Video: ಸೆನೆಟರ್ ಕಾರ್ನಿನ್ ಪತ್ನಿ ಬಳಿ ಕ್ಷಮೆ ಯಾಚಿಸಿದ ಮೋದಿ: ಕಾರಣವೇನು?

By Web Desk  |  First Published Sep 23, 2019, 4:18 PM IST

ಅಮೆರಿಕಾದಲ್ಲಿ ಹೌಡಿ ಮೋದಿ, ಹವಾ ಎಬ್ಬಿಸಿದ ಮೋದಿ| 50ಸಾವಿರಕ್ಕೂ ಅಧಿಕ ಮಂದಿಯನ್ನು ಉದ್ದೇಶಿಸಿದ ಮೋದಿ| ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸೆನೆಟರ್ ಕಾರ್ನಿನ್ ಪತ್ನಿ ಬಳಿ ಕ್ಷಮೆ ಯಾಚಿಸಿದ ಮೋದಿ| ಏನಾಯ್ತು? Sorry ಹೇಳಿದ್ದು ಯಾಕೆ? ಇಲ್ಲಿದೆ ಉತ್ತರ


ಹ್ಯೂಸ್ಟನ್[ಸೆ.23]: ಅಮೆರಿಕಾದ ಹ್ಯೂಸ್ಟನ್ ಹೌಡಿ ಮೋದಿ ಕರ್ಯಕ್ರಮ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವಾರು ಸುದ್ದಿ, ಫೋಟೋ ವಿಡಿಯೋಗಳು ವೈರಲ್ ಆಗುತ್ತಿವೆ. ಮೋದಿ ಭಾಷಣ ಇಂದಿನ ಹೆಡ್ ಲೈನ್ ಆಗಿದ್ದರೆ, ಟ್ರಂಪ್ ಹಾಗೂ ಮೋದಿ ಜೊತೆ ಸೆಲ್ಫೀ ತೆಗೆಸಿಕೊಂಡ ಶಿರಸಿ ಮೂಲಕ ಬಾಲಕ ನೆಟ್ಟಿಗರ ಮೋಸ್ಟ್ ಫೇವರಿಟ್ ಆಗಿದ್ದಾನೆ. ಇವೆಲ್ಲದರ ನಡುವೆ ಸದ್ಯ ಪ್ರಧಾನಿ ಮೋದಿ, ಸೆನೆಟರ್ ಜಾನ್ ಕಾರ್ನಿನ್ ಪತ್ನಿ ಬಳಿ ಕ್ಷಮೆ ಯಾಚಿಸಿದ ವಿಡಿಯೋ ಸೌಂಡ್ ಮಾಡಲಾರಂಭಿಸಿದೆ. ಮೋದಿ Sorry ಅಂದಿದ್ದೇಕೆ? ಮುಂದಿದೆ ವಿವರ

ಬಿಲಿಯನ್ ಡಾಲರ್ ಸೆಲ್ಫೀ: ಮೋದಿ ಟ್ರಂಪ್ ಜೊತೆ ಮಿಂಚಿದ ಕನ್ನಡದ ಕುವರ!

Tap to resize

Latest Videos

undefined

ಹೌದು ಪ್ರಧಾನಿ ಕಾರ್ಯಾಲಯದ ಅಧಿಕೃತ ಟ್ವಿಟರ್ ಅಕೌಂಟ್ ನಿಂದ ವಿಡಿಯೋ ಒಂದನ್ನು ಟ್ವೀಟ್ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೆನೆಟರ್ ಜಾನ್ ಕಾರ್ನಿನ್ ಪತ್ನಿ ಬಳಿ ಕ್ಷಮೆ ಯಾಚಿಸಿದ್ದಾರೆ. ವಾಸ್ತವವಾಗಿ ನಿನ್ನೆ ಭಾನುವಾರ ಸೆನೆಟರ್ ಜಾನ್ ಕಾರ್ನಿನ್ ಪತ್ನಿಯ ಹುಟ್ಟುಹಬ್ಬ. ಆದರೆ ಹೌಡಿ ಮೋದಿ ಕಾರ್ಯಕ್ರಮದಿಂದಾಗಿ, ಪತ್ನಿಯ ಹುಟ್ಟುಹಬ್ಬ ಆಚರಿಸಲು ಹಾಗೂ ಕುಟುಂಬ ಸದಸ್ಯರೊಂದಿಗಿರಲು ಜಾನ್ ರಿಗೆ ಸಮಯವಿರಲಿಲ್ಲ. ಈ ವಿಚಾರ ಪ್ರಧಾನಿ ಮೋದಿಗೆ ತಿಳಿಯುತ್ತಿದ್ದಂತೆಯೇ ಜಾನ್ ಪತ್ನಿ ಬಳಿ ಕ್ಷಮೆ ಯಾಚಿಸಿದ್ದಾರೆ.

Here is what happened when PM met Senator . pic.twitter.com/O9S1j0l7f1

— PMO India (@PMOIndia)

ವಿಡಿಯೋದಲ್ಲಿ ಮೋದಿ ಹೇಳಿದ್ದೇನು

ವಿಡಿಯೋದಲ್ಲಿ ಸೆನೆಟರ್ ಜಾನ್ ಕಾರ್ನಿನ್ ಪತ್ನಿಯನ್ನುದ್ದೆಶಿಸಿ ಮಾತನಾಡಿರುವ ಮೋದಿ 'ನಾನು ನಿಮ್ಮ ಬಳಿ ಕ್ಷಮೆ ಯಾಚಿಸುತ್ತೇನೆ. ಯಾಕೆಂದರೆ ಇಂದು ನಿಮ್ಮ ಹುಟ್ಟಿದ ದಿನ. ಆದರೆ ನಿಮ್ಮ ನೆಚ್ಚಿನ ಸಂಗಾತಿ ನನ್ನೊಂದಿಗಿದ್ದಾರೆ. ಹೀಗಿರುವಾಗ ನಿಮಗೆ ಕೊಂಚ ಅಸೂಯೆ ಆಗುವುದು ಸಹಜ. ಆದ್ರೆ ಇಂತಹ ಶುಭ ದಿನ ನಾನು ನಿಮಗೆ ಶುಭ ಕೋರುತ್ತೇನೆ. ನಿಮಗೆ ಒಳ್ಳೆಯದಾಗಲಿ' ಎಂದಿದ್ದಾರೆ.

ಬಿಲಿಯನ್ ಡಾಲರ್ ಸೆಲ್ಫೀ: ಮೋದಿ ಟ್ರಂಪ್ ಜೊತೆ ಮಿಂಚಿದ ಕನ್ನಡದ ಕುವರ!

ಪ್ರಧಾನಿ ಮೋದಿಯ ಈ ಸರಳತೆ ಅಲ್ಲಿ ನೆರೆದಿದ್ದ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇನ್ನು ತನ್ನ ಪತ್ನಿಯ ಬಳಿ ಕ್ಷಮೆ ಯಾಚಿಸಿ, ಹುಟ್ಟುಹಬ್ಬಕ್ಕೆ ಶುಭ ಕೋರಿದ ಮೋದಿಗೆ , ಸೆನೆಟರ್ ಜಾನ್ ಕಾರ್ನಿನ್ ಧನ್ಯವಾದ ತಿಳಿಸಿದ್ದಾರೆ.

click me!