ಆರಂಭವಾಯ್ತು ರೈಲು ಖಾಸಗೀಕರಣ,ಭುಗಿಲೆದ್ದ ವಿಶ್ವಕಪ್ ಫಿಕ್ಸಿಂಗ್ ಪ್ರಕರಣ; ಜು.2ರ ಟಾಪ್ 10 ಸುದ್ದಿ!

By Suvarna NewsFirst Published 2, Jul 2020, 4:46 PM
Highlights

ಪ್ರಯಾಣಿಕ ರೈಲುಗಳ ಖಾಸಗೀಕರಣ ಪ್ರಕ್ರಿಯೆಗೆ ಬುಧವಾರ ಭಾರತೀಯ ರೈಲ್ವೆ ಚಾಲನೆ ನೀಡಿದೆ. ಯೋಗಗುರು ರಾಮ್‌ದೇವ್‌ ನೇತೃತ್ವದ ಪತಂಜಲಿ ಆಯುರ್ವೇದ ಪರಿಶೋಧಿಸಿರುವ ಕೊರೋನಿಲ್‌ ಮಾರಾಟಕ್ಕೆ ಸಿಕ್ಕಿದೆ. ಇತ್ತ ಗಿರಿಧರ್ ಕಜೆ ಅವರ ಆಯುರ್ವೇದ ಔಷದ ಕೊರೋನಾಗೆ ರಾಮಬಾಣವಾಗಿದೆ. ವಿಶ್ವ​ಕಪ್‌ನಲ್ಲಿ ಫಿಕ್ಸಿಂಗ್‌ ಕುರಿತು 6 ಗಂಟೆಗಳ ಕಾಲ ಡಿ ಸಿಲ್ವಾ ಹಾಗೂ ತರಂಗಾ ವಿಚಾರಣೆ ನಡೆಸಲಾಗಿದೆ. ಸುಶಾಂತ್ ಸಾವಿಗೂ ಮುನ್ನ 50 ಸಿಮ್ ಬದಲಾವಣೆ, ಗೋಲ್ಡನ್ ಸ್ಟಾರ್ ಗಣೇಶ್‌ಗೆ ಹುಟ್ಟು ಹಬ್ಬ ಸಂಭ್ರ ಸೇರಿದಂತೆ ಜುಲೈ 2ರ ಟಾಪ್ 10 ನ್ಯೂಸ್ ಇಲ್ಲಿದೆ.

ಚೀನಾ ಕುತಂತ್ರಕ್ಕೆ ಪ್ರತಿಯಾಗಿ ಅಮೆರಿಕ, ಜರ್ಮನಿ ಟ್ರಿಕ್..! ಡ್ರ್ಯಾಗನ್ ವಿರುದ್ಧ ಭಾರತಕ್ಕೆ ಸಾಥ್...

ಕರಾಚಿ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡುವ ಪ್ರಕ್ರಿಯೆಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಹಾಗೂ ಜರ್ಮನಿ ವಿಳಂಬ ನೀತಿ ಅನುಸರಿಸಿದೆ. ಈ ಮೂಲಕ ಚೀನಾ, ಪಾಕ್‌ ಕುರಿತ ಅಸಮಾಧಾನ ಹೊರಹಾಕಿ, ಭಾರತದ ಬೆನ್ನಿಗೆ ನಿಂತಿವೆ ಪ್ರಮುಖ ರಾಷ್ಟ್ರಗಳು

ಮಾಸ್ ಧರಿಸದೇ ಬಸ್ಸಲ್ಲೇ ಸೆಕ್ಸ್: ಆಕೆಗಾಗಿ ಹುಡುಕುತ್ತಿದ್ದಾರೆ ಪೊಲೀಸರು!

