ವೈದ್ಯರು ದೇವರ ಮತ್ತೊಂದು ರೂಪ, ಅವರ ಸುರಕ್ಷತೆಗೆ ಸರ್ಕಾರ ಬದ್ಧ: ಮೋದಿ

By Suvarna NewsFirst Published Jul 1, 2021, 4:26 PM IST
Highlights

* ವೈದ್ಯರ ದಿನದ ಅಂಗವಾಗಿ ಪ್ರಧಾನಿ ಮೋದಿ ಮಾತು

* ಕೊರೋನಾ ಕಾಲದಲ್ಲಿ ವೈದ್ಯರ ಸೇವೆ ಶ್ಲಾಘನೀಯ

* ಆರೋಗ್ಯ ಕ್ಷೇತ್ರ ಬಲಪಡಿಸುವತ್ತ ನಮ್ಮ ಮೊದಲ ಆದ್ಯತೆ ಇರಲಿದೆ 

ನವದೆಹಲಿ(ಜು.01): ಇಂದು ಜುಲೈ 1 ರಾಷ್ಟ್ರೀಯ ವೈದ್ಯರ ದಿನ, ಹೀಗಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನಾ ಬಿಕ್ಕಟ್ಟು ಸೇರಿದಂತೆ ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪರಿವೆ ಇಲ್ಲದೇ ನಿದ್ದೆಗೆಟ್ಟು ಶ್ರಮಿಸಿದ ವೈದ್ಯರ ಸೇವೆಗೆ ಭೇಷ್ ಎಂದಿದ್ದಾರೆ.

ನಮ್ಮ ಜೀವ, ನೀವು ಉಳಿಸಿದ ಸಂಪತ್ತು: ಜೀವರಕ್ಷಕ ವೈದ್ಯರೇ ನಿಮಗೆ ಸಲಾಮ್!

 ವೈದ್ಯರ ದಿನದ ಅಂಗವಾಗಿ ಐಎಂಎ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶದ ವೈದ್ಯರನ್ನುದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ ವೈದ್ಯರ ಶ್ರಮದಿಂದ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಲಕ್ಷಾಂತರ ಮಂದಿಯ ಜೀವ ಉಳಿದಿದೆ. ಕೊತರೋನಾ ವಿಶ‍್ವದಾದ್ಯಂತ ಹರಡಿದಾಗಿನಿಂದ ನಿರಂತರವಾಗಿ ವೈದ್ಯರು ಜನರ ಸೇವೆ ಮಾಡುತ್ತಿದ್ದಾರೆ.  ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ದೇವರಂತೆ ವೈದ್ಯ ಸಮೂಹ ಮಾಡಿದೆ. ಅವರ ಈ ಸೇವೆಯನ್ನು ಪರಿಗಣಿಸಿ ಅವರ ರಕ್ಷಣೆಗೆ ಸರ್ಕಾರ ಯಾವತ್ತೂ ಬದ್ಧವಾಗಿದೆ ಎಂದಿದ್ದಾರೆ. ದೇಶದಲ್ಲಿ ಏಳು ವರ್ಷಗಳಲ್ಲಿ 15 ಏಮ್ಸ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ದೇಶದ ಹಲವಡೆಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸುವುದರ ಮೂಲಕ ಜನರಿಗೆ ಅನುಕೂಲವಾಗಿದೆ ಎಂದಿದ್ದಾರೆ.

ದೇಶದಾದ್ಯಂತ ಆರೋಗ್ಯ ಕ್ಷೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 50 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅಲ್ಲದೇ, ವೈದ್ಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ. ವೈದ್ಯರಿಗೆ ವಿಮಾ ಸೌಲಭ್ಯವನ್ನು ಕೂಡ ನೀಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಡಾ. ಬಿಸಿ ರಾಯ್‌ ನೆನಪಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ!

ಇನ್ನು ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಕೊರೋನಾದಿಂದ ಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಭಯ ಭೀತಿಯಿಲ್ಲದೇ ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ವೈದ್ಯರನ್ನು ಭಾರತೀಯರೆಲ್ಲರೂ ದೇವರೆಂದು ಪರಿಗಣಿಸಿದ್ದಾರೆ. ವೈದ್ಯರೆಂದರೇ, ಪುನರ್ ಜನ್ಮ ನೀಡುವ ದೇವರು. ಕೊರೋನಾ ಸೇವೆಯಲ್ಲಿ ನಿರತರಾಗಿದ್ದ ನೂರಾರು ಮಂದಿ ವೈದ್ಯರನ್ನು ದೇಶ ಕಳೆದುಕೊಂಡಿದೆ. ಅವರೆಲ್ಲರ ಸೇವೆಗೆ ಭಾರತ ಚಿರಋಣಿ. ಅವರ ಸಾವಿಗೆ ಭಾರತದ ಜನರ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದಿದ್ದಾರೆ.

click me!