ಬಿಜೆಪಿ ಸರ್ಕಾರಕ್ಕೆ ಬೀಳಲಿದೆ ಬ್ರೇಕ್, ದರ್ಶನ್ ಲೈಫಲ್ಲಿ ಮತ್ತೊಂದು ಟ್ವಿಸ್ಟ್; ಇಲ್ಲಿವೆ ಸೆ.15ರ ಟಾಪ್ 10 ಸುದ್ದಿ!

By Web Desk  |  First Published Sep 15, 2019, 4:57 PM IST

ಮೈತ್ರಿ ಸರ್ಕಾರದ ಪತನದ ಬಳಿಕ ರಚನೆಯಾಗಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ  ಬಿಜೆಪಿ ಸರ್ಕಾರ ಆಯಸ್ಸು ಮುಗಿಯುತ್ತಿದೆ ಅನ್ನೋ ಸ್ಫೋಟಕ ಭವಿಷ್ಯ ಹೊರಬಿದ್ದಿದೆ. ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಅನ್ನೋ ಭವಿಷ್ಯ ಇದೀಗ ಹಲವು ತಿರುಗಳನ್ನು ಪಡೆಯಲಿದೆ. ರಾಜಕೀಯ ಜೊತೆಗೆ ಸ್ಯಾಂಡಲ್‌ವುಡ್ ಕೂಡ ಸದ್ದು ಮಾಡುತ್ತಿದೆ.  ಡಿ ಬಾಸ್ ದರ್ಶನ ಲೈಫಲ್ಲಿ ಮತ್ತೊಂದು ಟ್ವಿಸ್ಟ್, ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಟ್ರೋಲ್ ಸೇರಿದಂತೆ, ಸೆ.15ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ. 


1) ಯುದ್ಧದಲ್ಲಿ ನಾವು ಸೋಲ್ತೀವಿ: ಇಮ್ರಾನ್ ಹೇಳಿಕೆ ನಾವೂ ಮೆಚ್ತೀವಿ!

Latest Videos

undefined

 ಒಂದು ವೇಳೆ ಭಾರತ-ಪಾಕಿಸ್ತಾನ ನಡುವೆ ಯುದ್ಧವಾದರೆ ನಮಗೆ ಸೋಲಾಗಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸತ್ಯ ಒಪ್ಪಿಕೊಂಡಿದ್ದಾರೆ. ಅಲ್ ಜಜೀರಾ ಸುದ್ದಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಇಮ್ರಾನ್ ಖಾನ್, ಭಾರತದೊಂದಿಗಿನ ಯುದ್ಧದಲ್ಲಿ ನಮಗೆ ಸೋಲಾದರೂ ಅದರ ಘೋರ ಪರಿಣಾಮ ಮಾತ್ರ ಎರಡೂ ರಾಷ್ಟ್ರಗಳು ಉಣ್ಣಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

2) ಆರು ತಿಂಗಳಲ್ಲಿ ರಾಜ್ಯದಲ್ಲಿ ಹೊಸ ಆಡಳಿತ : ಭವಿಷ್ಯ

ರಾಜ್ಯದಲ್ಲಿ ಮುಂದಿನ ಆರು ತಿಂಗಳಲ್ಲಿ ರಾಜ್ಯಪಾಲರ ಆಡಳಿತ ಎದುರಾಗಲಿದ್ದು, ನಂತರ ಚುನಾವಣೆ ನಡೆಯಲಿದೆ ಎಂದು ಸ್ವಾತಂತ್ರ್ಯ ಹೋರಾಟ ಡಾ.ಎಚ್‌.ಎಸ್‌ ದೊರೆಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ.


3) ಡಿಕೆಶಿಗೆ ಆರೋಗ್ಯದಲ್ಲಿ ಏರುಪೇರು: ದೆಹಲಿ ಆಸ್ಪತ್ರೆಗೆ ದಾಖಲು!

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ಮಧ್ಯಾಹ್ನ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ರಾಮ ಮನೋಹರ ಲೋಹಿಯಾ ಅಸ್ಪತ್ರೆಗೆ ದಾಖಲಾಗಿದ್ದಾರೆ.


4)  7 ಬಾಲ್‌ಗೆ 7 ಸಿಕ್ಸರ್: ಇತಿಹಾಸ ಬರೆದ ಆಫ್ಘನ್ ಕ್ರಿಕೆಟರ್ಸ್...!


ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಆ್ಯಷಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಮತ್ತೊಂದು ಶತಕ ಸಿಡಿಸಬಹುದಾ..? ವಿರಾಟ್ ಕೊಹ್ಲಿ ಪಡೆ ತವರಿನಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಟಿ20 ಕ್ರಿಕೆಟ್ ಸೋಲಿಸಬಹುದಾ ಎಂದು ಯೋಚಿಸುತ್ತಿದ್ದಾರೆ. ಹೀಗಿರುವಾಗಲೇ ಆಫ್ಘಾನಿಸ್ತಾನದ ಕ್ರಿಕೆಟಿಗರು ಸದ್ದಿಲ್ಲದೇ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

5) ಹೊಸ ಜರ್ಸಿಯಲ್ಲಿ ಹಾರ್ದಿಕ್ ಪಾಂಡ್ಯ ಟ್ರೋಲ್!

ಧರ್ಮಶಾಲ(ಸೆ.15): ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಮರಳಿದ್ದಾರೆ. ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ  ಮೊದಲು ಹಾರ್ದಿಕ್ ಪಾಂಡ್ಯ ಟ್ರೋಲ್ ಆಗಿದ್ದಾರೆ. ಟೀಂ ಇಂಡಿಯಾದ ನೂತನ ಜರ್ಸಿಯಲ್ಲಿ ಕಾಣಿಸಿಕೊಂಡ ಪಾಂಡ್ಯ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

6) ಸ್ಯಾಂಡಲ್ ವುಡ್ ಸ್ಟಾರ್ ನಟನ ಲೈಫಲ್ಲಿ ಹೊಸ ಟ್ವಿಸ್ಟ್!

