ಡಿಕೆಶಿಗೆ ದೀಪಾವಳಿ ಧಮಾಕ, ಚಿನ್ನದ ಬೆಲೆ ಕುಸಿತ; ಅ.23ರ ಟಾಪ್ 10 ಸುದ್ದಿ!

By Web DeskFirst Published Oct 23, 2019, 4:30 PM IST
Highlights

ಹವಾಲಾ ಹಣ ಪ್ರಕರಣದಲ್ಲಿ ಜೈಲು ಸೇರಿದ  ಕಾಂಗ್ರೆಸ್ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್‌ಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಒಂದು ಕಾರಣ ಮಂದಿಟ್ಟಕೊಂಡು ಕೋರ್ಟ್ ಬೇಲ್ ನೀಡಿದೆ. ದೀಪಾವಳಿ ಹಬ್ಬಕ್ಕೆ ಕೆಲ ದಿನಗಳ ಮೊದಲು ಚಿನ್ನದ ಬೆಲೆ ಇಳಿಕೆಯಾಗಿದೆ. ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ, ಬಿಗ್‌ಬಾಸ್ ಮನೆಯಲ್ಲಿ ಸ್ಯಾಂಡಲ್‌ವುಡ್ ಕರಾಳ ಮುಖ ಅನಾವರಣ ಸೇರಿದಂತೆ ಅ.23ರ ಟಾಪ್ 10 ಸುದ್ದಿ ಇಲ್ಲಿವೆ.

1) ಡಿಕೆಶಿಗೆ ಬಿಗ್ ರಿಲೀಫ್: ಕೊನೆಗೂ ತಿಹಾರ್ ಜೈಲಿನಿಂದ ಹೊರಕ್ಕೆ!

ಹವಾಲಾ ಹಣ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಇಂದು (ಬುಧವಾರ) ದೆಹಲಿ ಹೈಕೋರ್ಟ್‌ ಡಿಕೆ ಶಿವಕುಮಾರ್‌ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.  ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್​​ಗೆ ಜಾಮೀನು ಮಂಜೂರು ಮಾಡಿ ದೆಹಲಿ ಹೈಕೋರ್ಟ್​ ಆದೇಶ ಹೊರಡಿಸಿದೆ. 

2) ಈ ಒಂದೇ ಒಂದು ಕಾರಣಕ್ಕೆ ಡಿಕೆಶಿಗೆ ಜಾಮೀನು ಸಿಕ್ಕಿದ್ದು: ಏನದು?

ಕಾಂಗ್ರೆಸ್‌ ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ಕೊನೆಗೂ ಷರತ್ತು ಬದ್ಧ ಜಾಮೀನು ಸಿಕ್ಕಿದೆ.  ಸೆಪ್ಟಂಬರ್‌ 4ರಿಂದಲೂ ತಿಹಾರ್‌ ಜೈಲಿನಲ್ಲಿ ಬಂಧಿಯಾಗಿದ್ದ ಡಿಕೆಶಿಗೆ ಮುಕ್ತಿ ಸಿಕ್ಕಿದೆ. ಆದ್ರೆ ಕೋರ್ಟ್‌ ಡಿಕೆಶಿಗೆ ಜಾಮೀನು ನೀಡಿದ್ದು ಒಂದೇ ಒಂದು ಕಾರಣಕ್ಕೆ. 


3) ನನ್ನ ಮೇಲೆ ಐಟಿ ರೇಡ್‌ ಆದರೆ ಬಿಎಸ್‌ವೈ ಆಸ್ತಿ ದಾಖಲೆ ಸಿಗುತ್ತೆ!

ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐನವರು ನನ್ನ ಮನೆಗೆ ಬರಲಿ ಅಂತಾ ಕಾಯ್ತಾ ಇದ್ದೀನಿ. ಅವರು ಬಂದರೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೊಂದಿರುವ ಸಾವಿರಾರು ಕೋಟಿ ರುಪಾಯಿ ಮೌಲ್ಯದ ಆಸ್ತಿ-ಪಾಸ್ತಿಗಳ ಕುರಿತು ನನ್ನಲ್ಲಿರುವ ದಾಖಲೆ ಪ್ರದರ್ಶಿಸುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.


4) ಭೇಷ್ ಬಾಲಕ, ಅಮೆಜಾನ್, ಫ್ಲಿಪ್ ಕಾರ್ಟ್‌ಗೆ ಎಂಥ ಏಟು ಕೊಟ್ಯಪ್ಪಾ!

ಆನ್ ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ಗೆ 16ರ ಫೋರನೊಬ್ಬ ಸರಿಯಾದ ಸವಾಲನ್ನೇ ಹಾಕಿದ್ದಾನೆ. ಇದು ಈ ಎರಡು ಮಾರಾಟ ತಾಣಗಳಿಗೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ. ಆನ್ ಲೈನ್ ಎಲ್ಲ ಮಾರಾಟ ತಾಣಗಳಿಗೂ ಬಾಲಕನ ಸವಾಳು ಅನ್ವಯವಾಗುತ್ತದೆ.

5) BCCI ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ!

ಬಿಸಿಸಿಐ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂಬೈನ ಬಿಸಿಸಿಐ ಕಚೇರಿಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗಂಗೂಲಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಇದೀಗ ಸೌರವ್ ಗಂಗೂಲಿ ಬಿಸಿಸಿಐನ 39ನೇ ಅಧ್ಯಕ್ಷರಾಗಿ ಅಧೀಕೃತವಾಗಿ ನೇಮಕಗೊಂಡಿದ್ದಾರೆ.

