸತ್ಯಗಳೇನು? ವೈದ್ಯರಿಗೇ ಸವಾಲಾಗಿದ್ದೇಕೆ ವೈದ್ಯಕೀಯ ಪರೀಕ್ಷೆ? ಇದರಿಂದ ಬರೋ ಫಲಿತಾಂಶ ಏನಾಗಲಿದೆ? ವೈಜ್ಞಾನಿಕ ಅದೃಷ್ಟ ಯಾರಿಗೆ ಒಲಿಯುತ್ತಾ? ಕೊನೆ ಹಂತದಲ್ಲಿರುವ ಪ್ರಕರಣಕ್ಕೆ ಸಿಕ್ಕಿದೆ ಮೇಜರ್ ಟ್ವಿಸ್ಟ್. 

IPL 2021: ಸಿಎಸ್‌ಕೆ ತಂಡಕ್ಕೆ ಆಘಾತ, ಕೊನೇ ಕ್ಷಣದಲ್ಲಿ ಧೋನಿ ಟೀಂ ತೊರೆದ ಸ್ಟಾರ್ ವೇಗಿ..!...

 ಬಾರಿ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಪ್ರಮುಖ ಸ್ಟಾರ್ ವೇಗಿ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಟೂರ್ನಿಯಿಂದ ಹಿಂದೆ ಸರಿಯುವ ಮೂಲಕ ಧೋನಿ ಪಡೆಗೆ ಶಾಕ್ ನೀಡಿದ್ದಾರೆ.

ಕಾಲಿವುಡ್‌ ತಲೈವಾ ರಜನಿಕಾಂತ್‌ಗೆ 51ನೇ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಗರಿ!...

51ನೇ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರಕಟವಾಗಿದೆ, ಸೂಪರ್ ಸ್ಟಾರ್ ರಜನಿಕಾಂತ್‌ಗೆ ಈ ಬಾರಿ ಪ್ರಶಸ್ತಿ ಒಲಿದಿದೆ. ಈ ವಿಚಾರದ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಟ್ಟೀಟ್ ಮಾಡಿದ್ದಾರೆ. 

'ಯುವರತ್ನ' ಫಸ್ಟ್‌ ಡೇ ಫಸ್ಟ್‌ ಶೋ ಆಯ್ತು,ಆಗಲೇ ಚಿತ್ರ ವಿಮರ್ಶೆ ರೆಡಿ; ಟ್ಟಿಟ್‌ಗಳ ಸುರಿಮಳೆ!...

ಪುನೀತ್ ರಾಜ್‌ಕುಮಾರ್ 'ಯುವರತ್ನ' ಚಿತ್ರದ ಬಗ್ಗೆ ಟ್ಟಿಟ್ಟರ್‌ನಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿರುವ ರೀತಿ ಸಖತ್ ವೈರಲ್ ಆಗಿದೆ. ಹೇಗಿದೆ ಸಿನಿಮಾ?

ಆಧಾರ್‌ ಜೊತೆ ಪಾನ್‌ ಕಾರ್ಡ್‌ ಲಿಂಕ್ ಮಾಡಿದವರು ಮತ್ತೆ ಮಾಡಬೇಕಾ?...

ಪ್ರತಿಯೊಬ್ಬರು ತಮ್ಮ ಪಾನ್ ಕಾರ್ಡ್ ನಂಬರ್ ಅನ್ನು ಆಧಾರ್ ನಂಬರ್ ಜತೆ ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರವು 2021 ಮಾರ್ಚ್ 31ರವರೆಗ ಗಡುವು ವಿಧಿಸಿತ್ತು. ಇದೀಗ ಕೇಂದ್ರವು ಈ ಅವಧಿಯನ್ನು 2021ರ ಜೂನ್ 30ರವರೆಗೂ ವಿಸ್ತರಿಸಿದೆ. ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ತುಂಬ ಸರಳವಿದೆ.

ಹೊಸ ನಿಯಮ ಸದ್ಯಕ್ಕೆ ಕೈ ಬಿಟ್ಟ ಆರ್‌ಬಿಐ: ಆತಂಕದಲ್ಲಿದ್ದ ಗ್ರಾಹಕರು ನಿರಾಳ!...

ಏ.1ರಿಂದ ಜಾರಿಯಾಗಬೇಕಿದ್ದ ‘ಆಟೋ ಪೇಮೆಂಟ್‌’ ಕುರಿತ ಹೊಸ ನಿಯಮವನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಸದ್ಯಕ್ಕೆ ಕೈಬಿಟ್ಟಿದ್ದು, ಬ್ಯಾಂಕುಗಳು ಹಾಗೂ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಸೆ.30ರವರೆಗೂ ಹಳೆಯ ನಿಯಮವೇ ಅನ್ವಯಿಸಲಿದೆ ಎಂದು ಆರ್‌ಬಿಐ ಆದೇಶ ಹೊರಡಿಸಿದೆ. ಅಂದರೆ, ಏ.1ರಿಂದ ಏರುಪೇರಾಗುವ ಸಾಧ್ಯತೆಯಿದ್ದ ಆಟೋ ಪೇಮೆಂಟ್‌ ಸೌಲಭ್ಯ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.

ಕ್ರೆಟಾ, ಸೆಲ್ತೋಸ್‌ಗೆ ಟಕ್ಕರ್ ಕೊಡಲು ಬರ್ತಿದೆ ವೋಕ್ಸ್‌ವಾಗನ್‌ ‘ಟಿಗ್ವಾನ್’ ಎಸ್‌ಯುವಿ...

ಜರ್ಮನ್ ಮೂಲದ ವೋಕ್ಸ್‌ವ್ಯಾಗನ್‌ ಕಂಪನಿಯು ತನ್ನ ನೂತನ ಕಾಂಪಾಕ್ಟ್ ಎಸ್‌ಯುವಿ ಟಿಗ್ವಾನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲು ಮುಂದಾಗಿದೆ. ಈ ಕಾರು ಆಟೋ ಎಕ್ಸ್‌ಪೋ 2020 ಪ್ರದರ್ಶನಗೊಂಡಿತ್ತು. ಅಂದಿನಿಂದಲೂ ಈ ಎಸ್‌ಯುವಿ ಬಗ್ಗೆ ಸಖತ್ ಟಾಕ್ ಇತ್ತು ಮತ್ತು ಬಹಳಷ್ಟು ನಿರೀಕ್ಷೆಗಳಿದ್ದವು. ಇದೀಗ ಕಂಪನಿಯು ಈ ಎಸ್‌ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದೆ.

ರಾಜಾಹುಲಿಗೆ ಸಚಿವರ ಬೆಂಬಲ, ಈಶ್ವರಪ್ಪಗೆ ಕಿರಿಯರ ನೀತಿಪಾಠ...

ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ/ ಕೆಎಸ್ ಈಶ್ವರಪ್ಪ ಪತ್ರದ ನಂತರ ಸಚಿವರ ಪ್ರತಿಕ್ರಿಯೆ/ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು/ ನಾವೆಲ್ಲ ಬಿಎಸ್‌ವೈ ನೇತೃತ್ವದಲ್ಲಿ ಚುನಾವಣೆ ಎದುರಿಸಿದವರು/ ಮುಜುಗರ ತರುವ ಕೆಲಸ ಮಾಡಬಾರದಿತ್ತು

click me!