ಜಗ್ಗೇಶ್ ಪುತ್ರ ಯತಿರಾಜ್‌ ಕಾರು ಅಪಘಾತ, ಕಡಿಮೆಯಾಯ್ತು 3ನೇ ಅಲೆ ಆತಂಕ?ಜು.1ರ ಟಾಪ್ 10 ಸುದ್ದಿ!

By Suvarna News  |  First Published Jul 1, 2021, 4:44 PM IST

ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜು ಕಾರು ಅಪಘಾತಕ್ಕೀಡಾಗಿದೆ. ಇನ್ನು ಲಸಿಕೆ ಅಭಿಯಾನ ಕುರಿತು ಕೇಳಿಬಂದ  ಆರೋಪಗಳಿದೆ ಆರೋಗ್ಯ ಸಚಿವರು ತಿರುಗೇಟು ನೀಡಿದ್ದಾರೆ. ವೈದ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ದೇಶದ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇಂದಿನಿಂದ ಬ್ಯಾಂಕಿಂಗ್, ಹಣಕಾಸು ಸೇವೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. 3ನೇ ಅಲೆ ನಡುವೆ ನೆಮ್ಮದಿ ತಂದ ಅಧ್ಯಯನ ವರದಿ, ರಶ್ಮಿಕಾ ಮಂದಣ್ಣ ಸೀಕ್ರೆಟ್ ಸೇರಿದಂತೆ ಜುಲೈ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಕೇಂದ್ರ ಲಸಿಕೆ ಕೊಟ್ಟ ಬಳಿಕ ಅಭಿಯಾನಕ್ಕೆ ವೇಗ, ರಾಜ್ಯಗಳ ಬಳಿ ಯೋಜನೆ ಕೊರತೆ'!...

Tap to resize

Latest Videos

ದೇಶದಲ್ಲಿ ನಡೆಯುತ್ತಿರುವ ಕೊರೋನಾ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಪರ, ವಿರೋಧಗಳ ಮಾತು ಸದ್ದು ಮಾಡುತ್ತಲೇ ಇವೆ. ಹೀಗಿರುವಾಗ ಈ ಅಭಿಯಾನದ ವಿರುದ್ಧ ಕಿಡಿಕಾರುವ ನಾಯಕರಿಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿರುಗೇಟು ನೀಡಿದ್ದಾರೆ.

ಹೈದರಾಬಾದ್‌ನಲ್ಲಿ NIA ಬಲೆಗೆ ಬಿದ್ದ ಇಬ್ಬರು ಲಷ್ಕರ್‌ ಉಗ್ರರು!...

ಬಿಹಾರದ ದರ್‌ಭಂಗಾದಲ್ಲಿ ರೈಲ್ವೇ ನಿಲ್ದಾಣದ ಬಳಿ ಜೂ. 17 ರಂದು ಸಂಭವಿಸಿದ್ದ ಪಾರ್ಸೆಲ್ ಬ್ಲಾಸ್ಟ್‌ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬಹುದೊಡ್ಡ ಯಶಸ್ಸು ಸಿಕ್ಕಿದೆ. ಅಧಿಕಾರಿಗಳು ಹೈದರಾಬಾದ್‌ನಲ್ಲಿ ಅಡಗಿದ್ದ ಲಷ್ಕರ್‌-ಏ-ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದೆ. ಈ ಉಗ್ರರು ಭಾರತದ ಅನೇಕ ಕಡೆ ಸ್ಫೋಟ ನಡೆಸಲು ಸಂಚು ರೂಪಿಸುತ್ತಿದ್ದರು.

ಮೋದಿ ಯಾಕೆ ಕ್ಲೀನ್ ಶೇವ್ ಮಾಡಲ್ಲ ? ಇಲ್ಲಿದೆ ಆನ್ಸರ್...

ಪ್ರಧಾನಿ ನರೇಂದ್ರ ಮೋದಿ ಕ್ಲೀನ್ ಶೇವ್ ಲುಕ್ ಹೇಗಿರಬಹುದು ? ಇಂಥಹದೊಂದು ಕುತೂಹಲ ನಿಮ್ಮಲ್ಲಿದ್ರೆ ಇಲ್ಲಿದೆ ಉತ್ತರ

ಡಾ. ಬಿಸಿ ರಾಯ್‌ ನೆನಪಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ!...

ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಈ ವರ್ಷ ಮತ್ತಷ್ಟುಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಕರ್ತವ್ಯ. ಅದಕ್ಕೆ ಕಾರಣ ಕಣ್ಣ ಮುಂದೆ ಇದೆ. ಕೋವಿಡ್‌ 19 ಕಾರಣದಿಂದ ಇಡೀ ಜಗತ್ತು ಒದ್ದಾಡುತ್ತಿರುವ ವೇಳೆಯಲ್ಲಿ ಎಲ್ಲರ ಪಾಲಿಗೂ ಒದಗಿ ಬಂದಿದ್ದು ವೈದ್ಯರೇ. ವೈದ್ಯರು ಮುಂದೆ ನಿಂತುಕೊಂಡು ಕೊರೋನಾ ವೈರಸ್ಸಿಗೆ ಎದೆಯೊಡ್ಡಿದರು. ಹಾಗಾಗಿ ಇಡೀ ವೈದ್ಯ ಸಮೂಹಕ್ಕೆ ಇಡೀ ಸಮಾಜ ಕೃತಜ್ಞರಾಗಿರಬೇಕು. ಈ ಜುಲೈ 1 ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮೀಸಲಾದರೆ ಅದೇ ಈ ದಿನದ ಸಾರ್ಥಕತೆ.

