
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕ್ವಾಟ್ಲೆ ಕಿಚನ್ ಹಾಸ್ಯದ ರಸದೌತಣ ಉಣಬಡಿಸುತ್ತಿದೆ. ಇದರಲ್ಲಿ ಬಹಳ ಬೇಗ ಅಡುಗೆ ಮಾಡಿ ಮುಗಿಸಲು ಹೊರಟ ಪಾಕಪ್ರವೀಣರಿಗೆ ಕ್ವಾಟ್ಲೆ ಸಹಾಯಕರು ಅಡ್ಡಗಾಲಾಗಿ ನಿಲ್ಲುತ್ತಾರೆ. ಟಾರ್ಚರ್ ಕೊಡಲೆಂದೇ ಬಂದ ಕ್ವಾಟ್ಲೆಗಳು ಸ್ವತಃ ಜೋಕರ್‌ಗಳಾಗುವ ಪ್ರಸಂಗ ಕೂಡ ಇರುತ್ತದೆ. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಈ ಶೋನಲ್ಲಿ ಕುಕ್‌ಗಳು ಎಲಿಮಿನೇಟ್ ಆಗುತ್ತಾರೆ. ಆದರೆ ಕ್ವಾಟ್ಲೆಗಳು ಎಲಿಮಿನೇಟ್ ಆಗುವುದಿಲ್ಲ. ಈ ಷೋನಲ್ಲಿ ಪ್ರತಿ ವಾರವೂ ಕುಕ್ ಮತ್ತು ಕ್ವಾಟ್ಲೆಗಳ ಜೋಡಿ ಬದಲಾಗುತ್ತಲೇ ಇರುತ್ತದೆ. . ಒಳ್ಳೆಯ ಸಹಾಯಕ ಬರಲಿ ಎಂದು ಕಾಯುತ್ತಿರುವ ಕುಕ್‌ಗಳಿಗೆ ಒಮ್ಮೆ ಅಡುಗೆ ಮನೆಯ ಕಡೆ ತಿರುಗಿಯೂ ನೋಡದ, ತರಕಾರಿಗಳನ್ನು ಗುರುತಿಸಲೂ ಬಾರದ ಕ್ವಾಟ್ಲೆ ಸಹಾಯಕರು ಸಿಗುತ್ತಾರೆ. ಇದರಿಂದ ಉಂಟಾಗುವ ಕಾಮಿಡಿಯಿಂದ ವೀಕ್ಷಕರಿಗೆ ಸಖತ್ ಮನರಂಜನೆ ಸಿಗುತ್ತದೆ. ನಟಿ ಶ್ರುತಿ ಮತ್ತು ಶೆಫ್ ಕೌಶಿಕ್ ಅವರು ‘ಕ್ವಾಟ್ಲೆ ಕಿಚನ್’ ತೀರ್ಪುಗಾರರಾಗಿರುತ್ತಾರೆ. ಈ ಕಾರ್ಯಕ್ರಮವನ್ನು ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ನಡೆಸಿಕೊಡುತ್ತಿದ್ದಾರೆ.
ಇದೀಗ ಈ ಸ್ಪರ್ಧೆಯಲ್ಲಿ ಕುತೂಹಲದ ಟಾಸ್ಕ್ ನೀಡಲಾಗಿದೆ. ಇದರಲ್ಲಿ ನೂರು ಜನ್ಮಕೂ ಸೀರಿಯಲ್ ಖ್ಯಾತಿಯ ಶಿಲ್ಪಾ ಕಾಮತ್ ಹಾಗೂ ವಧು ಸೀರಿಯಲ್ ಖ್ಯಾತಿಯ ಸೋನಿ ಮುಲೇವಾ ನಟಿಯರು ಭಾಗವಹಿಸಿದ್ದಾರೆ. ಇದರಲ್ಲಿ ಇರುವ ಟಾಸ್ಕ್ ಏನೆಂದರೆ, ನಾಲ್ಕು ವಸ್ತುಗಳು ಇರುವ ಫೋಟೋಗಳನ್ನು ನೀಡಲಾಗಿದೆ. ಯಾವ ವಸ್ತುವನ್ನು ಅನೌನ್ಸ್ ಮಾಡ್ತಾರೋ ಆ ವಸ್ತುವನ್ನು ಮುಟ್ಟದೇ ಬೇರೆಯದ್ದನ್ನು ಮುಟ್ಟಬೇಕು ಅಷ್ಟೇ. ಎಷ್ಟು ಸಿಂಪಲ್ ಎನ್ನಿಸುತ್ತದೆ ಈ ಟಾಸ್ಕ್. ಆದರೆ ಆಟ ಆಡಿದರೇನೇ ತಿಳಿಯುತ್ತದೆ, ಇದು ಎಷ್ಟು ಕಷ್ಟ ಎನ್ನುವುದು. ಇದರಲ್ಲಿ ರೊಟ್ಟಿ, ಕಬಾಬ್, ಮುದ್ದೆ, ಬಿರಿಯಾನಿ ನಾಲ್ಕು ಚಿತ್ರಗಳು ಇವೆ. ಇದಲ್ಲಿ ನಟಿ ಸೋನಿ 3 ಅಂಕ ಪಡೆದುಕೊಂಡರೆ, ನಟಿ ಶಿಲ್ಪಾ 0 ಅಂಕ ಪಡೆದುಕೊಂಡಿದ್ದಾರೆ. ಇದೊಂದು ರೀತಿಯ ಮಜಾ ಆಟವಾಗಿದ್ದು, ನಟಿಯರ ಜೊತೆ ನೀವೂ ಟ್ರೈ ಮಾಡಬಹುದು. ಮನೆಯಲ್ಲಿ ಇದನ್ನು ಟ್ರೈ ಮಾಡಿ ಎಷ್ಟು ಅಂಕ ಗಳಿಸುವಿರಿ ಎನ್ನುವುದನ್ನು ನೋಡಬಹುದಾಗಿದೆ.
ಇನ್ನು ನಟಿ ಶಿಲ್ಪಾ ಕುರಿತು ಹೇಳುವುದಾದರೆ, 'ನೂರು ಜನ್ಮಕೂ' ಧಾರಾವಾಹಿಯಲ್ಲಿ ಮೈತ್ರಿಯಾಗಿ ಅಭಿನಯಿಸುತ್ತಿದ್ದಾರೆ. ಕರಾವಳಿ ಮೂಲದ ಇವರು, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕಿರುಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ನಂತರ ನಟಿಸಿದ್ದು ಸಿನಿಮಾದಲ್ಲಿ. 'ರಂಗಸ್ಥಳ' ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಮೋಡಿ ಮಾಡಿದ ಶಿಲ್ಪಾ ಕಾಮತ್ ನಂತರ ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. 'ನೂರು ಜನ್ಮಕೂ' ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಕಳೆದ ವರ್ಷ ಅಂದರೆ 2023 ರಲ್ಲಿ 'ಮಿಸ್ ಮಂಗಳೂರು' ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಲ್ಪಾ ಕಾಮತ್ ರನ್ನರ್ ಅಪ್ ಆಗಿದ್ದರು. ಎಂಕಾಂ ಪದವಿಯ ಬಳಿಕ ಒಂದಷ್ಟು ಸಮಯಗಳ ಕಾಲ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದ ಶಿಲ್ಪಾ ಕಾಮತ್ ತದ ನಂತರ ಒಂದಷ್ಟು ಸಮಯಗಳ ಕಾಲ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರು.
ಇನ್ನು ನಟಿ ಸೋನಿ ಕುರಿತು ಹೇಳುವುದಾದರೆ, ಅವರು ಮೂಲತಃ ರಾಜಸ್ಥಾನದವರು. ಅಪ್ಪ ಹಾಗೂ ಅಜ್ಜ ಎಲ್ಲರೂ ಅಲ್ಲಿಯವರೇ. ಆದರೆ ಇವರು ಹುಟ್ಟಿರುವುದು ಮೈಸೂರಿನಲ್ಲಿ. ಚಿಕ್ಕವಯಸ್ಸಿನಿಂದಲೇ ಕನ್ನಡದ ನಟಿಯಾಗಬೇಕೆಂಬ ಆಸೆ ಇದ್ದುದರಿಂದ ಹೈಸ್ಕೂಲ್ನಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದರು. ಜರ್ನಲಿಸಂನಲ್ಲಿ ಬಿಎ ಪದವಿ ಪಡೆದಿದ್ದಾರೆ. ಥಿಯೇಟರ್ ಆರ್ಟ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ನಟಿ, ರಂಗಭೂಮಿ ಕಲಾವಿದೆ. ಇದಾಗಲೇ ನಟಿ, ಗಟ್ಟಿಮೇಳ ಸೀರಿಯಲ್ನಲ್ಲಿ ನಾಯಕ ವೇದಾಂತ್ ವಸಿಷ್ಠ ಮಾಜಿ ಲವರ್ ಆಗಿ ಕಾಣಿಸಿಕೊಂಡಿದ್ದರು. ಮುದ್ದುಮಣಿ ಸೀರಿಯಲ್‌ನಲ್ಲಿಯೂ ನಟಿಸಿದ್ದರು. ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿರುವ ಇವರು, ಜೆರ್ಸಿ ನಂ. 10 ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.