ಚೀನಾ(ಮೇ.30): ಚೀನಾದಲ್ಲಿ ಅಬ್ಬರಿಸಿದ ಕೊರೋನಾ ಬಳಿಕ ಭಾರತ ಸೇರಿದಂತೆ ಇತರ ಎಲ್ಲಾ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿದೆ. ಆದರೆ ಚೀನಾ ಕೊರೋನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಇತರ ರಾಷ್ಟ್ರಗಳು ಕೊರೋನಾ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ. ಕೊರೋನಾ ನಿಯಂತ್ರಿಸಿದ್ದ ಚೀನಾದಲ್ಲಿ ಇದೀಗ ಮತ್ತೆ ಕೊರೋನಾ ಕಾಣಿಸಿಕೊಂಡಿದೆ. ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಪರಿಣಾಣ ದಕ್ಷಿಣ ಚೀನಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ.
ಕೊರೋನಾ ಚೀನಾ ಸೃಷ್ಟಿಎಂಬುದಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ, ಏನಿದರ ಅಸಲಿಯತ್ತು..?.
undefined
ದಕ್ಷಿಣ ಚೀನಾದ ಗೌಂಗ್‌ಝ್ಹೊ ನಗರ ಹಾಗೂ ಸುತ್ತ ಮತ್ತಲಿನ ಪ್ರದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಹಾಂಕ್ ಕಾಂಗ್ ಉತ್ತರ ಭಾಗದಲ್ಲಿರುವ ಗೌಂಗ್‌ಝ್ಹೊ ನಗರ ಉದ್ಯಮ ಹಾಗೂ ಕೈಗಾರಿಕೆಗಳಿಂದ ಜನಪ್ರಿಯವಾಗಿದೆ. 15 ಮಿಲಿಯನ್ ಜನಸಂಖ್ಯೆ ಹೊಂದಿರುವ ಈ ನಗರದಲ್ಲಿ ದಿಢೀರ್ 20 ಕೊರೋನಾ ಪ್ರಕರಣ ದಾಖಲಾಗಿದೆ. ಭಾರತದ ಪುಟ್ಟ ಗ್ರಾಮದಲ್ಲಿ ಇದಕ್ಕಿಂತ ಹೆಚ್ಚಿನ ಪ್ರಕರಣಗಳು ಸದ್ಯ ದಾಖಲಾಗುತ್ತಿದೆ. ಒಂದೇ ಒಂದು ಕೇಸ್ ಇಲ್ಲದ ನಗರದಲ್ಲಿ 20 ಕೇಸ್ ಕಾಣಿಸಿಕೊಂಡ ಬೆನ್ನಲ್ಲೇ ಸಂಪೂರ್ಣ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಲೌಕ್‌ಡೌನ್ ಮಾಡಿದೆ.
ಪ್ರತಿಯೊಬ್ಬರ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಇಷ್ಟೇ ಅಲ್ಲ ಪ್ರತಿ ಮನೆಗೂ ತೆರಳಿ ಆರೋಗ್ಯ ಅಧಿಕಾರಿಗಳು ಕೊರೋನಾ ಟೆಸ್ಟ್ ನಡೆಸುತ್ತಿದ್ದಾರೆ. ಸದ್ಯ ಪತ್ತೆಯಾಗಿರುವ ವೈರಸ್ ಅತೀ ವೇಗವಾಗಿ ಹರಡಲಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಲಾಕ್‌ಡೌನ್ ಮಾಡಲಾಗಿದೆ. ಜೊತೆಗೆ ಪ್ರತಿ ಮನೆಗೆ ಕೊರೋನಾ ಪರೀಕ್ಷೆ ಮಾಡಿ, ಪಾಸಿಟೀವ್ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು ಎಂದು ಗೌಂಗ್‌ಝ್ಹೊ ನಗರದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಚೀನಾ ಲ್ಯಾಬ್‌ನಿಂದ ಕೊರೋನ ಸ್ಫೋಟ; ಸಂಶೋಧಕರು ಆಸ್ಪತ್ರೆ ದಾಖಲಾಗಿದ್ದ ಮಾಹಿತಿ ಬಹಿರಂಗ!.
ಲಾಕ್‌ಡೌನ್ ಘೋಷಣೆ ಮಾಡಿದ ಮೊದಲ ದಿನ ನಗರದಲ್ಲಿ 7 ಲಕ್ಷ ಮಂದಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ. ಗೌಂಗ್‌ಝ್ಹೊ ನಗರಕ್ಕೆ ಸಂಪರ್ಕ ಹೊಂದಿರುವ ನಾಲ್ಕು ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಹೇರಲಾಗಿದೆ.