BSY ಮೇಲೆ ಮೊಹಮ್ಮದ್‌ನ ಮೊಹಬ್ಬತ್, ರಾಜಕೀಯ ದಳ್ಳುರಿಗೆ ಬಲಿಯಾದ್ರಾ ಅಂಕಿತ್; ಫೆ.27ರ ಟಾಪ್ 10 ಸುದ್ದಿ!

Chethan Kumar   | Asianet News
Published : Feb 27, 2020, 05:04 PM IST
BSY ಮೇಲೆ ಮೊಹಮ್ಮದ್‌ನ ಮೊಹಬ್ಬತ್, ರಾಜಕೀಯ ದಳ್ಳುರಿಗೆ ಬಲಿಯಾದ್ರಾ ಅಂಕಿತ್; ಫೆ.27ರ ಟಾಪ್ 10 ಸುದ್ದಿ!

ಸಾರಾಂಶ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಮೊಹಮ್ಮದ್ ಹಾಗೂ 14 ಟೈಲರ್ ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಇದು ಬಿಎಸ್‌ವೈ ಮೇಲಿನ ಅಭಿಮಾನಿದಿಂದ ಅನ್ನೋದು ವಿಶೇಷ. ಅತ್ತ ದೆಹಲಿ ಹಿಂಸಾಚಾರದಲ್ಲಿ ಹತ್ಯೆಯಾದ ಗುಪ್ತಚರ ಅಧಿಕಾರಿ ಅಕಿತ್ ಸಾವಿನ ಹಿಂದೆ ಹಿಂದೆ ಆಪ್ ನಾಯಕನ ಹೆಸರು ಕೇಳಿಬಂದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೊಸ ನಾಯಕ, ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆ ಸೇರಿದಂತೆ ಫೆ.27ರ ಟಾಪ್ 10 ಸುದ್ದಿ ಇಲ್ಲಿವೆ.

ಟ್ವಿಟರ್‌ನಲ್ಲಿ ಅಬ್ಬರಿಸಿದ ರಾಜಾಹುಲಿ ಬಿಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ  ಇಂದು (ಗುರುವಾರ) ಹುಟ್ಟುಹಬ್ಬದ ಸಂಭ್ರಮ. 78ನೇ ವಸಂತಕ್ಕೆ ಕಾಲಿಟ್ಟಿರುವ ಯಡಿಯೂರಪ್ಪ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ರಾಜ್ಯ ನಾಯಕರು ಸೇರಿದಂತೆ ಕೇಂದ್ರ ನಾಯಕರು ಸಹ ಟ್ವಿಟ್ಟರ್‌‌ನಲ್ಲಿ ಜನ್ಮದಿನ ಶುಭಕೋರಿದ್ದಾರೆ. ಇದರ ಮಧ್ಯೆ ರಾಜಾಹುಲಿ ಟ್ವಿಟ್ಟರ್‌ನಲ್ಲಿ ಅಬ್ಬರಿಸಿದ್ದಾರೆ.


ಆಪ್ ನಾಯಕನ ಮನೆಯಲ್ಲಿ ರಾಶಿ ರಾಶಿ ಕಲ್ಲು, ಪೆಟ್ರೋಲ್ ಬಾಂಬ್, ವಿಡಿಯೋ ವೈರಲ್!

ಆಮ್ ಆದ್ಮಿ ಪಕ್ಷದ ಕಾರ್ಪೋರೇಟರ್ ತಾಹಿರ್ ಹುಸೈನ್ ವಿರುದ್ಧ ದೆಹಲಿ ಹಿಂಸಾಚಾರಕ್ಕೆ ಪ್ರಚೋದನೆ ನಿಡಿರುವ ಆರೋಪ ಕೇಳಿ ಬಂದಿದೆ. ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಕುಟುಂಬಸ್ಥರು ತಾಹಿರ್ ವಿರುದ್ಧ ಹತ್ಯೆಗೈದಿರುವ ಆರೋಪವೆಸಗಿದ್ದಾರೆ..

ದೆಹಲಿ ಗಲಭೆ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ವರ್ಗಾವಣೆ!

ದೆಹಲಿ ಹಿಂಸಾಚಾರದ ಬೆನ್ನಲ್ಲೇ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಿತ್ತು. ಆದರೀಗ ಹಿಂಸಾಚಾರ ಸಂಬಂಧ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ರಾತ್ರೋ ರಾತ್ರಿ ವರ್ಗಾವಣೆಯಾಗಿದ್ದಾರೆ.

ಶಿವರಾತ್ರಿಯಂದು 20ರ ಯುವತಿ, ಸ್ವಾಮೀಜಿ ಇಬ್ಬರೂ ನಾಪತ್ತೆ

ಶಿವರಾತ್ರಿಯಂದು 20ರ ಯುವತಿ ಹಾಗೂ ಸ್ವಾಮೀಜಿ ನಾಪತ್ತೆಯಾದ ಘಟನೆ ಕೋಲಾರದಲ್ಲಿ ನಡೆದಿದೆ. ಗ್ರಾಮದ 20 ವರ್ಷದ ಯುವತಿ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾಳೆ...


ಶಾಂತಿ ಮಂತ್ರ ಪಠಿಸಿದ ಮುಸ್ಲಿಂ ಧರ್ಮಗುರುವಿನ ಹತ್ಯೆಗೆ ಸಂಚು!

