5 ವರ್ಷ ನಂತ್ರ ಪೋಷಕರ ಸೇರಿದ ಮಗು, RCBಗೆ ಸಿತ್ತಾ ಗೆಲುವಿನ ನಗು? ಅ.10ರ ಟಾಪ್ 10 ಸುದ್ದಿ!

By Suvarna News  |  First Published Oct 10, 2020, 5:04 PM IST

ಉತ್ತರ ಪ್ರದೇಶದ ಹಂಡಿಯಾದ ಸೋಮ್ ಸೊನಿ ಎಂಬ ಬಾಲಕ 5 ವರ್ಷದ ಬಳಿಕ ಕೊನೆಗೂ ಅಮ್ಮನ ಮಡಿಲು ಸೇರಿದ್ದಾನೆ. ಭಾರತದ ಗಡಿಯೊಳಕ್ಕೆ ನುಸುಳಲು ಉಗ್ರರಿಗೆ ಪಾಕ್ ನೆರವು ನೀಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹವಾಲಾ ಪ್ರಕರಣದಲ್ಲಿ ಏಳು ಮಂದಿ ಡಿಕೆಶಿ ಆಪ್ತರಿಗೂ ಈಗ ವಿಚಾರಣೆ ಸಂಕಷ್ಟ ಎದುರಾಗಿದೆ. ವಿವಾದ ಸೃಷ್ಟಿಸಿದ ಹಾರರ್ ಚಿತ್ರ, ಕೊರೋನಾ ನಡುವೆ ನೆಮ್ಮದಿಯ ಸುದ್ದಿ ಕೊಟ್ಟ RBI ಗವರ್ನರ್ ಸೇರಿದಂತೆ ಅಕ್ಟೋಬರ್ 10ರ ಟಾಪ್ 10 ಸುದ್ದಿ ವಿವರ


ಕಾಣೆಯಾಗಿ 5 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ಆಟಿಸಂ ಮಗು: ಭಾವುಕ ಕ್ಷಣ ನೋಡಿ...

Tap to resize

Latest Videos

undefined

ಉತ್ತರ ಪ್ರದೇಶದ ಹಂಡಿಯಾದ ಸೋಮ್ ಸೊನಿ ಎಂಬ ಬಾಲಕ ಕೊನೆಗೂ ಅಮ್ಮನ ಮಡಿಲು ಸೇರಿದ್ದಾನೆ.

ಭಾರತದ ಗಡಿಯೊಳಕ್ಕೆ ನುಸುಳಲು ಉಗ್ರರಿಗೆ ಪಾಕ್ ನೆರವು; ಸಿಸಿಟಿವಿಯಲ್ಲಿ ಕುತಂತ್ರ ಬಯಲು!...

ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ಕುತಂತ್ರ ಹಲವು ಬಾರಿ ಬಟಾ ಬಯಲಾಗಿದೆ. ಸದ್ಯ ಭಾರತದ ಚಿತ್ತ ಚೀನಾ ಗಡಿಯತ್ತ ನೆಟ್ಟಿರುವ ಬೆನ್ನಲ್ಲೇ ಪಾಕಿಸ್ತಾನ ತನ್ನ ನರಿ ಬುದ್ದಿ ತೋರಿಸುತ್ತಿದೆ. ಭಾರತದ ಗಡಿಯೊಳಕ್ಕೆ ನುಸುಳಲು ಉಗ್ರರಿಗೆ ಪಾಕಿಸ್ತಾನ ನೆರವು ನೀಡುತ್ತಿರುವ ದೃಶ್ಯ ಗಡಿಯಲ್ಲಿ ಅಳವಡಿಸಿದ ಸಿಸಿಟಿವಿಯಿಂದ ಬಯಲಾಗಿದೆ.

ಹವಾಲಾ ಕೇಸ್‌: ಏಳು ಮಂದಿ ಡಿಕೆಶಿ ಆಪ್ತರಿಗೂ ಈಗ ವಿಚಾರಣೆ ಸಂಕಷ್ಟ...

ಹವಾಲಾ ಮೂಲಕ ಕೋಟ್ಯಂತರ ರು. ವರ್ಗಾವಣೆ ನಡೆಸಿದ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಏಳು ಮಂದಿ ಸಂಬಂಧಿಕರು ಹಾಗೂ ಆಪ್ತರಿಗೂ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆಯ ಸಂಕಷ್ಟ ಎದುರಾಗಿದೆ. 

IPL 2020 ವೀಕೆಂಡ್ ಕಿಕ್ಕೇರಿಸಲಿದೆ CSK vs RCB ಮ್ಯಾಚ್...

ವಿರಾಟ್ ಕೊಹ್ಲಿ ಪಡೆ ಸದ್ಯ 5ನೇ ಸ್ಥಾನದಲ್ಲಿದ್ದರೆ, ಎಂ. ಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡ 6ನೇ ಸ್ಥಾನದಲ್ಲಿದ್ದು, ಗೆಲುವುಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ. 

