ಬ್ಯಾಂಕ್ ಸೇವೆ ಸ್ಥಗಿತ, 26ರ ವಯಸ್ಸಿನ ಗಡಿಗೆ ಅಮೂಲ್ಯ ನೆಗೆತ: ಸೆ.14ರ ಟಾಪ್ 10 ಸುದ್ದಿ!

By Web DeskFirst Published Sep 14, 2019, 6:19 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಸೆ.14ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಸೆ.14): ದಿನವೊಂದಕ್ಕೆ ದೇಶ, ವಿದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶ, ವಿದೇಶಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.

ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ ನಿಮ್ಮ ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ನೌಕರರ ಮುಷ್ಕರ, ಎರಡು ದಿನ ಬ್ಯಾಂಕ್ ಸೇವೆ ಸ್ಥಗಿತ!


10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4 ದೊಡ್ಡ ಬ್ಯಾಂಕ್‌ ರಚಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬ್ಯಾಂಕ್ ನೌಕಕರು ತೀವ್ರ ವ್ಯಕ್ತಪಡಿಸಿದ್ದು, ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಅಲ್ಲದೇ ಸರ್ಕಾರ ತಮ್ಮ ಬೇಡಿಕೆಗೆ ಸಮ್ಮತಿಸದೇ ಹೋದಲ್ಲಿ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆಯನ್ನೂ ನೀಡಿವೆ. ಹೀಗಾಗಿ ಬ್ಯಾಂಕಿಂಗ್ ಸೇವೆಯಲ್ಲಿ ತೀವ್ರತರ ವ್ಯತ್ಯಯವಾಗಲಿದೆ. ಯಾವತ್ತು ಬ್ಯಾಂಕ್ ನೌಕರರ ಮುಷ್ಕರ? ಇಲ್ಲಿದೆ ವಿವರ.

2. ರೈತನ ಮಗನಾದ ಕೋಟ್ಯಧಿಪತಿ, 7 ಕೋಟಿ ತಪ್ಪಿಸಿತು ಆ ಒಂದು ಪ್ರಶ್ನೆ!


Kaun Banega Crorepathi 11ನೇ ಆವೃತಿಯಲ್ಲಿ ಬುದ್ಧಿಶಕ್ತಿಯೊಂದಿಗೆ 1 ಕೋಟಿ ಗೆದ್ದಿದ್ದಾನೆ IAS ಆಕಾಂಕ್ಷಿ ಸನೋಜ್ ರಾಜ್. ಕೈಯಲ್ಲಿ ಲೈಫ್‌ಲೈನ್ ಇದ್ದರೂ ಬಳಸಲಾಗದಂಥ ಪರಿಸ್ಥಿತಿ. ಅಷ್ಟಕ್ಕೂ 7 ಕೋಟಿ ರೂ. ತಪ್ಪಿಸಿದ ಆ ಪ್ರಶ್ನೆ ಯಾವುದು?

3. ಅತ್ತ ದೇಶಕ್ಕೊಂದೇ ಭಾಷೆ ಎಂದ ಶಾ: ಇತ್ತ ಹಿಂದಿ ದಿನ ಆಚರಣೆಗೆ ಸಿದ್ದು ವಿರೋಧ!


ಹಿಂದಿ ದಿವಸ ಆಚರಣೆ ಪ್ರಯುಕ್ತ ಗೃಹ ಸಚಿವ ಅಮಿತ್ ಶಾ ಒಂದೇ ದೇಶ, ಒಂದೇ ಭಾಷೆ ಹಿಂದಿ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿ ಎಂದು ಟ್ವೀಟ್ ಮಾಡಿದ್ದರೆ. ಇತ್ತ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಿಂದಿ ದಿನ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

4. ನೀರವ್‌ ಸೋದರನ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌!


ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ 13 ಸಾವಿರ ಕೋಟಿ ರು. ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್‌ ಮೋದಿ ಸೋದರನ ವಿರುದ್ಧ ಜಾಗತಿಕ ಪೊಲೀಸ್‌ ಸಂಸ್ಥೆ ಇಂಟರ್‌ಪೋಲ್‌ ಇದೀಗ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸಿದೆ. 

5. ಮುಖ್ಯಮಂತ್ರಿ ಮನೆಯ ಸಾಕುನಾಯಿ ಸತ್ತಿದ್ದಕ್ಕೆ ಡಾಕ್ಟರ್ ವಿರುದ್ಧ FIR!


ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿದ್ದ ಸಾಕುನಾಯಿ ಅಕಾಲಿಕ ನಿಧನ ಹೊಂದಿದೆ. ಈ ಕಾರಣಕ್ಕೆ ನಾಯಿಗೆ ಚಿಕಿತ್ಸೆ ನೀಡಿದ್ದ ಪಶು ವೈದ್ಯನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

6. ಅಬ್ಬಾ! ಅನುಷ್ಕಾ-ವಿರಾಟ್ ಮನೆಗೆ ಇಷ್ಟೊಂದು ರೆಂಟಾ?