6) ಸಿದ್ದು ನೋಡಲು ಬಂದ 99ರ ಅಜ್ಜಿ; ಮಾಜಿ ಸಿಎಂ ಪ್ರತಿಕ್ರಿಯೆ ನೋಡಿ

ಸಿದ್ದರಾಮಯ್ಯ ಅಂದ್ರೆ ಜನಕ್ಕೆ, ವಿಶೇಷವಾಗಿ ಮಹಿಳೆಯರಿಗೆ ಅದೆನೋ ವಿಶೇಷ ಅಕ್ಕರೆ. ಸಿದ್ದರಾಮಯ್ಯ ಕೂಡಾ ಹಾಗೆನೇ. ಜನ ಸಾಮಾನ್ಯರೊಂದಿಗೆ ಬೇಗ ಬೆರೆಯುತ್ತಾರೆ. ಬಾಗಲಕೋಟೆ ಪ್ರವಾಸದಲ್ಲಿರೋ ಸಿದ್ದರಾಮಯ್ಯಗೆ ಇವತ್ತು ಭೇಟಿಯಾಗಲು ವಿಶೇಷ ಅತಿಥಿಯೊಬ್ಬರು ಬಂದಿದ್ರು. ಅದು ಮತ್ಯಾರು ಅಲ್ಲ, 99 ವರ್ಷ ಪ್ರಾಯದ ಅಜ್ಜಿ!

7) BB7 ಮನೆಯಲ್ಲಿ ಕನ್ನಡ ಚಿತ್ರರಂಗದ ಇನ್ನೊಂದು ಮುಖ ರಿವೀಲ್ ಮಾಡಿದ ಜೈ ಜಗದೀಶ್!

ಸೆಲಬ್ರಿಟಿಗಳ ರೋಚಕ ಕಥೆಗೆ ಸಾಕ್ಷಿಯಾಗುತ್ತಿದೆ ಬಿಗ್ ಬಾಸ್ ಮನೆ. ಅವರ ಜೀವನ ಕಥೆಗಳು, ವೃತ್ತಿ ಜೀವನದಲ್ಲಿ ಮರೆಯಲಾಗದ ಘಟನೆಗಳು, ಅನುಭವಿಸಿದ ಕಷ್ಟಗಳು ಹೀಗೆ ಎಲ್ಲವನ್ನು ಮನೆಯ ಇತರ ಸದಸ್ಯರ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಮನೆಯ ಹಿರಿಯ ಸದಸ್ಯ, ಹಿರಿಯ ಕಲಾವಿದ ಜೈ ಜಗದೀಶ್ ಕನ್ನಡ ಚಿತ್ರರಂಗದ ಇನ್ನೊಂದು ಮುಖ ರಿವೀಲ್ ಮಾಡಿದ್ದಾರೆ.

8) ಕನ್ನಡ ಮೇಷ್ಟ್ರು ಕಾಳಿದಾಸ ಚಿತ್ರದಲ್ಲಿ ಜಗ್ಗೇಶ್ ಜತೆಗೆ 21 ನಟಿಯರು!

ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಪ್ರೇಕ್ಷಕರನ್ನು ಮುಟ್ಟಲು ಸ್ಪೆಷಲ್ ಸಾಂಗ್‌ವೊಂದನ್ನು ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದು, ಅದರಲ್ಲಿ ಕನ್ನಡದ 21 ಸ್ಟಾರ್ ನಟಿಯರನ್ನೇ ತೋರಿಸಲು ಮುಂದಾಗಿರುವುದು ವಿಶೇಷ.

9) ಚಿನ್ನದ ದರದಲ್ಲಿ ಕುಸಿತ: ದೀಪಾವಳಿ ಖರೀದಿಗೆ ಇರಲಿ ಧಾವಂತ!

ಇಂದಿನ ಮಲ್ಟಿ ಕಮೋಡಿಟಿ ಎಕ್ಸಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ ಶೇ. 0.11ರಷ್ಟು ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ ಇದೀಗ 37,850 ರೂ. ಆಗಿದೆ. ಅದರಂತೆ ಬೆಳ್ಳಿ ಬೆಲೆಯಲ್ಲಿ ಶೇ.0.01ರಷ್ಟು ಕಡಿಮೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ಇದೀಗ 45,387 ರೂ.ಆಗಿದೆ.

10) ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

20 ವರ್ಷದ ಹಳೇ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ 70 ವರ್ಷದ ತಾಯಿ ಕೂರಿಸಿಕೊಂಡು ದೇಶ ಸುತ್ತಾಡಿಸಿದ ರೋಚಕ ಕತೆ ಇದೀಗ ಭಾರಿ ಸಂಚಲನ ಮೂಡಿಸಿದೆ. ಮೈಸೂರಿಗನ ಈ ಸಾಹಸಕ್ಕೆ ಇದೀಗ ಮಹೀಂದ್ರ ಕಾರು ಮಾಲೀಕ ಫಿದಾ ಆಗಿದ್ದಾರೆ. ಇಷ್ಟೇ ಅಲ್ಲ ಭರ್ಜರಿ ಗಿಫ್ಟ್ ಕೂಡ ನೀಡುಲು ಮುಂದಾಗಿದ್ದಾರೆ.

click me!