ಬೆಂಗಳೂರಿನಲ್ಲಿ ಚಿನ್ನದ ನಾಣ್ಯದ ಮಳೆ, ಜನರ ನೂಕು ನುಗ್ಗಲು!...

ಬೆಂಗಳೂರಿನ ಆನೇಕಲ್ ಭಾಗದಲ್ಲಿ ಚಿನ್ನದ ನಾಣ್ಯಗಳ ಮಳೆ ಸುರಿದಿದೆ ಎಂಬ ಮಾತು ಕೇಳಿ, ಇದನ್ನು ಪಡೆದುಕೊಳ್ಳಲು ಜನರು ಓಡೋಡಿ ಬಂದಿದ್ದಾರೆ. ಇದರ ಪರಿಣಾಮ ನೂಕು ನುಗ್ಗಲು ಉಂಟಾಗಿದೆ. 

ಮೋಜು, ಮಸ್ತಿ, ಪಾರ್ಟಿಯಿಲ್ಲ; ಜೈಲಿನಲ್ಲೇ ಸಂಜನಾ ಸಿಂಪಲ್ ಬರ್ತಡೇ...

ನಟಿ ಸಂಜನಾ ಗರ್ಲಾನಿ ಜೈಲುಹಕ್ಕಿಯಾಗಿದ್ದಾರೆ. ಇಂದು ಸಂಜನಾ ಹುಟ್ಟುಹಬ್ಬವಾಗಿದ್ದು, ಜೈಲಿನಲ್ಲೇ ಬರ್ತಡೇ ಆಚರಿಸಿಕೊಂಡಿದ್ದಾರೆ. 

ಸೆಕ್ಸೀ ದೆವ್ವದ ಕಥೆ: ವಿವಾದ ಸೃಷ್ಟಿಸಿದ 'ಇರಂಡಂ ಕುತ್ತು' ಟ್ರೈಲರ್...

ಅಡಲ್ಟ್ ಹಾರರ್ ಕಾಮಿಡಿ ಸಿನಿಮಾ ಇರಂಡಂ ಕುತ್ತು ಟ್ರೈಲರ್‌ಗೆ ತಮಿಳಿನ ಪ್ರಮುಖ ನಿರ್ದೇಶಕ ಭರತಿರಾಜ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೊರೋನಾ ನಡುವೆ ನೆಮ್ಮದಿಯ ಸುದ್ದಿ ಕೊಟ್ಟ RBI ಗವರ್ನರ್!...

ಕೊರೋನಾ ವೈರಸ್‌ನಿಂದಾಗಿ ದೇಶದ ಆರ್ಥಿಕತೆಗೆ ಎದುರಾಗಿದ್ದ ಕೆಟ್ಟಗಳಿಗೆ ಬಹುತೇಕ ಮುಗಿದಂತೆ ಕಾಣುತ್ತಿದೆ. ಕೊರೋನಾ ಪೂರ್ವದಲ್ಲಿದ್ದ ಅಭಿವೃದ್ಧಿ ದರದ ಕಡೆಗೆ ಆರ್ಥಿಕತೆ ನಿಧಾನವಾಗಿ ಮರಳಬಹುದು ಎಂಬ ಆಶಾವಾದವನ್ನು ನಾವು ಇಟ್ಟುಕೊಳ್ಳಬಹುದು ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಭರವಸೆ ವ್ಯಕ್ತಪಡಿಸಿದೆ.

ಮುಂದುವರಿದ ಲಾಕ್‌ಡೌನ್ ಹೀರೋ ಸೋನು ಸೂದ್ ಸಮಾಜ ಮುಖಿ ಕಾರ್ಯ!...

ಲಾಕ್‌ಡೌನ್ ವೇಳೆ ಸಾವಿರಾರು ಕಾರ್ಮಿಕರಿಗೆ ನೆರವಾದ, ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ಬಾಲಿವುಡ್ ನಟ ಇದೀಗ ಮತ್ತೊಂದು ಕಾರ್ಯಕ್ಕೆ ಕೈಹಾಕಿದ್ದಾರೆ.

ಚೀನಾಗೆ ಬಿಜೆಪಿ ನಾಯಕನ ತಿರುಗೇಟು; ಎಂಬಸ್ಸಿ ಮುಂದೆ ತೈವಾನ್ ರಾಷ್ಟೀಯ ದಿನಾಚರಣೆ ಪೋಸ್ಟರ್!...

ತೈವಾನ್ ರಾಷ್ಟ್ರೀಯ ದಿನಾಚರಣೆ ಇದೀಗ ಚೀನಾ ಕಣ್ಣು ಕಂಪಾಗಿಸಿದೆ. ಭಾರತೀಯ ಮಾಧ್ಯಮದಲ್ಲಿ ತೈವಾನ್ ರಾಷ್ಟ್ರೀಯ ದಿನಾಚರಣೆ ಜಾಹೀರಾತು ನೋಡಿ ವಾರ್ನಿಂಗ್ ನೀಡಿದ ಚೀನಾಗೆ ಇದೀಗ ಬಿಜೆಪಿ ನಾಯಕ ತಿರುಗೇಟು ನೀಡಿದ್ದಾರೆ. 

click me!