ಕೊಲಂಬಿಯಾದಲ್ಲಿ ಒಂದು ಬಸ್‌ನಲ್ಲಿ ಮಾಸ್ಕ್‌ ಕೂಡ ಬಳಸದೆ ಸೆಕ್ಸ್‌ನಲ್ಲಿ ತೊಡಗಿಕೊಂಡ ಮಹಿಳೆ ಹಾಗೂ ಅದನ್ನು ಶೂಟ್‌ ಮಾಡಿದವರಿಗಾಗಿ ಈಗ ಪೊಲೀಸರು ಹುಡುಕಾಡ್ತಿದಾರೆ.

ಪತಂಜಲಿಯ ಕೊರೋನಿಲ್‌ ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌!

ಯೋಗಗುರು ರಾಮ್‌ದೇವ್‌ ನೇತೃತ್ವದ ಪತಂಜಲಿ ಆಯುರ್ವೇದ ಪರಿಶೋಧಿಸಿರುವ ಕೊರೋನಿಲ್‌ ಮಾರಾಟಕ್ಕೆ ಕೇಂದ್ರ ಆಯುಷ್‌ ಇಲಾಖೆ ಯಾವುದೇ ತಡೆ ಹೇರಿಲ್ಲ ಎಂಬ ವಿಚಾರ ಇದೀಗ ತಿಳಿದುಬಂದಿದೆ.

109 ಪ್ರಯಾಣಿಕ ರೈಲುಗಳ ಖಾಸಗೀಕರಣ ಪ್ರಕ್ರಿಯೆ ಶುರು!

ಪ್ರಯಾಣಿಕ ರೈಲುಗಳ ಖಾಸಗೀಕರಣ ಪ್ರಕ್ರಿಯೆಗೆ ಬುಧವಾರ ಭಾರತೀಯ ರೈಲ್ವೆ ಚಾಲನೆ ನೀಡಿದೆ. ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 109 ಜೋಡಿ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳನ್ನು ಖಾಸಗಿಗೆ ವಹಿಸಲು ರೈಲ್ವೆ ಇಲಾಖೆ ಆಸಕ್ತಿ ತೋರಿದ್ದು, ಅರ್ಹ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಹಾಕಬಹುದಾಗಿದೆ. ಇದರಿಂದಾಗಿ ರೈಲ್ವೆಗೆ 30 ಸಾವಿರ ಕೋಟಿ ರು. ಬಂಡವಾಳ ಹರಿದುಬರುವ ನಿರೀಕ್ಷೆಯಿದೆ.

ಗುಡ್‌ ನ್ಯೂಸ್: ಡಾ| ಕಜೆ ಕೋವಿಡ್‌ ಔಷಧ ಯಶಸ್ವಿ, ರೋಗಿಗಳು ಪೂರ್ಣ ಗುಣಮುಖ!

ರಾಜ್ಯದಲ್ಲಿ ಹತ್ತು ಮಂದಿ ಕೊರೋನಾ ಸೋಂಕಿತರಿಗೆ ಆಯುರ್ವೇದ ವೈದ್ಯ ಡಾ| ಗಿರಿಧರ ಕಜೆ ಸಂಶೋಧಿಸಿರುವ ಔಷಧ ನೀಡಿರುವುದರಿಂದ ಸಂಪೂರ್ಣ ಗುಣಮುಖರಾಗಿದ್ದು, ಔಷಧಿಯ ಮೊದಲ ಹಂತದ ಚಿಕಿತ್ಸಾ ಪ್ರಯೋಗ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ವಿಶ್ವ​ಕಪ್‌ನಲ್ಲಿ ಫಿಕ್ಸಿಂಗ್‌: 6 ಗಂಟೆಗಳ ಕಾಲ ಡಿ ಸಿಲ್ವಾ, ತರಂಗಾ ವಿಚಾರಣೆ

