ವರ್ಗಾವಣೆಯಾದ ಅಧಿಕಾರಿ ರೋಹಿಣಿ, ಎಲ್ಲೆಲ್ಲೂ ಹೌಡಿ ಮೋಡಿ ; ಇಲ್ಲಿವೆ ಸೆ.23ರ ಟಾಪ್ 10 ಸುದ್ದಿ!

By Web DeskFirst Published Sep 23, 2019, 4:35 PM IST
Highlights

ರಾಜಕೀಯ ನಾಯಕರ ಹಿತಾಸಕ್ತಿಗೆ ದಕ್ಷ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಇದೀಗ ಕಾರ್ಮಿಕರ ಹಿತ ಕಾಪಾಡಲು ಹೋದ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಲಾಗಿದೆ. ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಹೆಚ್ ಡಿ ರೇವಣ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ. ಲಿಪ್ ಲಾಕ್ ವಿವಾದಕ್ಕೆ ತುತ್ತಾಗಿರುವ ನೀರ್ ದೋಸೆ ಬೆಡಗಿ ಹರಿಪ್ರಿಯಾ ಇದೀಗ ಖಾರವಾಗಿ ಉತ್ತರ ನೀಡಿದ್ದಾರೆ. ಹೌಡಿ ಮೋದಿ ಹವಾ, ಟೀಂ ಇಂಡಿಯಾ ಕ್ರಿಕೆಟಿಗರಿಗೆ ಗುಡ್ ನ್ಯೂಸ್ ಸೇರಿದಂತೆ ಸೆ.23ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

1) ಕಾರ್ಮಿಕರ ಹಿತ ಕಾಯಲು ಮುಂದಾದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಗೆ ವರ್ಗ!


ರಾಜ್ಯದಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಂತಹ ರಾಜ್ಯದ ಪ್ರಾಮಾಣಿಕ ದಕ್ಷ ಅಧಿಕಾರಿಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಆದ್ರೆ ಇಲ್ಲಿ ಕಾರ್ಮಿಕರ ಹಿತ ಕಾಯಲು ಹೋಗಿದ್ದ ಪ್ರಮಾಣಿಕ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಿಕ್ಕಿದ್ದು ವರ್ಗಾವಣೆ ಭಾಗ್ಯ.

2) ಕಾಂಗ್ರೆಸ್ ಅಭ್ಯರ್ಥಿಗೆ ನಡುಕ ಹುಟ್ಟಿಸಿದೆ ಕೋಡಿ ಮಠದ ಭವಿಷ್ಯ

ರಾಜ್ಯದ 15 ಕ್ಷೇತ್ರಗಳ ಉಪಚುನಾಣೆಗೆ ದಿನಾಂಕ ನಿಗದಿಯಾಗಿದೆ. ಇತ್ತ JDS ಶಾಸಕ ವಿಶ್ವನಾಥ್ ಅನರ್ಹತೆಯಿಂದ ತೆರವಾದ ಹುಣಸೂರು ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯುತ್ತಿದ್ದು ಇಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗೆ ಈಗಲೇ ತೀವ್ರ ಭಯ ಆರಂಭವಾಗಿದೆ. 

3) ಬಿಲಿಯನ್ ಡಾಲರ್ ಸೆಲ್ಫೀ: ಮೋದಿ ಟ್ರಂಪ್ ಜೊತೆ ಮಿಂಚಿದ ಕನ್ನಡದ ಕುವರ!

