ಕಾಶ್ಮೀರ ವಿಷಯ ಮಾತಾಡಿಲ್ಲ: ಮೋದಿ ಮುಂದೆ ಕ್ಸಿ ಕೆಮ್ಮಂಗಿಲ್ಲ!

Published : Oct 12, 2019, 06:22 PM IST
ಕಾಶ್ಮೀರ ವಿಷಯ ಮಾತಾಡಿಲ್ಲ: ಮೋದಿ ಮುಂದೆ ಕ್ಸಿ ಕೆಮ್ಮಂಗಿಲ್ಲ!

ಸಾರಾಂಶ

ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ  ಅಂತ್ಯ| ಮಹತ್ವದ ಒಪ್ಪಂದಗಳಿಗೆ ಸೈ ಎಂದ ಮೋದಿ-ಕ್ಸಿ| ಮಾತುಕತೆ ವೇಳೆ ಜಮ್ಮು ಮತ್ತು ಕಾಶ್ಮೀರ ವಿಚಾರದ ಪಸ್ತಾಪ ಇಲ್ಲ| ಮೋದಿ-ಕ್ಸಿ ಕಾಶ್ಮೀರ ವಿಚಾರ ಮಾತನಾಡಿಲ್ಲ ಎಂದ ಭಾರತ| ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಲು ಉಭಯ ನಾಯಕರ ಸಮ್ಮತಿ| 

ನವದೆಹಲಿ(ಅ12): ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಭಾರತ ಭೇಟಿ ಮುಕ್ತಾಯ ಕಂಡಿದ್ದು, ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸೈ ಎಂದಿದ್ದಾರೆ.

ಈ ಮಧ್ಯೆ ಮೋದಿ-ಕ್ಸಿ ಚರ್ಚೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಉಭಯ ನಾಯಕರ ನಡುವಿನ ಚರ್ಚೆಯ ಸಂದರ್ಭದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಭಾರತ ಆಂತರಿಕ ವಿಚಾರವಾಗಿದ್ದು, ಇದನ್ನು ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಸ್ತಾಪಿಸುವ ಅಗತ್ಯ ಭಾರತಕ್ಕಿಲ್ಲ ಎಂದು ಗೋಖಲೆ ಹೇಳಿದ್ದಾರೆ.

ಆದರೆ ಭಯೋತ್ಪಾದನೆಯ ಸವಾಲನ್ನು ಎದುರಿಸಲು ಒಂದಾಗಬೇಕೆಂಬ ಪ್ರಸ್ತಾವನೆಗೆ ಮೋದಿ ಮತ್ತು ಕ್ಸಿ  ಸಮ್ಮತಿಸಿದ್ದಾರೆ ಎಂದು ಗೋಖಲೆ ಮಾಹಿತಿ ನೀಡಿದರು.

 ಸಂಕೀರ್ಣ ಜಗತ್ತಿನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಸವಾಲುಗಳನ್ನು ಎದುರಿಸುವುದು ಮುಖ್ಯ ಎಂದು ಎರಡೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಗೋಖಲೆ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