ಜೈಲಿನಿಂದ ಹೊರಬರುತ್ತಿದ್ದಂತೆಯೇ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಮಹತ್ವದ ಹುದ್ದೆ..?

By Web DeskFirst Published Oct 23, 2019, 4:22 PM IST
Highlights

ಹವಾಲಾ ಹಣ ಪ್ರಕರಣದಲ್ಲಿ ತಿಹಾರ್‌ ಜೈಲಿನಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಕೋರ್ಟ್‌ ಜಾಮೀನು ಮುಂಜೂರು ಮಾಡುತ್ತಿದ್ದಂತೆಯೇ ಇತ್ತ ಹೈಕಮಾಂಡ್‌ ಡಿಕೆಶಿಗೆ ಮಹತ್ವದ ಹುದ್ದೆ ನೀಡಲು ತೀರ್ಮಾನಿಸಿದೆ.

ಬೆಂಗಳೂರು, (ಅ.23): ಡಿಕೆ ಶಿವಕುಮಾರ್‌ಗೆ ದೀಪಾವಳಿ ಡಬ್ಬಲ್ ಧಮಾಕ. ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾಮೀನು ಸಿಗುತ್ತಿದ್ದಂತೆಯೇ ಡಿಕೆಶಿಗೆ ಮಹತ್ವದ ಹುದ್ದೆ ನೀಡಲು ಕಾಂಗ್ರೆಸ್‌ ತೀರ್ಮಾನಿಸಿದೆ.

 ಡಿಕೆ ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ? ತೆರೆಮರೆಯಲ್ಲಿ ನಡೆದಿದೆ ಭಾರೀ ಕಸರತ್ತು!

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿಕಾಂಗ್ರೆಸ್‌ ಹೀನಾಯ ಸೋಲು ಕಂಡಿದ್ದರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ದಿನೇಶ್ ಗುಂಡೂರಾವ್‌ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು. 

ಆದ್ರೆ, ಅದೇ ವೇಳೆ ಡಿಕೆಶಿಗೆ ಇಡಿ ಕಂಟಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್‌ ಅವರ ರಾಜೀನಾಮೆಯನ್ನು ಕೇಳಿರಲಿಲ್ಲ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪ್ರಬಲವಾಗಿದೆ ರೇಸ್!

 ಇದೀಗ ಡಿಕೆ ಶಿವಕುಮಾರ್‌ ಅವರಿಗೆ ಜಾಮೀನು ಸಿಕ್ಕಿದ್ದರಿಂದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲಿದ್ದು, ಅಧ್ಯಕ್ಷ ಹೊಣೆಯನ್ನು ಡಿಕೆಶಿ ಹೆಗಲಿಗೆ ಹಾಕುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. 

ಡಿಕೆ ಶಿವಕುಮಾರ್‌ ಅವರು ಜೈಲಿನಿಂದ ಹೊರಬರುವುದನ್ನೇ ಕಾಂಗ್ರೆಸ್‌ ಹೈಕಮಾಂಡ್‌ ಕಾಯುತ್ತಿತ್ತೇನೋ. ಮತ್ತೊಂದೆಡೆ ಡಿಸೆಂಬರ್‌ನಲ್ಲಿ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಡಿಕೆಶಿ ಬೈ ಎಲೆಕ್ಷನ್‌ಗಳಲ್ಲಿ ನಾಯಕತ್ವ ವಹಿಸಿಕೊಂಡು ಯಶಸ್ವಿಯಾಗಿರುವುದು ಉದಾಹರಣಗಳಿವೆ.

ಡಿಕೆಶಿಗೆ ಬಿಗ್ ರಿಲೀಫ್: ಕೊನೆಗೂ ತಿಹಾರ್ ಜೈಲಿನಿಂದ ಹೊರಕ್ಕೆ

ಅಷ್ಟೇ ಅಲ್ಲದೇ ದಿನೇಶ್ ಗುಂಡೂರಾವ್‌ ಅವರನ್ನು ಬದಲಿಸಬೇಕೆಂದು ಹಲವು ದೂರುಗಳ ಸಹ ಕೇಳಿಬಂದಿವೆ. ಈ ಎಲ್ಲಾವುಗಳನ್ನು ಗಮನಿಸಿ ಹೈಕಮಾಂಡ್‌, ಡಿಕೆಶಿಗೆ ಕೆಪಿಸಿಸಿ ಹೊಣೆ ನೀಡಲು ಮುಂದಾಗಿದೆ.

ಒಟ್ಟಿನಲ್ಲಿ ಡಿಕೆಶಿಗೆ ಜಾಮೀನು ಸಿಕ್ಕಿದ್ದು, ಮುಂಬರುವ ಉಪ ಚುನಾವಣೆ ಮತ್ತಷ್ಟು ರಂಗೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

click me!