
ಬೆಂಗಳೂರು, [ಜ.05]: ರಾಕಿಂಗ್ ಸ್ಟಾರ್ ಯಶ್ ಮನೆ ಮೇಲಿ ಐಟಿ ದಾಳಿ ಅಂತ್ಯವಾಗಿದ್ದು, ಒಟ್ಟು 8 ಅಧಿಕಾರಿಗಳು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಯಶ್ ನಿವಾಸದಿಂದ ನಿರ್ಗಮಿಸಿದ್ದಾರೆ.
ಬರೋಬ್ಬರಿ 3 ದಿನಗಳ ಕಾಲ ಶೋಧ ನಡೆಸಿದ್ದ ಐಟಿ ಅಧಿಕಾರಿಗಳು, ಮೊದಲ ತಂಡದ ನಾಲ್ವರು ಅಧಿಕಾರಿಗಳು ಎರಡು ಬ್ಯಾಗ್, 1 ಸೂಟ್ ಕೇಸ್ ಹಾಗೂ ಲಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ.
ಯಶ್ ಮನೆಯಲ್ಲಿಯೇ ಐಟಿ ಅಧಿಕಾರಿಗಳು : ಮುಂದೇನು..?
ಇನ್ನು 2ನೇ ತಂಡದಲ್ಲಿದ್ದ ಇನ್ನುಳಿದ ನಾಲ್ವರು ತಮ್ಮ ಕೈಯಲ್ಲಿ ತಲಾ ಒಂದೊಂದು ಬ್ಯಾಗ್ ಹಿಡಿದುಕೊಂಡು ಯಶ್ ಮನೆಯಿಂದ ನಿರ್ಗಮಿಸಿದ್ದಾರೆ.
ಸೂಟ್ ಕೇಸ್ ನಲ್ಲಿ ಚಿನ್ನ, ಬೆಳ್ಳಿ, ಬ್ಯಾಂಕ್ ಡಿಟೇಲ್ಸ್, ಪೆನ್ ಡ್ರೈವ್ ಆರ್ಡ್ ಡಿಸ್ಕ್ ಚರಾಸ್ತಿ, ಸ್ಥಿರಾಸ್ಥಿ ಪತ್ರಗಳು, ಸಿನಿಮಾಗೆ ಸಂಬಂಧಿಸಿದ ಸಂಭಾವನೆಯ ಡಿಟೈಲ್ಸ್ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಗುರುವಾರ ಬೆಳಗ್ಗೆ ಯಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದಾದ ಕೆಲ ಹೊತ್ತಿನಲ್ಲಿ ಯಶ್ ಮನೆ ಎರಡು ನೋಟ್ ಕೌಂಟಿಂಗ್ ಯಂತ್ರ ತರಿಸಿಕೊಂಡಿರುವುದು ನೋಡಿದ್ರೆ ಕಂತೆ ಕಂತೆ ಹಣ ಸಿಕ್ಕಿರುವ ಸಾಧ್ಯತೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.