BSY ಹೆಸರಲ್ಲಿ ನಕಲಿ ಟ್ವೀಟ್, ರಿಲಯನ್ಸ್ ತೆಕ್ಕೆಗೆ ಟಿಕ್‌ಟಾಕ್? ಆ.14ರ ಟಾಪ್ 10 ಸುದ್ದಿ!

By Suvarna NewsFirst Published Aug 14, 2020, 5:00 PM IST
Highlights

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೆಸರಲ್ಲಿ ನಕಲಿ ಖಾತೆ ತೆರೆದು ಟ್ವೀಟ್ ಮಾಡಿದ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಾಗಿದೆ. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಳ್ಳಿ ಹಲಸು ಬೇಕು ಎಂದಿದ್ದಾರೆ. ಐಪಿಎಲ್‌ನಲ್ಲಿ ಅವಕಾಶ ಸಿಗದ ಯುವ ಕ್ರಿಕೆಟಿಗ ಆತ್ಮಹತ್ಯೆಗೆ ಶರಣಾಗಿದ್ದಾನೆ.  ನಟಿ ನಿಕ್ಕಿ ಗಿಲ್‌ರಾಣಿಗೆ ಕೊರೋನಾ ಪಾಸಿಟೀವ್, ರಿಲಯನ್ಸ್ ತೆಕ್ಕೆಗೆ ಟಿಕ್‌ಟಾಕ್ ಸೇರಿದಂತೆ ಆಗಸ್ಟ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ,

ಹಳ್ಳಿಯ ಹಲಸು ಕೇಳಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ..!...

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಳ್ಳಿಯ ಹಲಸು ಬೇಕು ಎಂದು ಕೇಳಿದ್ದಾರೆ. ತನ್ನ ಮಗನ ಬಳಿ ಒಂದು ಬೇಡಿಕೆ ಇಟ್ಟ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಲಸಿನ ಹಣ್ಣು ತಂದುಕೊಡುವಂತೆ ಕೇಳಿದ್ದಾರೆ.

ಶಬ್ಬಾಶ್..! ಹುಕ್ಕಾ ಸೇದುತ್ತ ಕೋರ್ಟ್‌ ವಿಚಾರಣೆಗೆ ವಕೀಲ ಹಾಜರ್‌!...

ಕೊರೋನಾ ಕಾರಣಗಳಿಂದಾಗಿ ಕೋರ್ಟ್‌ ವಿಚಾರಣೆಗಳು ಈಗ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯಲಾರಂಭಿಸಿವೆ. ಇದು ಕೆಲವು ವಕೀಲರ ಚಪಲಗಳು ಬಯಲಾಗುವಂತೆ ಮಾಡಿದೆ. ಅದರಲ್ಲೂ  ದೇಶದ ಖ್ಯಾತ ಹಿರಿಯ ವಕೀಲ ರಾಜೀವ್‌ ಧವನ್‌ ಅವರು ತಮ್ಮ ನಿವಾಸದಲ್ಲೇ ಹುಕ್ಕಾ ಸೇದುತ್ತ ವಿಚಾರಣೆಗೆ ಹಾಜರಾಗಿದ್ದು ವಿವಾದಕ್ಕೀಡಾಗಿದೆ. 

ಸಿಎಂ ಯಡಿಯೂರಪ್ಪ ಹೆಸರಲ್ಲಿ ನಕಲಿ ಟ್ವಿಟರ್‌ ಖಾತೆ: ಕುಚೋದ್ಯತನ ಬರಹ ಪ್ರಕಟಿಸಿದ್ದ ಕಿಡಿಗೇಡಿ...

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೆಸರಿನಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದು ಕುಚೋದ್ಯತನ ಬರಹ ಪ್ರಕಟಿಸಿದ್ದ ಕಿಡಿಗೇಡಿ ವಿರುದ್ಧ ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಲ್‌ನಲ್ಲಿ ಅವಕಾಶ ಸಿಗದ್ದಕ್ಕೆ ಕ್ರಿಕೆಟಿಗ ಆತ್ಮಹತ್ಯೆ!...

ಐಪಿಎಲ್ ಟೂರ್ನಿಯಲ್ಲಿ ಆಡಲು ಅವಕಾಶ ಸಿಗಲಿಲ್ಲ ಎಂದು ಮನನೊಂದು ಕ್ರಿಕೆಟ್ ಆಟಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಣ್‌ ತಿವಾರಿ ಬೆಳಕಿಗೆ ಬಂದಿದೆ. 

ಕಾಂಗ್ರೆಸ್ ಮುಖಂಡನ ಕುಮ್ಮಕ್ಕಿನಿಂದ ಸ್ಟೇಷನ್‌ಗೆ ಬೆಂಕಿಯಿಟ್ರಾ ಪುಂಡರು?...

