ಪರಮೇಶ್ವರ್ ಪಿಎ ರಮೇಶ್ ಮೃತದೇಹ ಪತ್ತೆ ಆಗಿದ್ದೇಗೆ? ಫಸ್ಟ್ ನೋಡಿದ್ಯಾರು?

Published : Oct 12, 2019, 06:20 PM IST
ಪರಮೇಶ್ವರ್ ಪಿಎ ರಮೇಶ್ ಮೃತದೇಹ ಪತ್ತೆ ಆಗಿದ್ದೇಗೆ? ಫಸ್ಟ್ ನೋಡಿದ್ಯಾರು?

ಸಾರಾಂಶ

ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ PA ರಮೇಶ್  ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊದಲಿಗೆ ತಿಳಿದಿದ್ದು ಯಾರಿಗೆ? ರಮೇಶ್ ಮೃತದೇಹವನ್ನು ಮೊದಲು ಪತ್ತೆ ಮಾಡಿದ್ಯಾರು? ಎನ್ನುವುದಕ್ಕೆ ಸ್ವತಃ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನತ್ ಅವರು ಪ್ರತಿಕ್ರಿಯಿಸಿದ್ದು, ಅದು ಈ ಕೆಳಗಿನಂತಿದೆ.

ಬೆಂಗಳೂರು, [ಅ.12]: ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಪಿಎ ರಮೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು [ಶನಿವಾರ] ಬೆಳಗ್ಗೆ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನ ಸಾಯಿ ಗ್ರೌಂಟ್‌ನಲ್ಲಿದ್ದ ಮರಕ್ಕೆ ರಮೇಶ್ ನೇಣು ಹಾಕಿಕೊಂಡಿದ್ದಾರೆ. ಹಾಗಾದ್ರೆ ರಮೇಶ್  ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊದಲಿಗೆ ತಿಳಿದಿದ್ದು ಯಾರಿಗೆ? ರಮೇಶ್ ಮೃತದೇಹವನ್ನು ಮೊದಲು ಪತ್ತೆ ಮಾಡಿದ್ಯಾರು? ಎನ್ನುವುದಕ್ಕೆ ಸ್ವತಃ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನತ್ ಅವರು ಪ್ರತಿಕ್ರಿಯಿಸಿದ್ದು, ಅದು ಈ ಕೆಳಗಿನಂತಿದೆ.

ಕಿರುಕುಳವೇ ರಮೇಶ್ ಆತ್ಮಹತ್ಯೆಗೆ ಕಾರಣ: ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಐಟಿ

ಬೆಳಗ್ಗೆ 9 ಗಂಟೆ ಸುಮಾರಿಗೆ [ಶನಿವಾರ] ಫ್ರೆಂಡ್ಸ್ ಜೊತೆ ಮಾತನಾಡುವಾಗ ಆತ್ಮಹತ್ಯೆ ಬಗ್ಗೆ ರಮೇಶ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಕೂಡಲೆ ನಮಗೆ ಮಾಹಿತಿ ಬಂದಿದೆ.  ಮೊಬೈಲ್ ಲೋಕೆಷನ್ ಆಧರಿಸಿ ಜ್ಞಾನ ಭಾರತಿ ಕ್ಯಾಂಪಸ್ ನಲ್ಲಿ ಪೊಲೀಸರು ಹುಡುಕಾಟ ನಡೆಸಿದ್ರು. ಆಗ ಕ್ಯಾಂಪಸ್ ನ ಅರಣ್ಯ ಪ್ರದೇಶದಲ್ಲಿ ರಮೇಶ್ ಮೃತ ದೇಹ ಪತ್ತೆಯಾಗಿತ್ತು ಎಂದು ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನತ್ ಮಾಹಿತಿ ನೀಡಿದರು.

ನನ್ನ ಹೆಂಡತಿ ಮಕ್ಕಳಿಗೆ ಟಾರ್ಚರ್ ಕೊಡಬೇಡಿ, ಪರಂ ಪಿಎ ಡೆತ್‌ ನೋಟ್‌ ಪತ್ತೆ!

ಫ್ಯಾಮಿಲಿಯವರನ್ನ ಕರೆಯಿಸಿ ರಮೇಶ್ ಗುರುತು ಪತ್ತೆ ಮಾಡಿದ್ದೇವೆ. ನಂತರ ಎಫ್ ಎಸ್ ಎಲ್ ತಜ್ಞರು ಕೂಡ ಭೇಟಿ ಮಾಡಿ ಮಹಜರ್ ಮಾಡಿದ್ದಾರೆ ಎಂದರು. ಇನ್ನು ಈ ಬಗ್ಗೆ ಮೃತ ರಮೇಶ್ ಕುಟುಂಬಸ್ಥರು ದೂರು ನೀಡಿದ್ದು, ಆ ದೂರಿನ ಅನ್ವಯ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ಐಟಿ ಅಧಿಕಾರಿಗಳು ಕೊಟ್ಟ ಕಿರುಕುಳವೇ ರಮೇಶ್ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಆದ್ರೆ ಇದನ್ನು ಆದಾಯ ತೆರಿಗೆ ಇಲಾಖೆ ತಳ್ಳಿಹಾಕಿದ್ದು, ರಮೇಶ್ ಅವರಿಗೆ ಯಾವುದೇ ಕಿರುಕುಳ ನೀಡಿಲ್ಲ. ಅಷ್ಟೇ ಅಲ್ಲದೇ ಅವರನ್ನು ವಶಕ್ಕೆ ಪಡೆದು ವಿಚಾರಣೆಯನ್ನೂ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು