ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಚಿತ್ರದ ಶೂಟಿಂಗ್ ವೇಳೆ ಡ್ರೋಣ್ ಹಾಳಾದ ಹಿನ್ನೆಲೆಯಲ್ಲಿ ಡ್ರೋಣ್ ಕ್ಯಾಮೆರಾಮೆನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿತ್ರತಂಡದಿಂದ ನಷ್ಟ ಪರಿಹಾರ ಸಿಗದೇ ಇದ್ದದ್ದು ಮತ್ತು ಪೊಲೀಸ್ ದೂರು ನಿರ್ಲಕ್ಷ್ಯ ಘಟನೆಗೆ ಕಾರಣ ಎನ್ನಲಾಗಿದೆ.
ಬೆಂಗಳೂರು (ನ.30): ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾದ ಶೂಟಿಂಗ್‌ಗೆ ಡ್ರೋಣ್ ಕ್ಯಾಮೆರಾ ಬಾಡಿಗೆ ಪಡೆದುಕೊಂದು ಅದನ್ನು ಹಾಳು ಮಾಡಿದ್ದಲ್ಲದೆ, ನಷ್ಟ ತುಂಬಿಕೊಡಲು ಚಿತ್ರತಂಡ ಒಪ್ಪಿಲ್ಲ. ಇದರಿಂದ ನೊಂದ ಡ್ರೋಣ್ ಕ್ಯಾಮೆರಾಮೆನ್ ಸಂತೋಷ್ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನಡೆದಿದೆ. ಸಿನಿಮಾ ಶೂಟಿಂಗ್‌ಗೆ ಬಳಸಲಾಗಿದ್ದ ಡ್ರೋಣ್ ವಿಂಡ್ ಮಿಲ್‌ಗೆ ತಾಗಿತ್ತು. ಇದರಿಂದ ಕ್ಯಾಮೆರಾ ಪೀಸ್ ಪೀಸ್ ಆಗಿದೆ. ಆಗಿರುವ ನಷ್ಟ ತುಂಬಿಕೊಡುವಂತೆ ಮನವಿಗೆ ಚಿತ್ರತಂಡ ಸ್ಪಂದಿಸಿಲ್ಲ. ಇನ್ನು ಈ ಬಗ್ಗೆ ಗಮನ ನೀಡಬೇಕಾದ ಕನ್ನಡ ಚಿತ್ರರಂಗ ಮಾತ್ರ ಈವರೆಗೂ, ಈ ಕೇಸ್ ಏನಾಯಿತು, ಯಾರ ತಪ್ಪು-ಸರಿ ಅನ್ನೋದನ್ನೂ ನೋಡುವ ಗೋಜಿಗೆ ಹೋಗಿಲ್ಲ. ಜಮೀರ್ ಅಹ್ಮದ್ ಖಾನ್ ಪುತ್ರನ ನಡೆಗೆ ನೊಂದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಮಾಗಡಿ ರೋಡ್ ಪೊಲೀಸ್ ಠಾಣೆಗೆ ಸಂತೋಷ್ ಅವರ ಅಕ್ಕ ದೂರು ನೀಡಲು ಹೋದಾಗ, ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸದೇ ವಾಪಾಸ್ ಕಳಿಸಿದ್ದಾರೆ.
ಸಚಿವ ಜಮೀರ್ ಪುತ್ರ ನಟನೆಯ ಕಲ್ಟ್ ಚಿತ್ರತಂಡದ ಮೇಲೆ ವಂಚನೆ ಆರೋಪ ಹೊರಿಸಲಾಗಿದ್ದು, ಡ್ರೋನ್ ಟೆಕ್ನಿಷಿಯನ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದು ವರದಿಯಾಗಿದೆ. ಸಿನಿಮಾದ ನಾಯಕ ಹಾಗೂ ನಿರ್ಮಾಪಕ ಜೈದ್ ಖಾನ್ , ನಿರ್ದೇಶಕ ಅನಿಲ್ ವಿರುದ್ಧ ಆರೋಪ ಮಾಡಲಾಗಿದೆ.
ನ.25 ರಂದು ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರತಂಡ ಶೂಟಿಂಗ್ ನಡೆಸಿತ್ತು. ಇದಕ್ಕೆ ಸಂತೋಷ್ ಡ್ರೋನ್ ಟೆಕ್ನಿಷಿಯನ್ ಆಗಿದ್ದರು. ಸ್ವಂತ ಡ್ರೋನ್ ಹೊಂದಿರುವ ಸಂತೋಷ್ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ದಿನಕ್ಕೆ 25 ಸಾವಿರ ಚಾರ್ಜ್ ಮಾಡಿ ಸಂತೋಷ್ ಶೂಟಿಂಗ್ ಮಾಡುತ್ತಿದ್ದರು. 25 ಲಕ್ಷ ಸಾಲ ಮಾಡಿ ಸಂತೋಷ್ ಡ್ರೋಣ್ ಖರೀದಿಸಿದ್ದರು.
ರಾಧಿಕಾ ಕರಿಯ ಅಂದ್ರೆ ಖುಷಿ, ಜಮೀರ್ ಹೇಳಿದ್ರೆ ಟೀಕೆ ಯಾಕೆ ಎಂದ ತೇಜಸ್ವಿನಿ ಗೌಡ
ರಿಸ್ಕ್ ಎಂದು ಎಚ್ಚರಿಸಿದ್ದ ಸಂತೋಷ್: ಚಿತ್ರದುರ್ಗದಲ್ಲಿ ಡ್ರೋಣ್ ಶೂಟಿಂಗ್ ಮಾಡೋದು ರಿಸ್ಕಿ ಕೆಲಸ ಎಂದು ಸಂತೋಷ್ ಮೊದಲೇ ಎಚ್ಚರಿಕೆ ನೀಡಿದ್ದರು. ಚಿತ್ರದುರ್ಗದ ಹಲೆವೆಡೆ ವಿಂಡ್ ಪವರ್‌ನ ಬೃಹತ್ ಫ್ಯಾನ್‌ಗಳಿವೆ ಎಂದಿದ್ದರು. ಆದರೆ, ಶೂಟಿಂಗ್ ಮಾಡಲೇಬೇಕು ಎಂದು ನಿರ್ದೇಶಕ ಅನಿಲ್ ಒತ್ತಾಯ ಮಾಡಿದ್ದರು ಎನ್ನಲಾಗಿದೆ. ಶೂಟಿಂಗ್ ವೇಳೆ ಡ್ರೋಣ್, ವಿಂಡ್ ಫ್ಯಾನ್‌ಗೆ ತಗುಲಿ ಪುಡಿ ಪುಡಿಯಾಗಿದೆ. ಸಂತೋಷ್‌ಗೆ ಸಿನಿಮಾ ತಂಡ ಕೊಂಚವೂ ನಷ್ಟ ಕಟ್ಟಿಕೊಟ್ಟಿಲ್ಲ. ಈ ಸಿನಿಮಾಗೆ ಸ್ವತಃ ಜೈದ್, ನಿರ್ಮಾಪಕರಾಗಿದ್ದಾರೆ.
‘ಕರಿಯ’ ಹೇಳಿಕೆ ಸಮಸ್ಯೆ: ಸಚಿವ ಜಮೀರ್ ಅಹಮದ್ ಬಚಾವ್
ಜೈದ್ ಬಳಿ ನೆರವು ಟೆಕ್ನಿಶಿಯನ್ ಸಂತೋಷ್ ನೆರವು ಕೇಳಿದ್ದರು. ಈ ವೇಳೆ ಜೈದ್ವೈಟ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. 1.5 ಲಕ್ಷದ ಮೆಮೊರಿ ಕಾರ್ಡ್‌ಅನ್ನೂ ಅವರು ಕಿತ್ತುಕೊಂಡಿದ್ದಾರೆ. ಇದರಿಂದ ನೊಂದಿದ್ದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇನ್ನು ಫಿಲ್ಮ್ ಚೇಂಬರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫಿಲ್ಮ್ ಚೇಂಬರ್ ನಲ್ಲಿ ಡ್ರೋನ್ ಟೆಕ್ನಿಷಿಯನ್ ಗಳಿಗೆ ಸದಸ್ಯತ್ವ ಇಲ್ಲ. ಇದರಿಂದ ಅಸಹಾಯಕನಾಗಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಸಂತೋಷ್ ಡಿಸ್ಚಾರ್ಜ್ ಆಗಿದ್ದಾರೆ.
ವಿಚಾರಣೆಗೆ ಬರುವಂತೆ ನೋಟಿಸ್: ಮಾಧ್ಯಮಗಳಲ್ಲಿ ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಮಾಗಡಿ ರೋಡ್ ಪೊಲೀಸ್ ಠಾಣೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ವಿಚಾರಣೆಗೆ ಬರುವಂತೆ ಜೈದ್ ಖಾನ್‌ಗೆ ನೋಟಿಸ್ ನೀಡಿದ್ದಾರೆ.