ಚಂಡಮಾರುತ ರಕ್ಷಣಾ ಕಾರ್ಯಚರಣೆ ಕೈಗೊಂಡವರಿಗೆ ಮೋದಿ ಸಲಾಂ ಹೇಳಿದ್ದಾರೆ. ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು ಹಾಕಲಾಗಿದೆ ಅನ್ನೋದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಧೋನಿ ಹೊಸ ಮನೆ ಖರೀದಿಸಿದ್ದಾರೆ. ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಟ್ಟಿಟರ್‌ನಲ್ಲಿ ಕನ್ನಡ ಸ್ಟಾರ್ ಟ್ರೆಂಡಿಂಗ್ ಸೇರಿದಂತೆ ಮೇ.30ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ತೌಕ್ಟೆ, ಯಾಸ್ ಅಬ್ಬರದ ಮಧ್ಯೆ ರಕ್ಷಣಾ ಕಾರ್ಯಾಚರಣೆ ಕೈಗೊಂಡವರಿಗೆ ಮೋದಿ ಸಲಾಂ!...
ಪ್ರಧಾನ ಮಂತ್ರಿ ನರೇಂದ್ರ ಮೋದಿ 77ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೇರಿ 2 ವರ್ಷ ಪೂರೈಸಿದ ಹಿನ್ನೆಲೆ ಈ ಬಾರಿಯ ಮನ್ ಕೀ ಬಾತ್ ಇನ್ನಷ್ಟು ಕುತೂಹಲ ಮೂಡಿಸಿದೆ.
ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!...
ಚೀನಾದ ವಿಜ್ಞಾನಿಗಳೇ ವುಹಾನ್ ಲ್ಯಾಬ್‌ನಲ್ಲಿ ಕೊರೋನಾ ವೈರಸ್ ನಿರ್ಮಿಸಿದ್ದಾರೆ. ಇದು ನೈಸರ್ಗಿಕವಾಗೇ ಹುಟ್ಟಿಕೊಂಡಿದೆ ಹುಟ್ಟಿದೆ ಎಂಬ ಸಂದೇಶ ಕೊಡಲು, ಯಾರಿಗೂ ಅನುಮಾನ ಬರಬಾರದೆಂದು ರಿವರ್ಸ್ ಇಂಜಿನಿಯರಿಂಗ್ ವರ್ಷನ್‌ನಿಂದ ಟ್ರ್ಯಾಕ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಚೀನಾದ ರೆಟ್ರೋ ಇಂಜಿನಿಯರಿಂಗ್‌ನ ಸಾಕ್ಷಿ ತಮ್ಮ ಬಳಿ ಇದೆ ಎಂದು ಇವರು ವಾದಿಸಿದ್ದಾರೆ.
ಹೊಸ ಮನೆ ಖರೀದಿಸಿದ ಎಂ.ಎಸ್.ಧೋನಿ; ಪುಣೆಗೆ ಶಿಫ್ಟ್ ಆಗ್ತಾರಾ ಮಾಜಿ ನಾಯಕ?...
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ರಾಂಚಿ ಹೊರವಲಯದಲ್ಲಿರುವ ಭವ್ಯ ಬಂಗಲೆ, ಫಾರ್ಮ್ ಹೌಸ್‌ನಲ್ಲಿ ಧೋನಿ ವಿಶ್ರಾಂತಿ ಜೀವನದಲ್ಲಿದ್ದಾರೆ. ಇದರ ನಡುವೆ ಧೋನಿ ಪುಣೆಯಲ್ಲಿ ಹೊ ಮನೆ ಖರೀದಿಸಿದ್ದಾರೆ.
ಟ್ಟಿಟರ್‌ನಲ್ಲಿ ಕನ್ನಡ ಸ್ಟಾರ್ ಟ್ರೆಂಡಿಂಗ್; ಯಾವ ಸ್ಟಾರ್‌ಗಿದೆ No.1 ಪಟ್ಟ!...
ಸೋಷಿಯಲ್ ಮೀಡಿಯಾ ಇತ್ತೀಚಿಗೆ ಸಖಕ್ಕೂ ಪ್ರಭಾವ ಬೀರುವುದರಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಕೆಲವು ಕನ್ನಡದ ನಟ-ನಟಿಯರು ಟ್ಟಿಟರ್‌ನಲ್ಲಿ ತಮ್ಮ ಕೆಲಸಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಕಿಚ್ಚ ಸುದೀಪ್ ಅಭಿಮಾನಿಗಳ ಮೆಸೇಜ್‌ಗೆ ಪ್ರತಿಕ್ರಿಯೆ ನೀಡುತ್ತಾರೆ, ಹಾಗೇ ಉಪೇಂದ್ರ ಕೊಡ ಕೋವಿಡ್19 ಸಮಯದಲ್ಲಿ ಮಾಡುತ್ತಿರುವ ಕೆಲಸಗಳ ಬಗ್ಗೆ ಹಂಚಿಕೊಳ್ಳುತ್ತಾರೆ. ಟ್ಟಿಟರ್‌ನಲ್ಲಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವವರು ಯಾರು ಗೊತ್ತಾ?