ಟೀಂ ಇಂಡಿಯಾ ನಾಯಕ ವಿರಾಟ್ ಹಾಗೂ ಬಾಲಿವುಡ್ ಎಲಿಗೆಂಟ್ ನಟಿ ಅನುಷ್ಕಾ ಶರ್ಮಾ ಮುಂಬೈನ ವರ್ಲಿಯಲ್ಲಿ ಅದ್ಭುತವಾದ ಮನೆಯೊಂದರಲ್ಲಿ ವಾಸವಿದ್ದಾರೆ. ಅದಕ್ಕೆ ತಿಂಗಳ ಬಾಡಿಗೆ ಕೇಳಿದರೆ ಹೌಹಾರುತ್ತೀರಿ. ಬರೋಬ್ಬರಿ 15 ಲಕ್ಷ ರೂ. ಅಂತೆ!

7. ’ಯುವ ದಸರಾ’ ಉದ್ಘಾಟಿಸಲು PV ಸಿಂಧುವನ್ನು ಆಹ್ವಾನಿಸಿದ ಸಂಸದ ಪ್ರತಾಪ್ ಸಿಂಹ


ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಈ ಬಾರಿಯ ಯುವ ದಸರಾವನ್ನು ಉದ್ಘಾಟಿಸಲಿದ್ದಾರೆ. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಪಿ.ವಿ ಸಿಂಧು ನಿವಾಸಕ್ಕೆ ಭೇಟಿ ಕೊಟ್ಟು, ಯುವ ದಸರಾ ಉದ್ಘಾಟಿಸುವಂತೆ ಅಧಿಕೃತ ಆಹ್ವಾನ ನೀಡಿದ್ದಾರೆ. 

8. ಕೆಣಕ್ತಾರೆ, ಸಾಯ್ತಾರೆ: ಬಿಳಿ ಧ್ವಜ ತಂದು ಹೆಣ ತೊಗೊಂಡ್ತಾರೆ!


ಪಾಕ್ ಆಕ್ರಮಿತ ಕಾಶ್ಮೀರದ ಬಳಿ ಇರುವ ಹಾಜಿಪುರ್ ಸೆಕ್ಟರ್ ಬಳಿ, ಭಾರತೀಯ ಪೋಸ್ಟ್ ಮೇಲೆ ದಾಳಿ ಮಾಡಲೆತ್ನಿಸಿದ ಪಾಕ್ ಸೈನಿಕರನ್ನು ಭಾರತೀಯ ಸೇನೆ ಕೊಂದು ಹಾಕಿದೆ. ಭಾರತೀಯ ಸೈನಿಕರ ಆರ್ಭಟಕ್ಕೆ ಬಿಲ ಸೇರಿದ ಪಾಕ್ ಸೈನಿಕರು, ದಾಳಿಯಲ್ಲಿ ಸತ್ತ ತಮ್ಮ ಸಹೋಧ್ಯೋಗಿಗಳ ಶವ ಕೊಂಡೊಯ್ಯಲು ಬಿಳಿ ಧ್ವಜ ತೋರಿಸಿದ ಘಟನೆ ನಡೆದಿದೆ.

9. ಸ್ವೀಟ್ 26ಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ!


ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯಗೆ ಇಂದು 26 ವರ್ಷನೇ ಹುಟ್ಟುಹಬ್ಬದ ಸಂಭ್ರಮ, ಮುದ್ದು ಮುದ್ದು ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ಹುಡುಗಿ ಅಮೂಲ್ಯ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

10. ಹೊಸ ಸಂಸತ್ತು, ಹೊಸ ರಾಜಪಥ: ಮೋದಿ ಸರ್ಕಾರದ ಪ್ಲಾನ್‌ ಏನು? ಈಗ ಹೇಗಿದೆ?


ದೇಶದ ರಾಜಕೀಯ ಶಕ್ತಿಕೇಂದ್ರವಾಗಿರುವ ಸಂಸತ್‌ ಕಟ್ಟಡವನ್ನು ನವೀಕರಣಗೊಳಿಸುವ ಅಥವಾ ಹೊಸದೊಂದು ಸಂಸತ್‌ ಭವನ ನಿರ್ಮಿಸುವ ಬೃಹತ್‌ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕೇವಲ ಸಂಸತ್‌ ಭವನ ಮಾತ್ರವಲ್ಲದೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಸುಮಾರು 3 ಕಿ.ಮೀ ಮಾರ್ಗವನ್ನು ಸುಂದರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ನಿರ್ಧರಿಸಿದೆ.

click me!