12 ವರ್ಷಕ್ಕೆ ಚೆಸ್‌ ಗ್ರ್ಯಾಂಡ್‌ ಮಾಸ್ಟರ್ ಆಗಿ ದಾಖಲೆ ನಿರ್ಮಿಸಿದ ಅಭಿಮನ್ಯು ಮಿಶ್ರಾ...

ಭಾರತೀಯ ಮೂಲದ ಅಮೆರಿಕದ ಯುವ ಚೆಸ್‌ ಪಟು ಅಭಿಮನ್ಯು ಮಿಶ್ರಾ ವಿಶ್ವದ ಅತಿ ಕಿರಿಯ ಚೆಸ್ಟ್ ಗ್ರ್ಯಾಂಡ್‌ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ 12 ವರ್ಷ, 4 ತಿಂಗಳು ಹಾಗೂ 25 ದಿನದ ಅಭಿಮನ್ಯು ಈ ದಾಖಲೆ ಬರೆದಿದ್ದಾರೆ. ಈ ಮೂಲಕ ಸರ್ಜೆ ಕರ್ಜಕಿನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಸರ್ಜೆ 2002ರಲ್ಲಿ 12 ವರ್ಷ 7 ತಿಂಗಳ ವಯಸ್ಸಿನಲ್ಲಿ ಚೆಸ್ ಗ್ರ್ಯಾಂಡ್‌ ಮಾಸ್ಟರ್ ಆಗಿದ್ದರು.

ಚಿಕ್ಕಬಳ್ಳಾಪುರ ಬಳಿ ಅಪಘಾತ; ಜಗ್ಗೇಶ್ ಪುತ್ರ ಯತಿರಾಜ್‌ ಕಾರು ನಜ್ಜುಗುಜ್ಜು...

ನವರಸ ನಾಯಕ ಜಗ್ಗೇಶ್ ಪುತ್ರನ ಕಾರು ಅಪಘಾತಕ್ಕೆ ಗುರಿಯಾಗಿದೆ. ನಿಯಂತ್ರಣ ತಪ್ಪಿದ ಐಷಾರಾಮಿ ಕಾರು ಮರಕ್ಕೆ ಗುದ್ದಿದೆ. ಅದೃಷ್ಟವಷಾತ್ ಯತಿರಾಜ್ ಅವರಿಗೆ ಗಂಭೀರ ಗಾಯಗಳಾಗಿಲ್ಲ. 

ದಿನಕ್ಕೆ ಎಷ್ಟು ಸಿಗರೇಟ್ ಸೇದುತ್ತಾರೆ ರಶ್ಮಿಕಾ ಮಂದಣ್ಣ? ನಟಿ ಹೇಳಿದ್ದೇನು ?...

ತ್ತೀಚಿಗೆ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾನ್ಸ್‌ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದರಲ್ಲಿ ಒಬ್ಬರು ರಶ್ಮಿಕಾಗೆ ದಿನಕ್ಕೆ ಎಷ್ಟು ಬಾರಿ ಸಿಗರೇಟ್‌ ಸೇದುತ್ತೀರಾ ಎಂದು ಕೇಳಿದ್ದಾರೆ.

ಟ್ವಿಟರ್ ಸ್ಥಳೀಯ ಕಾನೂನು ಪಾಲಿಸಲೇಬೇಕು: ಐಟಿ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ...

ಕೇಂದ್ರ ಸರ್ಕಾರ ಹಾಗೂ ಮೈಕ್ರೋಬ್ಲಾಗಿಂಗ್ ದೈತ್ಯ ಕಂಪನಿ ಟ್ವಿಟರ್ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ಡಿಜಿಟಲ್ ನಿಯಮಗಳ ಪಾಲನೆ ಸಂಬಂಧ ಈ ಸಂಘರ್ಷ ಉಂಟಾಗಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ ಅವರು ಟ್ವಿಟರ್‌ಗೆ ಎಚ್ಚರಿಕೆ ನೀಡಿದ್ದು, ಸ್ಥಳೀಯ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ.

ಇಂದಿನಿಂದ ಬ್ಯಾಂಕಿಂಗ್, ಹಣಕಾಸು ಸೇವೆಯಲ್ಲಿ ಮಹತ್ವದ ಬದಲಾವಣೆಗಳು!...

ಜು.1ರಿಂದ ಬ್ಯಾಂಕಿಂಗ್‌ ಹಾಗೂ ದಿನನಿತ್ಯದ ಸೇವೆಗಳಲ್ಲಿ ಕೆಲವೊಂದು ಬದಲಾವಣೆಗಳು ಆಗಲಿವೆ. ಬದಲಾವಣೆ ಆಗಲಿರುವ ಏಳು ಅಂಶಗಳು ಏನು ಎಂಬ ಮಾಹಿತಿ ಇಲ್ಲಿದೆ.

ಮೂರನೇ ಅಲೆ ಆತಂಕದ ಮಧ್ಯೆ ನೆಮ್ಮದಿ ಕೊಟ್ಟ ಅಧ್ಯಯನ ವರದಿ!...

ಮೂರನೇ ಅಲೆ ಆತಂಕದ ಮಧ್ಯೆ ಜನರಿಗೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ಹೌದು ಅಧ್ಯಯನದಲ್ಲಿ ನೆಮ್ಮದಿ ಕೊಡುವ ವಿಚಾರವೊಂದು ಹೊರ ಬಿದ್ದಿದೆ. 

click me!