ಅನರ್ಹ ಶಾಸಕರಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೀಗಾಗಿ ಅನರ್ಹರಿಗೆ ಅನ್ಯಾಯವಾಗಲು ಬಿಡಬಾರದು ಅನ್ನೋದು ಮುಖ್ಯಮಂತ್ರಿ ಯಡಿಯೂರಪ್ಪ ಮಾತು. ಇದಕ್ಕಾಗಿ ಅನರ್ಹರ ಕ್ಷೇತ್ರಕ್ಕೆ BSY ಬಂಪರ್ ಗಿಫ್ಟ್ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುತ್ತಿದ್ದು ಚಟುವಟಿಕೆ ಗರಿಗೆದರಿದೆ. ನವೆಂಬರ್ ಆರಂಭದಲ್ಲೇ ಚಿನ್ನದ ದರ ಕುಸಿತ ಕಂಡಿದೆ. ಸೆಲ್ಫಿಗಾಗಿ ಫುಟ್ಬಾಲ್ ಪಟುಗೆ ಹಳದಿ ಕಾರ್ಡ್, ಸುದೀಪ್ ಹೆಗಲೇರಿದ ದರ್ಶನ್ ಪುತ್ರ ಸೇರಿದಂತೆ ನವೆಂಬರ್ 2ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.
1) CM ಮನೆಗೆ ಕಾಂಗ್ರೆಸ್ ಹಿರಿಯ ರಾಮಲಿಂಗರೆಡ್ಡಿ ದೌಡು: ಏನಿದು ರಾಜಕೀಯ ಸೌಂಡು...?
undefined
ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗರೆಡ್ಡಿ ಅವರು ಇತ್ತೀಚೆಗೆ ಲೋಕಸಭಾ ಚುನಾವಣೆ ಸಮಯದಲ್ಲಿ ಸ್ವಪಕ್ಷದ ನಾಯಕರ ವಿರುದ್ಧ ಸಿಡಿದೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರನ್ನು ಮನವೋಲಿಸಿದ್ದರಿಂದ ರಾಮಲಿಂಗರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದುಕೊಂಡಿದ್ದರು. ಇದೀಗ ಸಿಎಂ ಯಡಿಯೂರಪ್ಪ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
2) ಮಿಂಟೋ ವೈದ್ಯರ ಮೇಲೆ ಕರವೇ ಕಾರ್ಯಕರ್ತೆ ಹಲ್ಲೆ..?
ಜುಲೈ ತಿಂಗಳಲ್ಲಿ ನಡೆದ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ತಪ್ಪಿನಿಂದಾಗಿ ಕಣ್ಣು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಮಿಂಟೋ ಆಸ್ಪತ್ರೆ ಮುಂಭಾಗ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಕಾರ್ಯಕರ್ತರು ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
3) ಸುಧಾಕರ್ ಆಯ್ತು, ಮತ್ತೊಬ್ಬ ಅನರ್ಹ ಶಾಸಕನ ಕ್ಷೇತ್ರಕ್ಕೆ BSY ಕೊಟ್ರು ಬಂಪರ್
ಉಪ- ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ, ಅನರ್ಹ ಶಾಸಕರ ಕ್ಷೇತ್ರಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ. ಕನಕಪುರದಿಂದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿದ್ದಾಯ್ತು, ಚಿಕ್ಕಬಳ್ಳಾಪುರಕ್ಕೆ ಹೊಸ ತಾಲೂಕು ಘೋಷಣೆ ಮಾಡಿದ್ದಾಯ್ತು. ಈಗ ಮತ್ತೊಬ್ಬ ಅನರ್ಹ ಶಾಸಕನ ಕ್ಷೇತ್ರದತ್ತ ಯಡಿಯೂರಪ್ಪ ವಿಶೇಷ ಕಾಳಜಿ ತೊರಿದ್ದಾರೆ.
4) ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್
ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಹಾಗೂ ಈ ಭಾಗದಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಶಿವಮೊಗ್ಗ-ತುಮಕೂರು ನಡುವೆ ಚತುಷ್ಪಥ ರಸ್ತೆ ನಿರ್ಮಿಸಲು 3957 ಕೋಟಿ ರು. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
5) ಮಂಡ್ಯ ರಾಜಕೀಯದಲ್ಲಿ ಭಿನ್ನರಾಗ : ಸಿಎಂ ನೇಮಕದ ವಿರುದ್ಧ ಅಸಮಾಧಾನ
ಮಂಡ್ಯ ರಾಜಕೀದಲ್ಲಿ ಈಗ ಭಿನ್ನರಾಗ ಕೇಳಿ ಬಂದಿದೆ. ಸಿಎಂ ನೇಮಕದ ಬಗ್ಗೆ ಸ್ವ ಪಕ್ಷೀಯರಿಂದಲೇ ಅಸಮಾಧಾನ ಹೊರಬಿದ್ದಿದೆ.ಅನರ್ಹ ಶಾಸಕ ನಾರಾಯಣ ಗೌಡ ಬೆಂಬಲಿಗರಾಗಿರುವ ಶ್ರೀನಿವಾಸ್ ಅವರನ್ನು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೆಂದು ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ. ಇದಕ್ಕೆ ಮೂಲ ಬಿಜೆಪಿಗರಿಂದಲೇ ವಿರೋಧ ವ್ಯಕ್ತವಾಗಿದೆ.