ಈ ನಡುವೆ, ಪೌರತ್ವ ತಿದ್ದುಪಡಿ ಕಾಯ್ದೆ ವೇಳೆ ಶಾಂತಿ-ಸೌಹಾರ್ದತೆ ಕಾಪಾಡುವಂತೆ ಕರೆ ನೀಡಿದ ಕರ್ನಾಟಕ- ಕೇರಳದ ಮುಸ್ಲಿಂ ಧರ್ಮಗುರುವನ್ನೇ ಹತ್ಯೆ ಮಾಡಲು ಸಂಚು ನಡೆದಿದೆ. ಶಾಂತಿ ಮಂತ್ರ ಪಠಿಸುವವರನ್ನು ಫಿನಿಶ್ ಮಾಡುವ ಈ ಮಹಾಸಂಚನ್ನು ಸುವರ್ಣನ್ಯೂಸ್ ಬ್ರೇಕ್ ಮಾಡಿದೆ.

IPL 2020: ಹೊಸ ನಾಯಕನ ನೇಮಿಸಿದ ಸನ್‌ರೈಸರ್ಸ್ ಹೈದರಾಬಾದ್!

IPL 2020 ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಆದರೆ ಬಲಿಷ್ಠ ತಂಡಕಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ಪ್ರಶಸ್ತಿಗಾಗಿ ಕಠಿಣ ತಯಾರಿ ಆರಂಭಿಸಿದೆ. ಇದರ ಬೆನ್ನಲ್ಲೇ ತಂಡಕ್ಕೆ ಹೊಸ ನಾಯಕನ ನೇಮಿಸಿದೆ.

ಹೊಸ ನಿಯಮದ ಸಂಕಷ್ಟ: ಭಾರತದಲ್ಲಿ ವಿಕಿಪೀಡಿಯಾ ಯುಗಾಂತ್ಯ?

ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಮಾಹಿತಿ ರಕ್ಷಣೆ ಮಸೂದೆ ಮತ್ತು ಅಂತರ್ಜಾಲ ಮಧ್ಯವರ್ತಿ ಹೊಣೆಗಾರಿಕೆ ನಿಯಮ ಭಾರತದಲ್ಲಿ ವಿಕಿಪೀಡಿಯಾದ ಯುಗದ ಅಂತ್ಯಕ್ಕೆ ಕಾರಣವಾಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಮೊಹಮ್ಮದ್‌ನ ಪ್ರೇಮದ ಕಾಣಿಕೆ!

ಸಿಎಂ ಬಿಎಸ್ ಯಡಿಯೂರಪ್ಪ ಅವರು 77 ಮುಗಿಸಿ ಇಂದು (ಗುರುವಾರ) 78ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್‌ ಡೇಗಾಗಿ ಮೊಹಮ್ಮದ್ ಮತ್ತು  14 ಟೈಲರ್‌ಗಳು ನಿನ್ನೆ (ಬುಧವಾರ) ರಾತ್ರಿ ನಿದ್ದೆಗೆಟ್ಟಿದ್ದಾರೆ..! ಹಮ್ಮದ್ ಮುಷಕೀಂ ಗಿರುವ ಬಿಎಸ್ ವೈ ಮೇಲಿನ ಅಭಿಮಾನಲೇ ನಿದ್ದೆಗೆಡಲು ಕಾರಣ.

SBI ಗ್ರಾಹಕರೇ ನಿರ್ಲಕ್ಷ್ಯಿಸಿದರೆ ನಿಮ್ಮ ಖಾತೆ ಬ್ಲಾಕ್!

ಎಸ್‌ಬಿಐ ಖಾತೆ ಹೊಂದಿರುವ ಗ್ರಾಹಕರು ಗಮನಿಸಲೇಬೇಕು. ಕಾರಣ ನಿರ್ಲಕ್ಷ್ಯವಹಿಸಿದರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಲಿದೆ. ಇನ್ನು ಸಮಯವಿದೆ ಎಂದುಕೊಳ್ಳಬೇಡಿ.  ಫೆ.28ರೊಳಗೆ ನೀವು ಸಣ್ಣ ಕೆಲಸ ಮಾಡದಿದ್ದಲ್ಲಿ ಸಂಕಷ್ಟ ತಪ್ಪಿದ್ದಲ್ಲ.


ಹಣ ಹಿಂದಿರುಗಿಸಲು ಒತ್ತಾಯಿಸುತ್ತಿರುವ ನಿರ್ಮಾಪಕ; ತ್ರಿಷಾನೂ ನಯನತಾರಾ ಆಗ್ಬಿಟ್ರಾ?...

ಟಾಲಿವುಡ್‌ ನಟಿ ತ್ರಿಷಾ ಈಗಾ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಚಿರಂಜೀವಿಗೆ ಜೋಡಿಯಾಗಿ ಕಾಣಿಸಿಕೊಂಡ 'ಪರಮಪದಂ ವೆಲೈಯಾಟ್ಟು' ಸಿನಿಮಾ. ಅಷ್ಟಕ್ಕೂ ಅದೃಷ್ಟ ಕೈ ಹಿಡಿಯಬೇಕಾದ ಚಿತ್ರ ಉಲ್ಟಾ ಹೊಡೆಯಲು ಕಾರಣ ಬಹಿರಂಗವಾಗಿದೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