ಕರ್ನಾಟಕ ಹಾಗೂ ಕೇರಳದಲ್ಲಿ ಐಸಿಸ್ ಉಗ್ರರ ಕ್ಯಾಂಪ್ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.ಭಾರತದ ಮೇಲೆ ಜೈವಿಕಾಸ್ತ್ರ ಬಳಸಲು ಚೀನಾ ಪ್ಲಾನ್ ಮಾಡುತ್ತಿದ್ದು ಮತ್ತೊಂದು ವೈರಸ್ ಹರಡುವ ಸಾಧ್ಯತೆಳಿವೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್'ಗೂ ಕೊರೋನಾ ವಕ್ಕರಿಸಿದೆ. 51 ಸಾವಿರ ಗಟಿ ದಾಟಿದ ಚಿನ್ನದ ದರ, ನಟಿ ಸಾಯಿ ಪಲ್ಲವಿ ನಗುವಿನ ಸೀಕ್ರೆಟ್ ಸೇರಿದಂತೆ ಜುಲೈ 25ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ಕರ್ನಾಟಕ, ಕೇರಳದಲ್ಲಿ ಐಸಿಸ್ ಉಗ್ರರ ಸಂಖ್ಯೆ ಹೆಚ್ಚಳ; ದಾಳಿಗೆ ಅಲ್‌ಖೈದಾ ಸಂಚು!...
ಕೊರೋನಾ ಬಳಿಕ ಮಾರಣಾಂತಿಕ ವೈರಸ್ ಅಭಿವೃದ್ದಿ ಪಡಿಸುತ್ತಿದೆ ಚೀನಾ..!...
undefined
ಭಾರತ ಹಾಗೂ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಗುರಿಯಾಗಿಟ್ಟುಕೊಂಡು ಜೈವಿಕ ಯುದ್ಧದ ಸಾಮರ್ಥ್ಯ ಹೆಚ್ಚಳಕ್ಕೆ ಚೀನಾ ಮುಂದಾಗಿದೆ. ಭಾರತದ ಮೇಲೆ ಜೈವಿಕಾಸ್ತ್ರ ಬಳಸಲು ಚೀನಾ ಪ್ಲಾನ್ ಮಾಡುತ್ತಿದ್ದು, ತನ್ನ ಮಿತ್ರರಾಷ್ಟ್ರವಾದ ಪಾಕಿಸ್ತಾನದ ಜತೆ ಚೀನಾ ಕೈ ಜೋಡಿಸಿದೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್'ಗೂ ಕೊರೋನಾ ಪಾಸಿಟಿವ್!...
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಸ್ವತಃ ಶಿವರಾಜ್ ಸಿಂಗ್ ಚೌಹಾಣ್ ಅವರೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಸಾಯಿ ಪಲ್ಲವಿ ದಿನವೂ ನಗುತ್ತಾ ಎದ್ದೆಳಲು ಕಾರಣವೇ ಇದಂತೆ!...
ದಕ್ಷಿಣ ಭಾರತದ ಸುಂದರ ಚೆಲುವೆ, ನಟಿ ಸಾಯಿ ಪಲ್ಲವಿ ನಗು ಮುಖದಿಂದ ದಿನ ಪ್ರಾರಂಭಿಸುವುದಕ್ಕೆ ಕಾರಣವೇನೆಂಬುದನ್ನು ರಿವೀಲ್ ಮಾಡಿದ್ದಾರೆ....
ಚಿರು ಆತ್ಮದ ಜೊತೆ ಮಾತುಕತೆ; ವಿಡಿಯೋ ವೈರಲ್...
ಸುಶಾಂತ್ ಸಿಂಗ್ ಆತ್ಮದ ಜೊತೆಗಿನ ಮಾತುಕತೆ ವಿಡಿಯೋ ಬೆನ್ನಲ್ಲೇ ಚಿರಂಜೀವಿ ಸರ್ಜಾ ವಿಡಿಯೋವೊಂದು ವೈರಲ್ ಆಗಿದೆ. ಚಿರು ಆತ್ಮದ ಹೆಸರಲ್ಲೂ ಸಹ ವಿಡಿಯೋ ವೈರಲ್ ಆಗಿದೆ. ಸರ್ಜಾ ಫ್ಯಾಮಿಲಿಗೆ ಮಾತ್ರವಲ್ಲ, ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ. ಚಿರು ಆತ್ಮದ ಜೊತೆ 3.54 ನಿಮಿಷ ಮಾತಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಟ್ವಿಟ್ಟರ್ ಬಳಸೋಕೆ ನೀವು ದುಡ್ಡುಕಟ್ಟೋ ಕಾಲ ಬರ್ತಿದೆಯಾ?...