ಕುರುಕ್ಷೇತ್ರದ ಧುರ್ಯೋಧನನಾಗಿ ಮಿಂಚಿದ್ದ ದರ್ಶನ್ ಇದೀಗ ರಾಬರ್ಟ್ ಆಗಲಿದ್ದಾರೆ. ರಾಬರ್ಟ್ ದರ್ಶನ್ ನಟನೆಯ ಅತೀ ದೊಡ್ಡ ಹಾಗೂ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ರಾಬರ್ಟ್ ಚಿತ್ರಕ್ಕಾಗಿ ದಾಸ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್ ಶುರುವಾಗಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. 

7) ಗೌರಿಗದ್ದೆ ವಿನಯ್ ಗುರೂಜಿ ಆಶ್ರಮದಲ್ಲಿ ಅಚ್ಚರಿ ಘಟನೆ!

ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ವಿನಯ್ ಗುರೂಜಿ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ನಡೆಯುತ್ತಿತ್ತು. ಮಂಗಳಾರತಿ ವೇಳೆ ದೇವರ ಮೂರ್ತಿಯಿಂದ ನಾಮ ಕೆಳಗೆ ಬೀಳುತ್ತದೆ. ಅದನ್ನು ಸಿಎಂ ಯಡಿಯೂರಪ್ಪಗೆ ನೀಡಿ ಏನೋ ಚರ್ಚೆ ಮಾಡುತ್ತಾರೆ. ಇದು ಬಿಎಸ್ ವೈಗೆ ಶುಭ ಶಕುನವೋ? ಅಪಶಕುನವೋ? ಕುತೂಹಲ ಮೂಡಿಸಿದೆ. 

8) ಕುಡುಕರನ್ನು ಮನೆಗೆ ಒಯ್ಯಲು ಓಲಾ ರೀತಿ ಟ್ಯಾಕ್ಸಿ!

ಬಾರ್‌ನ ಮಬ್ಬುಗತ್ತಲಿನ ‘ಗುಂಡು ಮೇಜಿನ ಸಭೆ’ಯಲ್ಲಿ ಪಾನಮತ್ತರಾಗಿ ಹೊರಗೆ ಬಂದರೆ, ಪೊಲೀಸರ ‘ಡ್ರಿಂಕ್‌ ಆ್ಯಂಡ್‌ ಡ್ರೈವ್‌’ ದಂಡ ತಪ್ಪಿಸೋದು ಹೇಗಪ್ಪಾ ಎಂಬ ಚಿಂತೆಯೇ? ಇನ್ನು ಮುಂದೆ ಈ ಚಿಂತೆಯೇ ಬೇಕಿಲ್ಲ. ಕೇವಲ ಒಂದು ಕರೆ ಮಾಡಿ. ನೀವು ಹೇಳಿದ ಸಮಯಕ್ಕೆ ವಾಹನ ಬಂದು ಸುರಕ್ಷಿತವಾಗಿ ನಿಮ್ಮನ್ನು ಮನೆ ಸೇರಿಸುತ್ತದೆ!

9) ಇಲ್ಲಿ ಮನೆ ತಗೋಬೇಕಂದ್ರೆ ಚದರ ಅಡಿಗೆ 56,000 ರೂ ಕೊಡ್ಬೇಕು!

ದೇಶದ ಅತಿ ದುಬಾರಿ ವಸತಿ ಪ್ರದೇಶ ಯಾವುದು ಗೊತ್ತಾ? ಇಲ್ಲಿ ಚದರ ಅಡಿಗೆ ಕೊಡೋ ದುಡ್ಡಲ್ಲಿ ಒಂದು ಸಿಂಗಾಪುರ್ ಮಲೇಶಿಯಾ ಪ್ರವಾಸವನ್ನೇ ಮುಗಿಸಬಹುದು. ಯಾವುದಪ್ಪಾ ಆ ಪ್ರದೇಶ? ಏನಂಥ ವಿಶೇಷತೆ ಇದೆ ಅಲ್ಲಿ? ಪ್ರಧಾನಿ ನಿವಾಸದ ಆಸುಪಾಸೇ ಇರಬೇಕು ಎಂದುಕೊಂಡ್ರಾ? ಖಂಡಿತಾ ಅಲ್ಲ,  ಮುಂಬಯಿಯ ಟಾರ್ಡಿಯೋ ಈ ಖ್ಯಾತಿ(?) ಪಡೆದ ಪ್ರದೇಶ.

10) ಅಧಿಕೃತ ಆದೇಶ ಬರೋತನಕ ಯಥಾಪ್ರಕಾರ ದಂಡ

 ಸಂಚಾರ ನಿಯಮ ಉಲ್ಲಂಘನೆಗಳ ಪರಿಷ್ಕೃತ ದಂಡ ಜಾರಿಗೆ ತಡೆ ನೀಡಿರುವುದಾಗಿ ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಹೇಳಿಕೆಯು ಸಾರ್ಜಜನಿಕ ವಲಯದಲ್ಲಿ ಗೊಂದಲ ಹುಟ್ಟುಹಾಕಿದ್ದು, ದಂಡದ ಸ್ವರೂಪ ಕುರಿತಂತೆ ಪೊಲೀಸರು ಹಾಗೂ ಸಾರ್ಜಜನಿಕರ ನಡುವೆ ತಿಕ್ಕಾಟ ಉದ್ಭವಗೊಂಡಿದೆ.
 

click me!