ಕಿರುಕುಳವೇ ರಮೇಶ್ ಆತ್ಮಹತ್ಯೆಗೆ ಕಾರಣ: ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಐಟಿ

By Web DeskFirst Published Oct 12, 2019, 5:27 PM IST
Highlights

ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದಲೇ ಮಾಜಿ ಡಿಸಿಎಂ ಪಿಎ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಆರೋಪಗಳಿಗೆ ಇದೀಗ ಸ್ವತಃ ಐಟಿ ಇಲಾಖೆ ಸ್ಪಷ್ಟನೆ ನೀಡಿದೆ. ಹಾಗಾದ್ರೆ ರಮೇಶ್ ಆತ್ಮಹತ್ಯೆ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದೇನು? ಈ ಕೆಳಗಿನಂತಿದೆ.

ಬೆಂಗಳೂರು, (ಅ.12): ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಪರಾರಿಯಾಗಿದ್ದ ಪಿಎ ರಮೇಶ್ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನ ಸಾಯಿ ಗ್ರೌಂಟ್‌ನಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. 

ಐಟಿ ಅಧಿಕಾರಿಗಳ ಕಿರುಕುಳದಿಂದಲೇ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಸ್ವತಃ ಆದಾಯ ತೆರಿಗೆ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದೆ.

ನನ್ನ ಹೆಂಡತಿ ಮಕ್ಕಳಿಗೆ ಟಾರ್ಚರ್ ಕೊಡಬೇಡಿ, ಪರಂ ಪಿಎ ಡೆತ್‌ ನೋಟ್‌ ಪತ್ತೆ!

ಆತ್ಮಹತ್ಯೆ ಮಾಡಿಕೊಂಡ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿಲ್ಲ ಮತ್ತು ಅವರನ್ನು ವಿಚಾರಣೆಗೂ ಒಳಪಡಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

ಪರಮೇಶ್ವರ್ ಅವರ ನಿವಾಸ ಮತ್ತು ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿತ್ತು. ಅ.10ರಂದು ಕೊರಟಗೆರೆಯಲ್ಲಿರುವ ಪರಮೇಶ್ವರ್ ಅವರ ನಿವಾಸ ಮೇಲೆ ದಾಳಿ ನಡೆಸಿದಾಗ ಪರಮೇಶ್ವರ್ ಇರಲಿಲ್ಲ. ಅವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಹೀಗಾಗಿ ಅವರಿದ್ದ ಸ್ಥಳಕ್ಕೆ ತೆರಳಿ ರಕ್ಷಣೆಯೊಂದಿಗೆ ಮನೆಗೆ ಕರೆದುಕೊಂಡು ಬರಲಾಗಿತ್ತು. 

ಐಟಿ ದಾಳಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ!

ಅವರೊಂದಿಗೆ ರಮೇಶ್ ಕೂಡ ಇದ್ದರು. ತಪಾಸಣೆ ಬಳಿಕ ರಮೇಶ್ ಅವರಿಂದ ಪಂಚನಾಮೆಯ ಹೇಳಿಕೆ ದಾಖಲು ಮಾಡಿಕೊಂಡಿದ್ದೆವಷ್ಟೇ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಪರಮೇಶ್ವರ್ ಅವರ ಮನೆಯಲ್ಲಿ ಅ. 12ರಂದು ರಾತ್ರಿ 2.45ರ ವೇಳೆಗೆ ತಪಾಸಣೆ ಮುಗಿದಿತ್ತು. ಅಲ್ಲಿಯವರೆಗೂ ರಮೇಶ್ ಮನೆಯಲ್ಲಿಯೇ ಇದ್ದರು. ಆದಾಯ ತೆರಿಗೆ ಕಾಯ್ದೆಯ 131, 132 (4)ರ ಅಡಿ ರಮೇಶ್ ಅವರಿಂದ ಹೇಳಿಕೆ ಪಡೆದುಕೊಂಡಿರಲಿಲ್ಲ. 

ಪರಮೇಶ್ವರ್ ಖಜಾನೆ ಜಾಲಾಡಿದ IT: 100 ಕೋಟಿ ಅಘೋಷಿತ ಆಸ್ತಿ ಪತ್ತೆ

ರಮೇಶ್ ಮನೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ. ಈ ಸಂಬಂಧ ಅವರ ವಿಚಾರಣೆಯನ್ನು ಕೂಡ ನಡೆಸಿಲ್ಲ. ಪರಮೇಶ್ವರ್ ಅವರ ಮನೆ ಮೇಲಿನ ದಾಳಿಗೆ ಕುರಿತಂತೆ ಕೂಡ ವಿಚಾರಣೆ ನಡೆಸಿಲ್ಲ ಎಂದು ಹೇಳಿದ್ದಾರೆ.

click me!