ಈರುಳ್ಳಿ ಜೊತೆ ಸಿಲಿಂಡರ್ ಬೆಲೆ ಹೆಚ್ಚಳ, ಸ್ಟಾರ್ ನಟನ ಜೊತೆ ರಶ್ಮಿಕಾ ನಟಿಸಲ್ಲ; ಡಿ.3ರ ಟಾಪ್ 10 ಸುದ್ದಿ!

Published : Dec 03, 2019, 05:07 PM ISTUpdated : Dec 03, 2019, 06:39 PM IST
ಈರುಳ್ಳಿ ಜೊತೆ ಸಿಲಿಂಡರ್ ಬೆಲೆ ಹೆಚ್ಚಳ, ಸ್ಟಾರ್ ನಟನ ಜೊತೆ ರಶ್ಮಿಕಾ ನಟಿಸಲ್ಲ; ಡಿ.3ರ ಟಾಪ್ 10 ಸುದ್ದಿ!

ಸಾರಾಂಶ

ಒಂದೆಡೆ ರಾಜ್ಯದ ಉಪಚುನಾವಣೆ ಕಾವು ಏರುತ್ತಿದೆ. ಇತ್ತ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ, ಇತ್ತ ಸಿಲಿಂಡರ್ ಬೆಲೆ ಹೆಚ್ಚಳದ ಶಾಕ್ ಜನರಿಗೆ ಮತ್ತಷ್ಟು ತಲೆನೋವು ತಂದಿದೆ. ಬಾಬರಿ ಮಸೀದಿ ಪರ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣ ವಕಾಲತ್ತಿನಿಂದ ವಜಾಗೊಳಿಸಲಾಗಿದೆ. ಟಾಲಿವುಡ್ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ನಟನ ಜೊತೆ ನಟಿಸಲು ನಿರಾಕರಿಸಿದ್ದಾರೆ. ಕಿಚ್ಚ ಸುದೀಪ್ ಜಾವಾ ಬೈಕ್ ರೈಡ್, ಮೋದಿ ಅಭಿಮಾನಿಯ ವಿಶೇಷ ಬೇಡಿಕೆ ಸೇರಿದಂತೆ ಡಿಸೆಂಬರ್ 3ರ ಟಾಪ್ 10 ಸುದ್ದಿ ಇಲ್ಲಿವೆ.

1) ಮೋದಿಯಿಂದ ಮಗಳಿಗೆ ಸಚಿವ ಸ್ಥಾನದ ಆಮೀಷ: ಒಲ್ಲೆ ಎನ್ನಲು ಪವಾರ್ ತೆಗೆದುಕೊಂಡಿದ್ದು ಒಂದೇ ನಿಮಿಷ

ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದರೆ, ಕೇಂದ್ರದಲ್ಲಿ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಪ್ರಧಾನಿ ಮೋದಿ ಆಮಿಷವೊಡ್ಡಿದ್ದರು ಎಂದು ಖುದ್ದು ಶರದ್ ಪವಾರ್ ಹೇಳಿದ್ದಾರೆ.

2) ಕಸ್ಟಮರ್‌ ಕೇರ್‌ಗೆ 24 ಸಾವಿರ ಕರೆ ಮಾಡಿದ ವೃದ್ಧ: ಮುಂದೇನಾಯ್ತು ನೀವೇ ನೋಡಿ

ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿದ್ರೆ ದರ ಕಡಿತಗೊಳ್ಳುವುದಿಲ್ಲ. ದೂರು ಹಾಗೂ ಸಲಹೆ ನೀಡಲು ಕಂಪನಿಗಳು ಸಾಮಾನ್ಯವಾಗಿ ಗ್ರಾಹಕರಿಗೆ ಟೋಲ್ ಫ್ರೀ ನಂಬರ್ ಸೌಲಭ್ಯ ನೀಡುತ್ತದೆ. ಆದರೀಗ ಈ ಸೌಲಭ್ಯ ಟೆಲಿಕಾಂ ಕಂಪನಿಯೊಂದಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. 71 ವರ್ಷದ ವೃದ್ಧನೊಬ್ಬ ದೂರು ನೀಡಲು ಈ ಟೆಲಿಕಾಂ ಕಂಪನಿಗೆ 24 ಸಾವಿರ ಬಾರಿ ಕರೆ ಮಾಡಿದ್ದಾರೆ.

3) ರಾಜೀವ್ ಧವನ್ ವಜಾಗೊಳಿಸಿದ ಜಮೈತ್: ನಾನ್ಸೆನ್ಸ್ ಎಂದ ವಕೀಲ!

ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಬರಿ ಮಸೀದಿ ಪರ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣ ವಕಾಲತ್ತಿನಿಂದ ವಜಾಗೊಳಿಸಲಾಗಿದೆ. ಪ್ರಕರಣದ ವಕಾಲತ್ತಿನಿಂದ ರಾಜೀವ್ ಧವನ್ ಅವರನ್ನು ವಜಾಗೊಳಿಸಿ ಜಮೈತ್ ಉಮೆಲಾ-ಇ-ಹಿಂದ್ ಆದೇಶ ನೀಡಿದೆ.