ಹೌಡಿ ಮೋದಿ ಸಮಾವೇಶ ಇಡೀ ವಿಶ್ವದ ಗಮನ ಸೆಳೆದಿದೆ. ಒಂದೆಡೆ ಇದು ಮೋದಿ ಹಾಗೂ ಟ್ರಂಪ್ ನಡುವಿನ ಸ್ನೇಹವೆಷ್ಟು ಆಳವಿದೆ ಎಂಬುವುದನ್ನು ಬಹಿರಂಗಪಡಿಸಿದರೆ, ಅತ್ತ ಮೋದಿ ಭಾಷಣವೂ ಭಾರೀ ಸದ್ದು ಮಾಡಿದೆ. ಆದರೆ ಇವೆಲ್ಲದರ ನಡುವೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಡಾಲರ್ ಸೆಲ್ಫೀ ಒಂದು ಭಾರೀ ಸೌಂಡ್ ಮಾಡುತ್ತಿದೆ. ಪುಟ್ಟ ಹುಡುಗನೊಬ್ಬ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಟ್ರಂಪ್ ಬಳಿ ಮನವಿ ಮಾಡಿಕೊಂಡು ತೆಗೆಸಿಕೊಂಡ ಸೆಲ್ಫೀ ಎಲ್ಲರ ಮನ ಗೆದ್ದಿದೆ. ಹೀಗಿರುವಾಗ ವಿಶ್ವದ ಗಮನಸೆಳೆದ ಬಾಲಕ ಕನ್ನಡಿಗ ಎಂಬುವುದು ಮತ್ತೊಂದು ಹೆಮ್ಮೆಯ ವಿಚಾರ.

4) ಟೀಂ ಇಂಡಿಯಾ ಕ್ರಿಕೆಟಿಗರಿಗಿದು ಗುಡ್ ನ್ಯೂಸ್..!

ವಿದೇಶಿ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಸಿಹಿ ಸುದ್ದಿಯೊಂದನ್ನು ಕ್ರಿಕೆಟ್ ಆಡಳಿತ ಸಮಿತಿ[CoA] ನೀಡಿದ್ದು, ಭಾರತ ಕ್ರಿಕೆಟ್‌ ತಂಡದ ವಿದೇಶ ಪ್ರವಾಸಗಳ ವೇಳೆ ಆಟ​ಗಾ​ರರ ದಿನ​ಭತ್ಯೆಯನ್ನು ಬಿಸಿ​ಸಿಐ ಡಬಲ್ ಮಾಡಿದೆ.

5) ಲಿಪ್‌ಲಾಕ್‌ ವಿವಾದಕ್ಕೆ ಖಾರವಾಗಿ ಉತ್ತರಿಸಿದ ನೀರ್‌ದೋಸೆ ಬೆಡಗಿ

ನಾನು ಕಲಾವಿದೆ. ಒಂದು ಪಾತ್ರದ ಅಗತ್ಯಕ್ಕೆ ತಕ್ಕಂತೆ ನಟಿಸುವಾಗ ಇಷ್ಟುಚಿಕ್ಕ ವಿಷಯಗಳೆಲ್ಲ ಸಹಜ. ಅಷ್ಟಾಗಿಯೂ ನನಗೂ ನಟನೆಯ ಇತಿ-ಮಿತಿಗಳು ಗೊತ್ತಿವೆ. ಯಾವತ್ತಿಗೂ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ಆಗುವ ಹಾಗೆ ನಟಿಸುವ ಮಾತೇ ಇಲ್ಲ ಎಂದು ನೀರ್‌ ದೋಸೆ ಬೆಡಗಿ ಹರಿಪ್ರಿಯಾ ಹೇಳಿದ್ದಾರೆ.

6) ಸುಳ್ಳು ಸುದ್ದಿ ಹಬ್ಬಿಸಲು ಕೆಬಿಸಿಗೆ ಪಾಕ್‌ ಮೊರೆ!

ಹನಿ ಟ್ರಾಪ್‌, ಕಂಪ್ಯೂಟರ್‌ ಹ್ಯಾಕಿಂಗ್‌ ಮೂಲಕ ಭಾರತೀಯ ನಾಗರಿಕರ ಹಾಗೂ ಸೇನೆಯ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿದ್ದ ಪಾಕಿಸ್ತಾನ, ಈಗ ಹೊಸದೊಂದು ತಂತ್ರದ ಮೂಲಕ ಮಾಹಿತಿ ಕಳ್ಳತನ ಮಾಡುತ್ತಿದೆ ಎನ್ನುವ ವಿಚಾರ ಬೆಳೆಕಿಗೆ ಬಂದಿದೆ. ನಕಲಿ ಸಮಾಜಿಕ ಜಾಲತಾಣ ಖಾತೆಗಳ ಮೂಲಕ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ ಹೆಸರಿನಲ್ಲಿ ವೈಯಕ್ತಿಕ ಮಾಹಿತಿಗಳನ್ನು ಕದ್ದು, ಸುಳ್ಳು ಸುದ್ದಿ ಹರಡಲಾಗುತ್ತದೆ ಎಂದು ತಿಳಿದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