6) ಫುಟ್ಬಾಲ್ ಅಚ್ಚರಿ: ಸೆಲ್ಫಿ ಪಡೆಯಲೂ ಹೀಗೂ ಮಾಡ್ತಾರಾ..?
ತಮ್ಮ ನೆಚ್ಚಿನ ಸೆಲಿಬ್ರಿಟಿ ಜತೆ ಅಭಿಮಾನಿಗಳು ಸೆಲ್ಫಿಗಾಗಿ ಹಾತೋರೆಯುವುದು ಸರ್ವೇಸಾಮಾನ್ಯ. ಆದರೆ, ಫುಟ್ಬಾಲ್ ರೆಫ್ರಿಯೊಬ್ಬರು ಹಳದಿ ಕಾರ್ಡ್ ನೀಡಿ ಬ್ರೆಜಿಲ್ ಫುಟ್ಬಾಲ್ ದಿಗ್ಗಜನ ಜತೆ ಸೆಲ್ಫಿ ತೆಗೆಸಿಕೊಂಡ ಕ್ಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
7) ಕುಸಿದ ಚಿನ್ನದ ದರ: ನವೆಂಬರ್ ಆಗಲಿದೆಯೇ ಶುಭ ಸುದ್ದಿಗಳ ಆಗರ?
ಅಕ್ಟೋಬರ್‌ನಲ್ಲಿ ಹಾವು-ಏಣಿ ಆಟ ಆಡುತ್ತಿದ್ದ ಚಿನ್ನದ ದರ, ನವೆಂಬರ್ ಆರಂಭದಲ್ಲಿ ಗಮನಾರ್ಹ ಇಳಿಕೆ ಕಾಣುವ ಮೂಲಕ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ. ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.27ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 38,475 ರೂ. ಆಗಿದೆ.
8) ಕಿಚ್ಚನ ಹೆಗಲೇರಿದ ದರ್ಶನ್ ಪುತ್ರ; ಫೋಟೋ ವೈರಲ್!..
'ಸ್ನೇಹಕ್ಕೆ ಸ್ನೇಹ- ಪ್ರೀತಿಗೆ ಪ್ರೀತಿ ಕೊಟ್ಟು' ಒಬ್ಬರಿಗೊಬ್ಬರು ಹೆಗಲಾಗಿ ನಿಂತವರು ಸುದೀಪ್ ಹಾಗೂ ದರ್ಶನ್. ಆದರೆ, ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ, ಈ ಇಬ್ಬರ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಯಿತು. ಕೆಲವು ದಿನಗಳ ಹಿಂದೆ ನಡೆದ ವಿನೀಶ್ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ವಿನೀಶ್ ಫೋಟೋವೊಂದು ಹರಿದಾಡಿದ್ದು, ಕಿಚ್ಚನ ಹೆಗಲೇರಿದ್ದಾನೆ ದರ್ಶನ್ ಮಗ.
9) BB7:ಬೇಕೆಂದೇ ಮಾಡಿದ ಜಗಳದಲ್ಲಿ ಸತ್ಯ ಬಿಚ್ಚಿಟ್ಟ ಹರೀಶ್ ರಾಜ್
ಇದು ಟಾಸ್ಕಾ? ರಿವೆಂಜಾ? ಗೊತ್ತಿಲ್ಲ. ಆದರೆ ಸ್ಪರ್ಧಿಗಳ ಮನಸ್ಸಿನಲ್ಲಿರುವ ನೋವನ್ನು ಹೊರ ಹಾಕಲು ಬಿಗ್‌ಬಾಸ್ ಮಾಡಿರುವ ಪ್ಲ್ಯಾನ್ ಸೂಪರ್. ಬಿಗ್ ಬಾಸ್ ಮನೆಯಲ್ಲಿನ ಸೀಕ್ರೆಟ್ ಟಾಸ್ಕ್ ಮನೆ ಮನೆಯಲ್ಲಿ ಸದ್ದು ಮಾಡುತ್ತಿದೆ.
10) ವೇಶ್ಯೆಯರಿಗೆ ಕೊಕೇನ್ : ಸಂಸದ ಸಸ್ಪೆಂಡ್
ವೇಶ್ಯೆಯರಿಗಾಗಿ ಕೊಕೇನ್ ಖರೀದಿಗೆ ಒಪ್ಪಿಕೊಂಡ ಪ್ರಕರಣದಲ್ಲಿ ಸಂಸದರೋರ್ವರನ್ನು ಆರು ತಿಂಗಳ ಕಾಲ ಸಸ್ಪೆಂಡ್ ಮಾಡಲಾಗಿದೆ. ನಿಯಮಗಳನ್ನು ಮೀರಿ ಕೊಕೇನ್ ಖರೀದಿಗೆ ಒಪ್ಪಿ ಗೆ ಸೂಚಿಸಿದ್ದ ಸಂಸದ, ವೇಶ್ಯೆಯರಿಗೆ ನೀಡಿದ್ದರು. ಇದೀಗ 6 ತಿಂಗಳ ಕಾಲ ಅಮಾನತು ಮಾಡಲಾಗಿದೆ.