ಯಾವುದೇ ಆಗಲಿ ಒಮ್ಮೆ ಅಭ್ಯಾಸವಾಗಿಬಿಟ್ಟರೆ ಸಾಕು ಕೊನೆಗೆ ಆ ವಸ್ತು ಇಲ್ಲದಿದ್ದರೆ ಏನೋ ಒಂದು ರೀತಿ ಚಡಪಡಿಕೆ. ಅಷ್ಟರಮಟ್ಟಿಗೆ ನಾವು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿರುತ್ತೇವೆ. ಅದು ಉಚಿತವಾಗಿರಲಿ ಇಲ್ಲವೇ ದುಡ್ಡು ಕೊಟ್ಟು ಬಳಸುವುದಿರಲಿ. ಈಗ ಈ ಅಂಶದ ಲಾಭ ಪಡೆಯಲು ಹೆಸರಾಂತ ಟೆಕ್ ದೈತ್ಯ ಕಂಪನಿ ಟ್ವಿಟ್ಟರ್ ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ.
51 ಸಾವಿರ ಗಟಿ ದಾಟಿದ ಚಿನ್ನದ ದರ: ಬೆಳ್ಳಿ ಕೆ.ಜಿ.ಗೆ 60,000 ರು.!...
ದಿನೇ ದಿನೆ ಗಗನಮುಖಿ ಆಗುತ್ತಿರುವ ಚಿನ್ನದ ದರ ಮತ್ತೊಮ್ಮೆ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ. ಶುಕ್ರವಾರ ಮುಂಬೈ ಚಿನಿವಾರ ಪೇಟೆಯಲ್ಲಿ 99.9 ಶುದ್ಧತೆಯ 10 ಗ್ರಾಂ ಚಿನ್ನ 419 ರು. ಏರಿಕೆ ಆಗಿದ್ದು, 51,124 ರು. ಹಾಗೂ ಆಭರಣ ಚಿನ್ನ 421 ರು. ಏರಿಕೆ ಆಗಿದ್ದು, 50,919ರು.ಗೆ ತಲುಪಿದೆ. ಇದೇ ವೇಳೆ ಬೆಳ್ಳಿಯ ದರ ಕೆ.ಜಿ.ಗೆ 900 ರು. ಇಳಿಕೆ ಆಗಿದ್ದು, 59,885 ರು. ಆಗಿದೆ.
ಬಲೆಗೆ ಬಿತ್ತು ಬೃಹತ್ ಹಕ್ಕಿ ತೊರ್ಕೆ ಮೀನು..! ಇಲ್ಲಿವೆ ಫೋಟೋಸ್
ಅಪರೂಪದ ಬೃಹತ್ ಗಾತ್ರದ ತೊರ್ಕೆ ಮೀನು ಕಾರವಾರದಲ್ಲಿ ಬಲೆಗೆ ಬಿದ್ದಿದೆ. ಇತ್ತೀಚಿನ ವರ್ಷಗಳಲ್ಲಿ ಗಾತ್ರದ ತೊರ್ಕೆ ಮೀನು ಕಾರವಾರದಲ್ಲಿ ಸಿಕ್ಕಿರಲಿಲ್ಲ ಕಾರವಾರದ ಲೇಡೀಸ್ ಬೀಚ್ ಬಳಿ ಹಾಕಿದ್ದ ಏಂಡಿ ಬಲೆಗೆ ಬೃಹತ್ ಹಕ್ಕಿ ತೊರ್ಕೆ ಮೀನು ಬಿದ್ದಿದೆ.
ಸ್ಮಾರ್ಟ್‌ಫೋನ್ ಶಿಓಮಿ ಕಂಪನಿಯಿಂದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!
ಸ್ಮಾರ್ಟ್‌ಫೋನ್ ಯಶಸ್ಸಿನ ಬೆನ್ನಲ್ಲೇ ಹಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಶಿಓಮಿ(Xiaomi) ಚೀನಾ, ಭಾರತ ಸೇರಿದಂತೆ ಏಷ್ಯಾದಲ್ಲೇ ಜನಪ್ರಿಯವಾಗಿದೆ. ಇದೀಗ Xiaomi ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಮೊಬೈಲ್ ರೀತಿಯಲ್ಲೇ ಕಡಿಮೆ ಬೆಲೆಯ ಹಾಗೂ ಗರಿಷ್ಠ ಫೀಚರ್ಸ್ ಇರುವ ಸ್ಕೂಟರ್ ಇದಾಗಿದೆ.
ದಾರಿಯಲ್ಲಿ ಬೆತ್ತಲೆ ತಿರುಗಾಟ, ಮಾನ ಉಳಿಸಿತು ಮಾಸ್ಕ್!...
ಕೊರೋನಾ ವಕ್ಕರಿಸಿದ ಬಳಿಕ ಮಾಸ್ಕ್ ಕಡ್ಡಾಯ. ಇಲ್ಲೋರ್ವ ಯುವಕ ಮಾಸ್ಕ್ ಹೊರತು ಪಡಿಸಿ ಒಂದು ತುಂಡು ಬಟ್ಟೆಯನ್ನು ಧರಿಸಿದೆ ಶಾಂಪಿಂಗ್ ಸ್ಟ್ರೀಟ್‌ನಲ್ಲಿ ನಿರಾಯಾಸವಾಗಿ ತಿರುಗಾಡಿದ್ದಾನೆ. ಕುತೂಹಲ ಮೂಡಿಸಿದ ಯುವಕನ ಬೆತ್ತಲೆ ನಡಿಗೆ.