7) ಇದು ಕುಮಾರಸ್ವಾಮಿ, ದೇವೇಗೌಡರ ದೌರ್ಭಾಗ್ಯ : ತಂದೆ, ತಮ್ಮನ ವಿರುದ್ಧವೇ ಗುಡುಗಿದ ರೇವಣ್ಣ

ಕಸದ ಬುಟ್ಟಿಯಲ್ಲಿ ಇದ್ದವರನ್ನು ತೆಗೆದುಕೊಂಡು ಗೆಲ್ಲಿಸುತ್ತಾರೆ ಇದು ಕುಮಾರಸ್ವಾಮಿ ಹಾಗೂ ದೇವೇಗೌಡರ ದೌರ್ಭಾಗ್ಯ  ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ದೇವೇಗೌಡರದ್ದು, ಕುಮಾರಸ್ವಾಮಿ ಅವರದ್ದು ಹಿತ್ತಾಳೆ ಕಿವಿ ಎನ್ನುವ ಶಿವರಾಮೇಗೌಡ ಹೇಳಿಕೆಗೆ ಹಾಸನದಲ್ಲಿಂದು ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

8)  6 ದಿನದಲ್ಲಿ ಪೆಟ್ರೋಲ್ ದರ ಭಾರಿ ಏರಿಕೆ

ಸೌದಿ ಬಿಕ್ಕಟ್ಟಿನ ಬಳಿಕ ದಿನೇ ದಿನೇ ಏರುತ್ತಿರುವ ಕಚ್ಚಾತೈಲ ಬೆಲೆ, ಕಳೆದ 6 ದಿನಗಳಲ್ಲಿ ಭರ್ಜರಿ ಏರಿಕೆ ಕಂಡಿದೆ. 6 ದಿನಗಳಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 1.59 ರು. ಮತ್ತು ಡೀಸೆಲ್‌ ಬೆಲೆ ಲೀ.ಗೆ 1.31 ರು.ನಷ್ಟುಹೆಚ್ಚಳವಾಗಿದೆ. ಇದು ದೈನಂದಿನ ತೈಲ ಬೆಲೆ ಪರಿಷ್ಕರಣೆ ನೀತಿ 2017ರಲ್ಲಿ ಜಾರಿಯಾದ ಬಳಿಕ ಒಂದು ವಾರದಲ್ಲಿ ಆಗಿರುವ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ.

9)  ಸಂಸದ ತೇಜಸ್ವಿ ಸೂರ್ಯ ಹೊಗಳಿದ ದೇವೇಗೌಡ!

ಸಂಸದ ತೇಜಸ್ವಿ ಸೂರ್ಯ ಅವರನ್ನು ಹೊಗಳುವ ಮೂಲಕ ದೇವೇಗೌಡ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ನಾಯಕರ ವಿರುದ್ದ ಕೆಂಡಾಮಂಡಲವಾಗುವ ದೇವೇಗೌಡ ಇದೀಗ ಸಾಫ್ಟ್ ಕಾರ್ನರ್ ತೋರಿಸಿದ್ದು, ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಸೂಚನೆಗಳನ್ನು ತಳ್ಳಿ ಹಾಕುವಂತಿಲ್ಲ. 

10) ಅನರ್ಹರ ಅರ್ಜಿ ವಿಚಾರಣೆ ಸೆ.25ಕ್ಕೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ!

17 ಮಂದಿ ಅನರ್ಹ ಶಾಸಕರು ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೆ.25, ಬುಧವಾರಕ್ಕೆ ಮುಂದೂಡಿದೆ. ಹೀಗಿದ್ದರೂ ಕರ್ನಾಟಕ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಚುನಾವಣಾ ಆಯೋಗ ವಕಾಶ ಮಾಡಿಕೊಟ್ಟಿದೆ. ಈ ಮೂಲಕ ಅನರ್ಹ ಶಾಸಕರಿಗಿದ್ದ ಬಹುದೊಡ್ಡ ತಲೆನೋವು ನಿವಾರಣೆಯಾಗಿದೆ.
 

click me!