ಅಮೂಲ್ಯ ಬಳಿಕ ಮತ್ತೊಬ್ಬಳ ಪಾಕ್ ಪ್ರೀತಿ, ರಶ್ಮಿಕಾಗೆ ಟ್ರೋಲ್ ಫಜೀತಿ; ಫೆ.21ರ ಟಾಪ್ 10 ಸುದ್ದಿ!

By Suvarna News  |  First Published Feb 21, 2020, 5:00 PM IST

ಶಿವರಾತ್ರಿ ದಿನ ಶಿವನಾಮ ಸ್ಮರಣೆ ಬದಲು ಪಾಕಿಸ್ತಾನ ಪ್ರೀತಿ ಹೆಚ್ಚಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ ಇದೀಗ ಟೌನ್‌ಹಾಲ್ ಬಳಿ ದೇಶದ್ರೋಹಿ ಕೆಲಸ ಆಗಿದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸ್ಥಾನಕ್ಕೆ ಚುನಾವಣೆ ನಡೆಸಲು ಆಗ್ರಹ ಕೇಳಿ ಬರುತ್ತಿದೆ. ಭಾರತ-ನ್ಯೂಜಿಲೆಂಡ್ ಟೆಸ್ಟ್, ಮತ್ತೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ ಸೇರಿದಂತೆ ಫೆಬ್ರವರಿ 21ರ ಟಾಪ್ 10 ಸುದ್ದಿ ಇಲ್ಲಿವೆ.


ಶಿವರಾತ್ರಿ ವಿಶೇಷ: ಶಿವ...ಶಿವ...ಎಂದ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ

Tap to resize

Latest Videos

undefined

ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನಕ್ಕೆ ರಾಜ್ಯ ರೈಲ್ವೇ ಖಾತೆ ಸಚಿವ ಸುರೇಶ್ ಅಂಗಡಿ ಹಾಗೂ ಅವರ ಪತ್ನಿ ಮಂಗಳಾ ಅಂಗಡಿ ಜೊತೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

ನಡೆಯಲಿಲ್ಲ 'ಆ್ಯಕ್ಷನ್' ಡ್ರಾಮ; ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯೇ ವಾಸಸ್ಥಾನ!

ಭಯೋತ್ಪಾದನೆಗೆ ಹಣಾಕಾಸಿನ ನೆರವನ್ನು ನಿಯಂತ್ರಿಸುವಲ್ಲಿ ವಿಫಲವಾದ ಪಾಕಿಸ್ತಾನವನ್ನು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್‌ ಫೋರ್ಸ್ ಗ್ರೇ ಪಟ್ಟಿಯಲ್ಲೇ ಇಟ್ಟಿದೆ.  ನಾಲ್ಕು ತಿಂಗಳ ಬಳಿಕ ನಡೆದ ಪರಿಶೀಲನಾ ಸಭೆಯ ನಂತರ ಜಾಗತಿಕ ಕಾವಲು ಪಡೆ FATF ಈ ನಿರ್ಣಯವನ್ನು ತೆಗೆದುಕೊಂಡಿದೆ.

ಭಾರತಕ್ಕೆ ಟ್ರಂಪ್ ಭೇಟಿ; ಸ್ಲಂ ಕಾಣದಂತೆ 6 ಕೋಟಿ ವೆಚ್ಚದಲ್ಲಿ ತಡೆಗೋಡೆ

ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ವಿಶ್ವದ ದೊಡ್ಡಣ್ಣ ಯುಎಸ್‌ ಅಧ್ಯಕ್ಷರ ಆಗಮನ ಎಂದ ಮೇಲೆ ವಿಶೇಷ ಭದ್ರತಾ ವ್ಯವಸ್ಥೆ ಇರಲೇಬೇಕು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಟ್ರಂಪ್‌ ಸೆಕ್ಯುರಿಟಿ ವಿವರ ಬಹಿರಂಗವಾಗಿದೆ.

ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ನಾಯಕರು ಸಡ್ಡು! ನಾಯಕತ್ವಕ್ಕೆ ಚುನಾವಣೆ ನಡೆಸಿ

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಶೂನ್ಯ ಸಂಪಾದಿಸುವ ಮೂಲಕ ಹೀನಾಯ ಮುಖಭಂಗ ಅನುಭವಿಸಿರುವ ಕಾಂಗ್ರೆಸ್ಸಿನಲ್ಲಿ ಕಾಣಿಸಿಕೊಂಡಿರುವ ಸಿಟ್ಟು ಮತ್ತೊಂದು ಮಜಲು ತಲುಪಿದೆ. 

ಮೊದಲ ದಿನ ಮಳೆಯಾಟ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪರದಾಟ..!

ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಮಳೆ ಹಾಗೂ ಕಿವೀಸ್ ವೇಗಿಗಳು ಮೇಲುಗೈ ಸಾಧಿಸಿದರೆ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪರದಾಡುವಂತೆ ಮಾಡಿದರು. ಮೊದಲ ದಿನದಾಟದಂತ್ಯಕ್ಕೆ 55 ಓವರ್‌ಗಳಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿದೆ.

ಕನ್ನಡತಿಯಾಗಿ ದರ್ಶನ್ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡದ್ದು ತಪ್ಪಾ

'ಯಜಮಾನ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ತರೆ ಹಂಚಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ. ಆದರೆ, ಇದೀಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ರಶ್ಮಿಕಾ ದರ್ಶನ್ ಹುಟ್ಟಿದಬ್ಬಕ್ಕೆ ವಿಶ್ ಮಾಡಿಲ್ಲ. ಆದರೆ, ಅದೇ ದಿನ ಹಾಟ್ ಫೋಟೋ ಶೇರ್ ಮಾಡಿ ಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ರಶ್ಮಿಕಾ ಕಾಲೆಳೆದಿದ್ದಾರೆ. ಇದಕ್ಕೆ ಅರ್ಥವಿದ್ಯಾ?

ಪಾಕ್‌ ಜಿಂದಾಬಾದ್’ ಎಂದ ಆರುದ್ರಾ..! ಅವನಲ್ಲ ಅವಳು..!

ಗುರುವಾರ ಅಮೂಲ್ಯ ಲಿಯೋನ ಪಾಕಿಸ್ತಾನ ಪರ ಘೋಷಣೆ ಕೂಗಿ ಜನರ ಆಕ್ರೋಶಕ್ಕೆ ಎಡೆಯಾದ ಬೆನ್ನಲ್ಲೇ ಇದೀಗ ಬೆಂಗಳೂರಿನ ಯುವತಿಯೊಬ್ಬಳು ಪಾಕ್‌ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಆರುದ್ರಾ ಕುರಿತ ಮಾಹಿತಿ ಬಹಿರಂಗವಾಗಿದೆ.

'ತುಕ್ಡೆ ತುಕ್ಡೆ ಗ್ಯಾಂಗನ್ನು ಅವತ್ತೇ ಮಟ್ಟ ಹಾಕಿದ್ರೆ ಈ ಸ್ಥಿತಿ ಬರ್ತಾ ಇರಲಿಲ್ಲ'

ಫ್ರೀಡಂಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿರುವ ಪ್ರಕರಣ ಹಾಗೂ ಟೌನ್ ಹಾಲ್ ಮುಂದೆ ಇನ್ನೊರ್ವ ಹುಡುಗಿ ಕೂಡಾ ಪಾಕ್ ಪರ ಘೋಷಣೆ ಕೂಗಿರುವ ಘಟನೆಗೆ ಸಂಬಂಧಪಟ್ಟಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. 

'ಅದರ' ಚಟ ಇದ್ದವರಿಗೆ ಶಾಕ್; ಟಿಕ್‌ಟಾಕ್‌ನಲ್ಲಿ ಇನ್ಮುಂದೆ ಪೋಲಿ ವರ್ತನೆಗೆ ಕಡಿವಾಣ

ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳ ಪೈಕಿ ಅತೀ ಹೆಚ್ಚು ವಿವಾದ ಸೃಷ್ಟಿಸಿವುದು  ಟಿಕ್‌ಟಾಕ್ ಎಂದರೆ ತಪ್ಪಾಗಲಾರದು. ಟಿಕ್‌ಟಾಕನ್ನು ಬ್ಯಾನ್ ಮಾಡ್ಬೇಕು ಎಂಬ ವಿಚಾರ ನ್ಯಾಯಾಲಯದ ಮೆಟ್ಟಿಲೇರಿರುವುದು ಇದಕ್ಕೆ ಸಾಕ್ಷಿ.

ಪಿಯಾಗ್ಗಿಯೋ ಎಲೆಕ್ಟ್ರಿಕ್ ಆಪೆ ರಿಕ್ಷಾ ಬಿಡುಗಡೆ, 80KM ಮೈಲೇಜ್!

ಆಟೋ ರಿಕ್ಷಾ ವಿಭಾಗದಲ್ಲಿ ಜನಪ್ರಿಯವಾಗಿರುವ ಪಿಯಾಗ್ಗಿಯೋ ಆಪೆ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ.  ಪಿಯಾಗ್ಗಿಯೋ ಇಂಡಿಯಾ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 70 ರಿಂದ 80 ಕಿ.ಮೀ ಮೈಲೇಜ್ ನೀಡಲಿದೆ.
 

click me!