4) ರಾಜನಾಥ್ ಕಾರು ತಡೆದ ಮೋದಿ ಅಭಿಮಾನಿ ಮಾಡಿದ್ದೇನು ನೋಡಿ!

ಪ್ರಧಾನಿ ಮೋದಿ ಭೇಟಿ ಮಾಡಿಸುವಂತೆ ಒತ್ತಾಯಿಸಿ ವ್ಯಕ್ತಿಯೋರ್ವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರು ಅಡ್ಡಗಟ್ಟಿದ ಘಟನೆ ನಡೆದಿದೆ. ತಾನು ಮೋದಿ ಅವರ ಅಭಿಮಾನಿಯಾಗಿದ್ದು ಅವರನ್ನು ಭೇಟಿ ಮಾಡಿಸುವಂತೆ ವ್ಯಕ್ತಿ ರಾಜನಾಥ್ ಸಿಂಗ್‌ಗೆ ದಂಬಾಲು ಬಿದ್ದಿದ್ದಾನೆ.

5) ಹೊಸ ಬದುಕಿಗೆ ಕಾಲಿಟ್ಟ ಮನೀಶ್ ಪಾಂಡೆಗೆ ಶುಭಕೋರಿದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಬಹುಕಾಲದ ಗೆಳತಿ, ನಟಿ ಆಶ್ರಿತಾ ಶೆಟ್ಟಿ ಮದುವೆಯಾಗಿದ್ದಾರೆ. ಡಿಸೆಂಬರ್ 2 ರಂದು ಮುಂಬೈನಲ್ಲಿ ವಿವಾಹವಾದ ಮನೀಶ್ ಪಾಂಡೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭಹಾರೈಸಿದ್ದಾರೆ. 

6) ಸ್ಟಾರ್ ನಟನ ಜೊತೆ ಆ್ಯಕ್ಟ್ ಮಾಡಲು No ಎಂದ ರಶ್ಮಿಕಾ; ವಿಜಯ್ ಬಿಟ್ಟು ಬರೋದೇ ಇಲ್ವಾ?.

ಕೊಡಗಿನ ಚೆಲುವೆ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಮೋಸ್ಟ್ ಡಿಮ್ಯಾಂಡಬಲ್ ನಟಿ.  ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದು ಸ್ಯಾಂಡಲ್‌ವುಡ್ ಆದರೂ ಬ್ಯುಸಿ ಆಗಿರುವುದು ಮಾತ್ರ ಟಾಲಿವುಡ್‌ನಲ್ಲಿ. ಆದರೆ ಸ್ಟಾರ್ ನಟನೊಬ್ಬನ ಜೊತೆ ಆ್ಯಕ್ಟ್ ಮಾಡಲು ಒಲ್ಲೆ ಎಂದಿದ್ದಾರೆ 

7) ಕಾರು ಬಿಟ್ಟು ಜಾವಾ ಬೈಕ್ ಏರಿದ ಕಿಚ್ಚ ಸುದೀಪ್!

ದಬಾಂಗ್ -3 ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ ಕಿಚ್ಚ ಸುದೀಪ್. ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದು ಈ ಟೈಮಲ್ಲಿ ಸುದೀಪ್ ಜಾವಾ ಬೈಕ್ ಏರಿ ಪೋಸ್ ಕೊಟ್ಟಿದ್ದಾರೆ. 

8) ಕೊನೆಗೂ ಪತ್ತೆಯಾಯ್ತು ವಿಕ್ರಮ್ ಲ್ಯಾಂಡರ್: ಫೋಟೋ ಬಿಡುಗಡೆಗೊಳಿಸಿದ ನಾಸಾ!

ವಿಕ್ರಮ್ ಲ್ಯಾಂಡರ್ ಪತನವಾಗಿದ್ದ ಸ್ಥಳ ಪತ್ತೆ ಹಚ್ಚಿದ ನಾಸಾ| ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಅವಶೇಷಗಳು ಪತ್ತೆ| ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ| ಪತನಗೊಂಡ ಸ್ಥಳದ ಚಿತ್ರ ಸೆರೆಹಿಡಿದ ನಾಸಾದ ಲೂನಾರ್ ಆರ್ಬಿಟರ್

9) ಈರುಳ್ಳಿ ತರಂಗಿಲ್ಲ, ಬೇಯಿಸಂಗಿಲ್ಲ: ಸಿಲಿಂಡರ್ ಬೆಲೆ ಏರಿದೆಯಲ್ಲ!.

ಬೆಲೆ ಏರಿಕೆಯ ಗುಮ್ಮ ಜನಸಾಮಾನ್ಯರನ್ನು ನಿರಂತರವಾಗಿ ಕಾಡುತ್ತಿದ್ದು, ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಗ್ರಾಹಕರಿಗೆ ಇದೀಗ ಎಲ್‌ಪಿಜಿ ದರ ಏರಿಕೆಯ ಬಿಸಿ ತಟ್ಟಿದೆ.

10) ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!

ಹೆಲ್ಮೆಟ್ ಹಾಕದ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಹಿಡಿದು ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಸವಾರ ತನ್ನ ಬೈಕನ್ನೇ ಪುಡಿ ಮಾಡಲು ಯತ್ನಿಸಿದ್ದಾನೆ. ಈ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!