
ತಿರುವನಂತಪುರಂ(ಜ.05): ಶಬರಿಮಲೆಯಲ್ಲಿ ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹಲವಾರು ಹೋರಾಟಗಳ ಬಳಿಕ ಕೊನೆಗೂ ಮಹಿಳೆಯರು ದೇಗುಲ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಶಬರಿಮಲೆಗೆ ಅಯ್ಯಪ್ಪನ ದೇಗುಲಕ್ಕೆ ರಾತ್ರೋ ರಾತ್ರಿ ಮಹಿಳೆಯರಿಬ್ಬರು ಪ್ರವೇಶ ಮಾಡಿದ್ದಾರೆ. ಭಾರಿ ವಿರೋಧ ಪ್ರತಿಭಟನೆಯ ನಡುವೆಯೂ ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕನಕದುರ್ಗಾ ಹಾಗೂ ಬಿಂದು ಎಂಬ ಮಹಿಳೆಯರಿಬ್ಬರು ದೇಗುಲ ಪ್ರವೇಶ ಮಾಡಿದ್ದಾರೆ.
ಆದರೆ ಕನಕದುರ್ಗಾ ಹಾಗೂ ಬಿಂದು ದೇಗುಲ ಪ್ರವೇಶಿಸಿದ್ದು ಹೇಗೆ ಎಂಬ ಕುರಿತು ಈಗಲೂ ಚರ್ಚೆಯಾಗುತ್ತಿದೆ. ಅದರಂತೆ ಈ ಇಬ್ಬರೂ ಮಹಿಳೆಯರಿಗೂ ದೇವಾಲಯ ಪ್ರವೇಶಿಸಲು ನೆರವು ನೀಡಿದ್ದು, ತ್ರಿಶೂರು ಮೂಲದ ಮನಶ್ಶಾಸ್ತ್ರಜ್ಞ ಡಾ. ಪ್ರಸಾದ್ ಅಮೋರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಹೌದು, ಕನಕುದುರ್ಗಾ ಮತ್ತು ಬಿಂದು ದೇವಾಲಯ ಪ್ರವೇಶಿಸಲು ಡಾ. ಅಮೋರೆ ನೆರವಾಗಿದ್ದಾರೆ. ಕೆಲ ದಿನಗಳ ಹಿಂದೆ ಫೇಸ್‌ಬುಕ್ ಮೂಲಕ ಪರಿಚಿತರಾದ ಈ ಮೂವರೂ, ಮನಶಾಸ್ತ್ರದ ಸಹಾಯದಿಂದ ದೇವಾಲಯ ಪ್ರವೇಶಿಸಲು ಯೋಜನೆ ರೂಪಿಸಿದ್ದಾರೆ.
ಏನಿದು ಇನ್ವಿಸಿಬಲ್ ಗೋರಿಲ್ಲಾ ಥಿಯರಿ?
ಡಾ. ಅಮೋರೆ ತಮ್ಮ ಮನಶಾಸ್ತ್ರದ ಸಿದ್ಧಾಂತದ ಸಹಾಯದಿಂದ ಕನಕದುರ್ಗಾ ಮತ್ತು ಬಿಂದು ದೇಗುಲ ಪ್ರವೇಶಿಸಲು ಸಹಾಯ ಮಾಡಿದ್ದಾರೆ. ತುಂಬಾ ಸಾಮಾನ್ಯರಂತೆ ಜನಜಂಗುಳಿಯಲ್ಲಿ ಹೋಗುವಂತೆ ಡಾ. ಅಮೋರೆ ತಿಳಿಸಿದ್ದರು. ಅಲ್ಲದೇ ಯಾರತ್ತಲೂ ದಿಟ್ಟಿಸಿ ನೋಡದಂತೆ, ಮುಖದಲ್ಲಿ ಭಯ ತೋರಿಸದಂತೆ ಮತ್ತು ಅಕ್ಕಪಕ್ಕ ನಡೆಯುತ್ತಿರುವ ಘಟನೆಗಳಿಗೆ ವಿಶೇಷ ಗಮನ ಕೊಡದಂತೆ ಡಾ. ಅಮೋರೆ ಪಾಠ ಮಾಡಿದ್ದರು.
ಇದರಿಂದ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಜನಜಂಗುಳಿಗೆ ತಮ್ಮ ಮಧ್ಯೆಯೇ ಇಬ್ಬರು ಮಹಿಳೆಯರಿದ್ದಾರೆ ಎಂಬ ಅರಿವೇ ಆಗಲಿಲ್ಲ. ಜನಜಂಗುಳಿ ಮಧ್ಯೆ ತುಂಬಾ ವಿಶೇಷವಾದದ್ದು ಸಂಭವಿಸದೇ ಇದ್ದರೆ ಮನುಷ್ಯ ಅದರತ್ತ ಗಮನಹರಿಸುವುದೇ ಇಲ್ಲ ಎಂಬುದೇ ಇನ್ವಿಸಿಬಲ್ ಗೋರಿಲ್ಲಾ ಥಿಯರಿ ಫಾರ್ಮುಲಾ.
ಅದರಂತೆ ಪ್ರತಿಭಟನಾಕಾರರು ತಮ್ಮ ಮಧ್ಯೆಯೇ ಮಹಿಳೆಯರು ಇರುವುದನ್ನು ಗಮನಿಸಲಿಲ್ಲ. ಅಲ್ಲದಾಏ ಈ ಇಬ್ಬರೂ ಮಹಿಳೆಯರೂ ಕೂಡ ಪ್ರತಿಭಟನಾಕಾರರ ಜೊತೆಯೇ ಹೆಜ್ಜೆ ಹಾಕಿ ನಂತರ ಅವರಿಂದ ಯಾರಿಗೂ ಕಾಣದ ಹಾಗೆ ಬೇರ್ಪಟ್ಟು ದೇವಾಲಯ ಪ್ರವೇಶಿಸಿದ್ದಾರೆ.
ಶಬರಿಮಲೆಯಲ್ಲಿ ಇತಿಹಾಸ: ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು!
ಶಬರಿಮಲೆಗೆ ರಾತ್ರೋ ರಾತ್ರಿ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ವಿವರ
ಶಬರಿಮಲೆಗೆ ಇಬ್ಬರು ಮಹಿಳಾ ಪ್ರವೇಶದ ಹಿಂದಿದೆಯಾ ಹುನ್ನಾರ ..?
ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ
ಬಿಂದು, ಕನಕದುರ್ಗಾಗೆ ಇದೆ ವಿರಾಜಪೇಟೆ ‘ಸೀತೆ’ ಲಿಂಕ್... ವಿಡಿಯೋ ಸಾಕ್ಷ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.