ವಿಶ್ವ​ಕಪ್‌ ತಂಡ​ವನ್ನು ಆಯ್ಕೆ ಮಾಡಿದ್ದ ಪ್ರಧಾನ ಆಯ್ಕೆಗಾರ ಅರ​ವಿಂದ ಡಿ ಸಿಲ್ವಾ ಅವ​ರನ್ನು ಸುದೀರ್ಘ 6 ಗಂಟೆಗಳ ಕಾಲ ವಿಚಾ​ರಣೆ ನಡೆ​ಸಿದೆ. ಇದರ ಬೆನ್ನಲ್ಲೇ ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಅವರನ್ನು ವಿಚಾರಣೆ ನಡೆಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ತಿಂಗಳಲ್ಲಿ 50 ಸಿಮ್‌ ಚೇಂಜ್‌, ಸಾಯುವ ಮುನ್ನ ತನ್ನ ಬಗ್ಗೆ ಗೂಗಲ್‌ ಮಾಡಿದ್ದ ಸುಶಾಂತ್‌!.

ಭಾರೀ ವಿವಾದಕ್ಕೆ ಕಾರಣವಾಗಿರುವ ಬಾಲಿವುಡ್‌ ಯುವನಟ ಸುಶಾಂತ್‌ ಸಿಂಗ್‌ ರಜಪೂತ್‌ ಸುತ್ತ ಇರುವ ಅನುಮಾನದ ಹುತ್ತ ಹೆಚ್ಚಾಗುತ್ತಲೇ ಇದೆ.

ಗೋಲ್ಡನ್ ಸ್ಟಾರ್ ಬರ್ತಡೇಗೆ ಸಿಂಪಲ್ ಡೈರೆಕ್ಟರ್‌ ಕೊಟ್ಟ 'ಸಖತ್' ಗಿಫ್ಟ್!

ಸ್ಯಾಂಡಲ್‌ವುಡ್‌ನಲ್ಲಿ 'ಮುಂಗಾರು ಮಳೆ'ಯಿಂದ 'ಮುಗುಳುನಗೆ' ತರಿಸಿದ 'ಹುಡುಗಾಟ'ದ 'ಕೃಷ್'ನಾದ ಗೋಲ್ಡನ್ ಸ್ಟಾರ್ ಗಣೇಶ್‌ ಇಂದು ಸರಳವಾಗಿ 40ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

ಚೀನೀ ಆ್ಯಪ್‌ ನಿಷೇಧದ ಬಳಿಕ ಭಾರತದ ಆ್ಯಪ್‌ಗಳಿಗೆ ಬಂಪರ್‌!

ಚೀನಾದ 59 ಮೊಬೈಲ್‌ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಗೇಟ್‌ಪಾಸ್‌ ನೀಡಿದ ಬೆನ್ನಲ್ಲೇ ಚಿಂಗಾರಿ, ಶೇರ್‌ಚಾಟ್‌, ರೊಪ್ಸೋ, ಗೋಸೋಷಿಯಲ್‌ ಸೇರಿದಂತೆ ಹಲವು ದೇಶೀಯ ಆ್ಯಪ್‌ಗಳ ಡೌನ್‌ಲೋಡ್‌ನಲ್ಲಿ ಗಣನೀಯ ಪ್ರಮಾಣ ಕಂಡುಬಂದಿದೆ

ಟೊಯೋಟಾ ಹಿಂದಿಕ್ಕಿ ವಿಶ್ವದ ಅತ್ಯಮೂಲ್ಯ ಕಾರು ಪಟ್ಟ ಗಿಟ್ಟಿಸಿಕೊಂಡ ಟೆಸ್ಲಾ!...

ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಇದೀಗ ಮತ್ತೊಂದು ಇತಿಹಾಸ ರಚಿಸಿದೆ. ಟೆಸ್ಲಾ ಇದೀಗ ವಿಶ್ವದ ಅತ್ಯಮೂಲ್ಯ ವಾಹನ ತಯಾಕರ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

Read Exclusive COVID-19 Coronavirus News updates, from Karnataka, India and World at Asianet News Kannada.

Last Updated 2, Jul 2020, 4:54 PM