ಬೆಂಗಳೂರು ಗಲಭೆ ಆರೋಪಿ ಫೈರೋಜ್ ಪಾಷಾ ಕಾಂಗ್ರೆಸ್‌ನಲ್ಲಿ ಸಕ್ರಿಯನಾಗಿದ್ದ. ವಾಟ್ಸಾಪ್ ಕಾಲ್ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ. ಕಾಂಗ್ರೆಸ್‌ ನಾಯಕರ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈತ ನಿಜಕ್ಕೂ ಕಾಂಗ್ರೆಸ್ ಕಾರ್ಯಕರ್ತನಾ? ಈತನಿಗೆ ಯಾವುದಾದರೂ ಸ್ಥಾನಮಾನಗಳಿದ್ದರೆ ಈ ಕೂಡಲೇ ಅದನ್ನು ವಾಪಸ್ ತೆಗೆದುಕೊಳ್ಳುತ್ತಾರಾ ಕಾಂಗ್ರೆಸ್ ನಾಯಕರು? ಇದಕ್ಕೆ ಅವರೇ ಉತ್ತರಿಸಬೇಕಾಗಿದೆ. 

ಸುಶಾಂತ್ ಫ್ಯಾಮಿಲಿ ಬೆಂಬಲಕ್ಕೆ ನಿಂತ ನಿರ್ಭಯಾ ತಾಯಿ..!...

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬಸ್ಥರು ಸದ್ಯ ನಟಿ ರಿಯಾ ಚಕ್ರವರ್ತಿ ವಿರುದ್ಧ ಕಾನೂನು ಹೋರಾಟಕ್ಕಿಳಿದಿದ್ದಾರೆ. ನಿರ್ಭಯಾ ತಾಯಿ ಸುಶಾಂತ್ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ.

ನಟಿ ನಿಕ್ಕಿ ಗಲ್ರಾನಿಗೆ ಕೊರೋನಾ ಪಾಸಿಟಿವ್..!

ಬಹಭಾಷಾ ನಟಿ ನಿಕ್ಕಿ ಗಲ್ರಾನಿಗೆ ಕೊರೋನಾ ಪಾಟಿಸಿವ್ ದೃಢಪಟ್ಟಿದೆ. ಸ್ವತಃ ನಟಿ ತಮಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ರಿಲಯನ್ಸ್ ಜಿಯೋ ತೆಕ್ಕೆಗೆ ಟಿಕ್ ಟಾಕ್ ಭಾರತ ಘಟಕ..?...

ಇದೀಗ ಟಿಕ್‌ಟಾಕ್‌ ಖರೀದಿಗೆ ರಿಲಯನ್ಸ್‌ ಜಿಯೋ ಮುಂದಾಗಿರುವ ಸುದ್ದಿ ಹೊರಬಿದ್ದಿದೆ. ಟಿಕ್‌ಟಾಕ್‌ನ ಭಾರತೀಯ ಘಟಕದ ಮೌಲ್ಯ 22500 ಕೋಟಿ ರು. ಎಂದು ಅಂದಾಜಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೊಡಲಿಯಿಂದ ಕಾರಿನ ಕನ್ನಡಿ ಒಡೆದು ನಾಯಿ ರಕ್ಷಿಸಿದ..!

34 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶದಲ್ಲಿ ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದ ನಾಯಿಯನ್ನು ವ್ಯಕ್ತಿಯೊಬ್ಬ ರಕ್ಷಿಸಿದ್ದಾನೆ. ಇಲ್ಲಿ ನೋಡಿ ಫೋಟೋಸ್

ಮಾಡಿಫೈ ಮಾಡಿ Isuzu V Max ಕಾರಿಗೆ 48 ಸಾವಿರ ರೂ ದಂಡ; ಕೋರ್ಟ್ ಮೆಟ್ಟಿಲೇರಿದ ಮಾಲೀಕ!...

ಭಾರತದಲ್ಲಿ ವಾಹನ ಮಾಡಿಫಿಕೇಶನ್ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಮೋಟಾರು ವಾಹನ ತಿದ್ದುಪಡಿಯಲ್ಲಿ ವಾಹನ ಮಾಡಿಫಿಕೇಶನ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡಕ್ಕೆ ಅವಕಾಶ ನೀಡಲಾಗಿದೆ. ಇದೀಗ ಇಸುಜು ವಿ ಮ್ಯಾಕ್ಸ್ ಕಾರನ್ನು ಮಾಡಿಫಿಕೇಶನ್ ಮಾಡಿದ ಮಾಲೀಕನಿಗೆ 48,000 ರೂಪಾಯಿ ದಂಡ ಹಾಕಲಾಗಿದೆ ಆದರೆ ಇದರ ವಿರುದ್ಧ ಮಾಲೀಕ ಕೋರ್ಟ್ ಮೆಟ್ಟಿಲೇರಿದ್ದಾನೆ.

click me!