ಜೂನ್ 10ಕ್ಕೆ 1+ ನಾರ್ಡ್ ಸಿಇ 5G ಸ್ಮಾರ್ಟ್‌ಫೋನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?...
ಜನಪ್ರಿಯ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿ ಒನ್‌ಪ್ಲಸ್ ಮತ್ತೊಂದು ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಒನ್‌ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಹಲವು ದಿನಗಳಿಂದ ಸುದ್ದಿ ಇತ್ತು. ಈಗ ಕಂಪನಿಯೇ ಜೂನ್ 10ರಂದು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.
ಪೆಟ್ರೋಲ್ 100 ರೂ: ಶತಕ ದಾಟಿದ ಮೊದಲ ಮೆಟ್ರೋ ನಗರ ಮುಂಬೈ!...
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶನಿವಾರ ಮತ್ತೆ ಪೆಟ್ರೋಲ್‌ಗೆ 26 ಪೈಸೆ ಮತ್ತು ಡೀಸೆಲ್ ದರವನ್ನು 28 ಪೈಸೆಯಷ್ಟುಏರಿಕೆ ಮಾಡಿವೆ. ಇದರೊಂದಿಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಇದೇ ಮೊದಲ ಬಾರಿ ಪೆಟ್ರೋಲ್ ದರ 100 ರು. ದಾಟಿದೆ. ಪೆಟ್ರೋಲ್ ದರ ಶತಕ ಬಾರಿಸಿದ ದೇಶದ ಮೊದಲ ಮೆಟ್ರೋ ನಗರ ಮುಂಬೈ ಆಗಿದೆ.
ಡೊಮಿನಿಕಾ ಜೈಲಿನಲ್ಲಿ ವಂಚಕ ಚೋಕ್ಸಿ: ಕೈಗಳಲ್ಲಿ ಗಾಯ, ಫೋಟೋ ಬಹಿರಂಗ!...
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚಿಸಿ ಭಾರತದಿಂದ ತಲೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾದಲ್ಲಿ ಜೈಲಿನಲ್ಲಿರುವ ಚಿತ್ರ ಬಿಡುಗಡೆಯಾಗಿದೆ. ಸದ್ಯ ಚೋಕ್ಸಿಯನ್ನು ಭಾರತಕ್ಕೆ ವಿಚಾರಣೆಗೆ ಕಳಿಸುವಂತೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ. ಊದಿದ ಕಣ್ಣುಗಳು, ಕೈಗಳಿಗೆ ಗಾಯಗಳಾಗಿರುವ ಚೋಕ್ಸಿ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೇತುವೆ ಮೇಲಿನಿಂದ ಸೋಂಕಿತನ ಶವ ನದಿಗೆ ಎಸೆದ ಕುಟುಂಬಸ್ಥರು; ವಿಡಿಯೋ ವೈರಲ್!...
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಅಮಾನವೀಯ ಘಟನೆಗಳು ಹೆಚ್ಚಾಗುತ್ತಿದೆ. ಸೋಂಕಿತರ ಆರೈಕೆ, ಶವ ಸಂಸ್ಕಾರಕ್ಕೆ ದುಬಾರಿ ಹಣ, ಸಂಕಷ್ಟಕ್ಕೆ ಮಿಡಿಯದ ಜನ ಸೇರಿದಂತೆ ಹಲವು ಘಟನೆಗಳು ವರದಿಯಾಗಿವೆ. ಇದೀಗ ಕುಟುಂಬದ ಸದಸ್ಯನೋರ್ವನ ಶವವನ್ನು ಸೇತುವೆ ಮೇಲಿನಿಂದ ನದಿಗೆ ಎಸೆದ ಘಟನೆ ನಡೆದಿದೆ
ಆಟೋ ಚಾಲಕರಿಗೆ ವ್ಯಾಕ್ಸಿನೇಷನ್ ಅಭಿಯಾನ, 5 ಕೆಜಿ ಅಕ್ಕಿ ವಿತರಣೆ...
ದಕ್ಷಿಣ ಸಂಸದ ತೇಜಸ್ವಿ ಸೂರ್ಯರಿಂದ ಆಟೋ ಡ್ರೈವರ್‌ಗಳಿಗೆ ಉಚಿತ ವ್ಯಾಕ್ಸಿನೇಷನ್ ಅಭಿಯಾನ ನಡೆಯಿತು.
ಚೀನಾದಲ್ಲಿ ಮತ್ತೆ ಹರಡುತ್ತಿದೆ ಕೊರೋನಾ; ದಕ್ಷಿಣದ ನಗರ ಲಾಕ್‌ಡೌನ್!...
ಕೊರೋನಾ ನಿಯಂತ್ರಿಸಿದ್ದ ಚೀನಾದಲ್ಲಿ ಇದೀಗ ಮತ್ತೆ ಕೊರೋನಾ ಕಾಣಿಸಿಕೊಂಡಿದೆ. ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಪರಿಣಾಣ ದಕ್ಷಿಣ ಚೀನಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ.