ಕೊರೋನಾ ವಿರುದ್ಧ ಹೊರಾಟ: ಟಾಸ್ಕ್ ಫೋರ್ಸ್ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳು

By Suvarna News  |  First Published Aug 14, 2020, 4:43 PM IST

ಕೊರೋನಾ ಸೋಂಕ ಸಂಬಂಧ ಇಂದು (ಶುಕ್ರವಾರ)  ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ ನಾರಾಯಣ್ ಅವರು ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನಗಳನ್ನ ಮಾಹಿತಿ ನೀಡಿದರು.


ಬೆಂಗಳೂರು, (ಆ.14):  ಖಾಸಗಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ದರವನ್ನು 2000 ರೂ. ದಿಂದ 1500 ರೂಗೆ ಇಳಿಕೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಹೇಳಿದ್ದಾರೆ.

ಕೊರೋನಾ ಸೋಂಕ ಸಂಬಂಧ ಇಂದು (ಶುಕ್ರವಾರ)  ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ ನಾರಾಯಣ್ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳನ್ನ ಮಾಧ್ಯಮಗಳಿಗೆ ತಿಳಿಸಿದರು.

Tap to resize

Latest Videos

undefined

ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ತಯಾರಿಸಿದೆ ರಷ್ಯಾ; ಹುಟ್ಟಿಕೊಂಡಿದೆ ಭಯ, ಅನುಮಾನ..!

ಡಿಸಿಎಂ ಹೈಲೇಟ್ಸ್
* ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರ 2500 ಗೆ ಇಳಿಸಲಾಗಿದೆ.

*18 ಲಕ್ಷ ಸ್ವಾಬ್ ಕಿಟ್ ಖರೀದಿ, 20 ಲಕ್ಷ ಆಂಟೆಜನ್ ಕಿಟ್ ಖರೀದಿಗೆ ನಿರ್ಧರಿಸಲಾಗಿದ್ದು, 18 ಸಾವಿರ ಜನಕ್ಕೆ ಸಿರೊಲಾಜಿ ಟೆಸ್ಟ್ ಮಾಡಲು ನಿರ್ಧಾರ ಮಾಡಲಾಗಿದೆ. ಇದಕ್ಕೆ 1.90 ಕೋಟಿ ಹಣ ಖರ್ಚಾಗುತ್ತೆ ಎಂದು ಮಾಹಿತಿ ನೀಡಿದರು.

* ರಾಜ್ಯದ್ಯಂತ ಸಿರಾಲಜಿ ಟೆಸ್ಟ್ ಮಾಡ್ತೀವಿ. ಸಮುದಾಯದ ಟೆಸ್ಟ್ ಸಿರಾಲಜಿ ಟೆಸ್ಟ್ ಮಾಡಲಾಗುತ್ತೆ.

* ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿವಿಧ ಉಪಕರಣಗಳ ಖರೀಗೆ 12 ಕೋಟಿಗೆ ಒಪ್ಪಿಗೆ ನೀಡಲಾಗಿದೆ. ಸಾವಿನ ಸಂಖ್ಯೆ ಕಡಿಮೆ ಮಾಡಲು ರೋಗಿಗಳ ಮತ್ತಷ್ಟು ಹೆಚ್ಚುವರಿ ಟೆಸ್ಟ್ ಮಾಡಲು ನಿರ್ಧಾರ ಮಾಡಲಾಗಿದೆ.

* ಖಾಸಗಿ ಲ್ಯಾಬ್‌ನಲ್ಲೂ ರೋಗಿ ಸೋಂಕು ಶೀಘ್ರ ಪತ್ತೆಗೆ ಈ ಟೆಸ್ಟ್ ಮಾಡಲು ಸರ್ಕಾರದಿಂದ ನಿರ್ಧಾರ ಮಾಡಲಾಗಿದೆ. ಮಾನ್ಯತೆ ಪಡೆದ ಲ್ಯಾಬ್ ನಿಂದ ಈ ಟೆಸ್ಟ್ ಮಾಡ್ತೀವಿ. ಪ್ಲಾಸ್ಮಾ ಥೆರಪಿಯನ್ನ ರಾಜ್ಯಾದ್ಯಂತ ವಿಸ್ತರಣೆ.

* ರಾಜ್ಯದಲ್ಲಿ ಪ್ರಯೋಗಾಲಯಕ್ಕೆ ಒತ್ತು ನೀಡಲು, ಸಂಶೋಧನೆ ಮಾಡಲು 10 ಕೋಟಿ ಬಿಡುಗಡೆಯಾಗಿದೆ. ಸಂಶೋಧನೆಗೆ ಒತ್ತು ನೀಡಲು ಸರ್ಕಾರದ ನಿರ್ಧರಿಸಿದೆ.

* ಬೆಂಗಳೂರು ಬಯೋ ಇನೋವೇಶನ್ ಸೆಂಟರ್ ನಲ್ಲಿ ಸಂಶೋಧನೆ ಪ್ರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ. ಸೋಂಕು ಪತ್ತೆ, ವ್ಯಾಕ್ಸಿನ್, ಇನ್ನಿತರ ಸಂಶೋಧನೆಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

click me!